ಪಶ್ಚಿಮಘಟ್ಟದ ಜಲಪಾತಗಳ ಗ್ರಾಮ ಕೊಡಗಿನ ‘ಕರಿಕೆ’

0

ಕೊಡಗು : ಪಶ್ಚಿಮಘಟ್ಟ ಅಪೂರ್ವ ಸಸ್ಯ, ಪ್ರಾಣಿ ಸಂಕುಲಗಳ ಅಪೂರ್ವ ಗಣಿ. ಪಶ್ಚಿಮಘಟ್ಟದಲ್ಲಿ ವಿಶಿಷ್ಟ ಕಾಡುಗಳಿವೆ. ನೂರಾರು ಜಲಪಾತಗಳಿವೆ. ಒಂದೇ ಗ್ರಾಮದ ಸನಿಹದಲ್ಲಿ ಸುಮಾರು 34ಕ್ಕೂ ಅಧಿಕ ಜಲಪಾತಗಳು ಕಾಣಸಿಗುವ ಪ್ರದೇಶ ಕೊಡಗಿನಲ್ಲಿದೆ. ಅದುವೆ ಕೊಡಗಿನ ಗಡಿಯಂಚಿನ ಗ್ರಾಮ ಕರಿಕೆ.

ಕರಿಕೆ ಗ್ರಾಮ ಕೇರಳದ ಗಡಿಪ್ರದೇಶಕ್ಕೆ ಹೊಂದಿಕೊಂಡಿದೆ. ಸುಳ್ಯದಿಂದ ಸರಿ ಸುಮಾರು 28 ಕಿ.ಮೀ. ಹಾಗೂ ಭಾಗಮಂಡಲದಿಂದ 30 ಕಿ.ಮೀ. ದೂರದಲ್ಲಿರುವ ಈ ಗ್ರಾಮ ಪ್ರವಾಸಿಗರ ಪಾಲಿಗೆ ಭೂಲೋಕದ ಸ್ವರ್ಗ.

ಭಾಗಮಂಡಲದಿಂದ ಕರಿಕೆಗೆ ಸುಮಾರು 30 ಕಿ.ಮೀ. ದೂರವಿದೆ. ನಾವು ಭಾಗಮಂಡಲದಿಂದ ಕರಿಕೆಗೆ ಕಾವೇರಿ ವನ್ಯಜೀವಿ ಧಾಮದ ಒಳಗಡೆ ಇರುವ ರಸ್ತೆಯನ್ನು ಸುಮಾರು 28 ಕಿ.ಮೀ. ದಾಟಿ ಬರಬೇಕಾಗುತ್ತದೆ. ಈ ಸಂರ್ಭದಲ್ಲಿ ದಾರಿಯುದ್ದಕ್ಕೂ 10 ಕ್ಕೂ ಹೆಚ್ಚು ಜಲಪಾತಗಳು ರುದ್ರ ರಮಣೀಯ ನೋಟ ಎಂತಹ ಪ್ರವಾಸಿಗರನ್ನೂ ಮಂತ್ರಮುಗ್ದರನ್ನಾಗಿಸುತ್ತದೆ.

ಕರಿಕೆ ಜಲಪಾತಗಳಿಗೆ ಅಲ್ಲದೇ ಪಶ್ಚಿಮಘಟ್ಟ ವಿಶಿಷ್ಟ, ಅಪರೂಪದ ಮರಗಿಡಗಳಿಗೆ ಹೆಸರುವಾಸಿ. ಜೊತೆಗೆ ಇಲ್ಲಿರುವ ಜಲಪಾತಗಳು ಗ್ರಾಮಕ್ಕೆ ವಿಶಿಷ್ಟ ಮೆರುಗನ್ನು ನೀಡುತ್ತಿವೆ. ರಾಣಿ ಅಬ್ಬೆ ಇಲ್ಲಿ ಕಂಡುಬರುವ ಬಹುದೊಡ್ಡ ಜಲಪಾತ. ಇಂತಹ 34ಕ್ಕೂ ಅಧಿಕ ಜಲಪಾತಗಳಿಗೆ.

ಜೂನ್ ನಿಂದ ಹಿಡಿದು ಡಿಸೆಂಬರ್ ವರೆಗೂ ಮೈದುಂಬಿ ಹರಿಯುತ್ತವೆ. ಪಶ್ಚಿಮಘಟ್ಟದಲ್ಲಿ ಎಲ್ಲಿಯೂ ಸಿಗದ ಈ ಕರಿಕೆ ಗ್ರಾಮದ ಜಲಪಾತಗಳು, ಪ್ರವಾಸಿಗರಿಗೆ ರಸದೌತಣವನ್ನು ಉಣಬಡಿಸುತ್ತಿವೆ.

ಕರಿಕೆ ಗ್ರಾಮದಿಂದ 8 ಕಿ.ಮೀ. ದೂರದಲ್ಲಿ ರಾಣಿಪುರಂ ಎಂಬ ಕೇರಳ ಪ್ರಖ್ಯಾತ ಪ್ರವಾಸಿ ತಾಣವಿದೆ. ತೋಡಿಕಾನ ದೇವಸ್ಥಾನವೂ ಈ ಕಡಿಕೆ ಗ್ರಾಮದ ಸನಿಹದಲ್ಲಿಯೇ ಇದೆ. ಒಟ್ಟಾರೆ ಜಲಪಾತಗಳಿಂದಾಗಿ ಕರಿಕೆ ಗ್ರಾಮ ಮಳೆಗಾಲದಲ್ಲಿ ಸೊಗಸಾಗಿ ಶೋಭಿಸುತ್ತಿದೆ.

Leave A Reply

Your email address will not be published.