ಉಡುಪಿಯಲ್ಲಿ ಮತ್ತೆ ಶಾಕ್ 92 ಮಂದಿಗೆ ಕೊರೊನಾ ಸೋಂಕು

0

ಬೆಂಗಳೂರು : ಕಳೆದೊಂದು ವಾರದಿಂದಲೂ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಮಹಾಮಾರಿ ಇದೀಗ ಮತ್ತೆ ಕೃಷ್ಣನಗರಿ ಉಡುಪಿ, ಬಿಸಿಲೂರು ರಾಯಚೂರಿಗೆ ಶಾಕ್ ಕೊಟ್ಟಿದೆ. ಉಡುಪಿಯಲ್ಲಿಂದು ಒಂದೇ ದಿನ 92 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ ರಾಯಚೂರಿನಲ್ಲಿ 88 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿಂದು ಒಂದೇ ದಿನ 257 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 4320ಕ್ಕೆ ಏರಿಕೆಯಾಗಿದೆ.

ಉಡುಪಿ ಜಿಲ್ಲೆ ಕೊರೊನಾ ಮಹಾಮಾರಿಗೆ ತತ್ತರಿಸಿ ಹೋಗಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಕೂಡ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು 92 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 564ಕ್ಕೆ ಏರಿಕೆಯಾಗುವ ಮೂಲಕ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಉಡುಪಿ ರಾಜ್ಯದಲ್ಲಿಯೇ ಮತ್ತೆ ಅಗ್ರಸ್ಥಾನಕ್ಕೇರಿದೆ.

ಇನ್ನು ಬಿಸಿಲೂರು ರಾಯಚೂರಿಗೂ ಕೊರೊನಾ ವೈರಸ್ ಸೋಂಕು ಆತಂಕವನ್ನು ಮೂಡಿಸುತ್ತಿದೆ. ಇಂದು 88 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 356ಕ್ಕೆ ಏರಿಕೆಯಾಗಿದೆ. ಉಳಿದಂತೆ ಹಾಸನ ಜಿಲ್ಲೆಯಲ್ಲಿ 15, ಮಂಡ್ಯ 15, ದಾವಣಗೆರೆಯಲ್ಲಿ 13, ಬೆಳಗಾವಿ 12, ಬೆಂಗಳೂರು 9, ದಕ್ಷಿಣ ಕನ್ನಡ 4, ಚಿಕ್ಕಬಳ್ಳಾಪುರ 2, ವಿಜಯಪುರ, ತುಮಕೂರು, ಹಾವೇರಿ, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.

Leave A Reply

Your email address will not be published.