ಮೇಷರಾಶಿ
ಸ್ನೇಹಿತರಿಂದ ನೆರವು, ಸಣ್ಣ ಪುಟ್ಟ ವಿಚಾರದಲ್ಲಿ ಮನಃಸ್ತಾಪ, ಅನ್ಯರ ಮಾತಿನಿಂದ ತಪ್ಪು ಅಭಿಪ್ರಾಯ ತಂದೀತು. ವ್ಯಾಪಾರಿಗಳಿಗೆ ಅರ್ಥಿಕವಾಗಿ ಪರಿಸ್ಥಿತಿ ಅತಂಕಕ್ಕೆ ಕಾರಣವಾಗಲಿದೆ. ಭೂ ಖರೀದಿಗೆ ಸಾಧ್ಯತೆ ಇರುತ್ತದೆ. ಮುಂದುವರಿಯಿರಿ. ಆರೋಗ್ಯದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅತಿಯಾದ ಒತ್ತಡ, ಹಣಕಾಸು ನಷ್ಟ, ಮಾನಸಿಕ ತೊಂದರೆ.
ವೃಷಭರಾಶಿ
ಅನಾವಶ್ಯಕ ವಸ್ತುಗಳ ಖರೀದಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ವಿದ್ಯಾರ್ಥಿಗಳಿಗೆ ಯಶಸ್ಸಿನ ಹಾದಿ ಆಶಾದಾಯಕವಾಗಿರುತ್ತದೆ. ಧಾರಳ ಅವಕಾಶಗಳಿಂದ ವ್ಯಾಪಾರಿಗಳಿಗೆ ಲಾಭ ತರಲಿದೆ. ಆರೋಗ್ಯಕ್ಕಾಗಿ ಆಗಾಗ ಚಿಂತೆ ತೋರಿ ಬರುತ್ತದೆ. ನಿರ್ಧಾರಗಳಲ್ಲಿ ಎಚ್ಚರಿಕೆ, ಬಂಧುಗಳಿಂದ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ಮುಗ್ಗಟ್ಟು.
ಮಿಥುನರಾಶಿ
ಈ ವಾರ ಜಾಗ್ರತೆಯಲ್ಲಿರುವುದು ಉತ್ತಮ, ಅಂದುಕೊಂಡ ಕಾರ್ಯಗಳಲ್ಲಿ ಹಿನ್ನಡೆ, ಕೆಲಸಗಳಲ್ಲಿ ನಿಧಾನ, ಕುಲದೇವರ ಆರಾಧನೆ, ಎಷ್ಟೇ ಜಾಗ್ರತೆ ವಹಿಸಿದರೂ ಹಿತಶತ್ರುಗಳ ಬಾಧೆ ಇದೇ ಇರುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯವಿದೆ. ರಾಜಕೀಯ ವರ್ಗದವರಿಗೆ ಮನಸ್ಸು ಸ್ಥಿರ ವಿರಲಾರದು. ಉದರ ಸಂಬಂಧಿ ದೋಷವಿದೆ. ಶೀತ ಸಂಬಂಧಿತ ರೋಗ, ಇತರರ ಮಾತಿಗೆ ಮರುಳಾಗಬೇಡಿ, ಅನಾವಶ್ಯಕ ವಾಗ್ವಾದ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಅಗತ್ಯ.

ಕಟಕರಾಶಿ
ಅನ್ಯರ ಮಾತಿನಿಂದ ಅನಾವಶ್ಯಕ ತಪ್ಪು ಅಭಿಪ್ರಾಯ ತಂದೀತು. ದೇವತಾ ಕಾರ್ಯಗಳಿಗಾಗಿ ಖರ್ಚುವೆಚ್ಚ ಹೆಚ್ಚಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾಗಲಿವೆ. ದಿನಾಂತ್ಯ ಕಿರು ಸಂಚಾರವಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಿರೀಕ್ಷಿತ ಖರ್ಚು, ಮಹಿಳೆಯರಿಗೆ ತೊಂದರೆ, ಹಿತ ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಮಾಡುವ ಸಾಧ್ಯತೆ, ವ್ಯವಹಾರಗಳಲ್ಲಿ ಎಚ್ಚರ,
ಸಿಂಹರಾಶಿ
ವಾದ-ವಿವಾದಗಳಿಂದ ದೂರವಿರಿ, ಶತ್ರುತ್ವ ಹೆಚ್ಚಾಗುವುದು, ಆತ್ಮೀಯರಲ್ಲಿ ಮನಃಸ್ತಾಪ, ಅನಾವಶ್ಯಕ ಹಣವ್ಯಯ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ವ್ಯಾಪಾರಸ್ಥರಿಗೆ ಅನುಕೂಲ, ವಿದ್ಯಾರ್ಥಿಗಳ ಕುಶಲತೆಗೆ ಉತ್ತಮ ಫಲಿತಾಂಶ ಹಾಗೂ ಅವಕಾಶಗಳಿರುತ್ತದೆ. ಹೊಸ ಸ್ಥಳಗಳ ಸಂದರ್ಶನದ ಭಾಗ್ಯವಿದೆ. ಸ್ಥಗಿತಗೊಂಡ ಕೆಲಸಕಾರ್ಯಗಳು ಪುನಃ ಚಾಲನೆಗೆ ಬರಲಿವೆ. ಅವಿವಾಹಿತರಿಗೆ ಕಂಕಣಬಲ ಪ್ರಾಪ್ತಿ ಇದೆ.
ಕನ್ಯಾರಾಶಿ
ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ, ವಿಧೇಯತೆಯಿಂದ ಕಾರ್ಯ ಸಿದ್ಧಿ, ಅನಾವಶ್ಯಕ ದ್ವೇಷ ಸಾಧನೆ ಬೇಡ, ಆಗಾಗ ಮನಸ್ಸಿನ ನೆಮ್ಮದಿ ಕಡಿಮೆಯಾಗಲಿದೆ. ಹೆಚ್ಚಿನ ಆರ್ಥಿಕ ಅಡಚಣೆಯಿಂದ ಆತಂಕ ತೋರಿ ಬಂದೀತು.ವೃತ್ತಿರಂಗದಲ್ಲಿ ನೆಮ್ಮದಿ ಕಡಿಮೆಯಾದೀತು. ಸಾಮಾಜಿಕವಾಗಿ ನಿಮ್ಮ ಪ್ರತಿಷ್ಠೆ ತುಸು ಮಸುಕಾದೀತು.ಜಾಗ್ರತೆ ಮಾಡಿರಿ. ಹಿರಿಯರ ಮಾತಿಗೆ ಗೌರವ ನೀಡಿ, ಹೇಳಿಕೆ ಮಾತುಗಳಿಂದ ಕಿರಿಕಿರಿ, ಕುಟುಂಬದಲ್ಲಿ ಅಶಾಂತಿ ವಾತಾರಣ, ನಿದ್ರಾಭಂಗ, ನಾನಾ ಆಲೋಚನೆ.

ತುಲಾರಾಶಿ
ನಾನಾ ರೀತಿಯ ತೊಂದರೆ, ಅಕಾಲ ಭೋಜನ ಪ್ರಾಪ್ತಿ, ಮಾತಿನ ಚಕಮಕಿ, ಭೂ ವ್ಯವಹಾರದಲ್ಲಿ ಮನಸ್ಸು ಮಾಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ರೀತಿಯಲ್ಲಿ ಅವಕಾಶಗಳು ಒದಗಿ ಬರುತ್ತದೆ. ದೇವತಾಕಾರ್ಯಗಳು ನಿಶ್ಚಿಂತತೆಯಿಂದ ನಡೆಯಬಹುದು. ಸರಕಾರಿ ಕೆಲಸದಲ್ಲಿ ಲಾಭವಿರುತ್ತದೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಆರ್ಥಿಕ ಸಂಕಷ್ಟ, ದಾಂಪತ್ಯದಲ್ಲಿ ಸಾಮರಸ್ಯ.
ವೃಶ್ಚಿಕರಾಶಿ
ಈ ವಾರ ದ್ರವ್ಯ ಲಾಭ, ನಿರುದ್ಯೋಗಿಗಳ ಅಲೆದಾಟ ಮುಕ್ತಾವಾಗಲಿದೆ. ಧನಾಗಮನವು ಉತ್ತಮವಿದ್ದರೂ ಸ್ವಪ್ರತಿಷ್ಠೆಗಾಗಿ ವಿನಿಯೋಗವಾದೀತು. ವೈವಾಹಿಕ ಪ್ರಸ್ತಾವಗಳಿಗಾಗಿ ಓಡಾಟ ವಿರುತ್ತದೆ. ಪತ್ರಿಕೋದ್ಯಮಿಗಳಿಗೆ ನಿರೀಕ್ಷೆಗೆ ಮೀರಿ ಯಶಸ್ಸು ಇದೆ. ಪರರಿಂದ ಸಹಾಯ, ದುಃಖದಾಯಕ ಪ್ರಸಂಗ, ವಿದ್ಯಾಭ್ಯಾಸಕ್ಕೆ ತೊಂದರೆ, ವಿಪರೀತ ವ್ಯಸನ, ಯತ್ನ ಕಾರ್ಯಗಳಲ್ಲಿ ವಿಳಂಬ, ಹಣಕಾಸು ನಷ್ಟ.
ಧನಸ್ಸುರಾಶಿ
ಯಾರನ್ನೂ ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಗೊಂದಲ, ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ಪ್ರಶಂಸೆ ಸಲ್ಲಲಿದೆ. ಹಿರಿಯರಿಗೆ ಪುಣ್ಯಕ್ಷೇತ್ರದ ದರ್ಶನ ಭಾಗ್ಯವಿದೆ. ನಿಮ್ಮೆಣಿಕೆಯಂತೆ ನ್ಯಾಯಾಲಯದ ಕೆಲಸಕಾರ್ಯಗಳು ನಿಮ್ಮ ಪರವಾಗಿ ತೀರ್ಮಾನವಾಗಲಿವೆ. ದಿನಾಂತ್ಯದಲ್ಲಿ ಶುಭವಿದೆ. ಋಣ ವಿಮೋಚನೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಕ್ಕಳಿಗೆ ಅನಾರೋಗ್ಯ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು.

ಮಕರರಾಶಿ
ಈ ವಾರ ಕುಟುಂಬ ಸೌಖ್ಯ, ವ್ಯವಹಾರದಲ್ಲಿ ನಷ್ಟ, ಸೋಲಿನಲ್ಲಿಯೂ ಗೆಲುವನ್ನು ಕಾಣಬಹುದಾಗಿದೆ. ಕೃಷಿಕರು ತಮ್ಮ ವ್ಯವಹಾರದಲ್ಲಿ ಉತ್ತಮ ಬೆಳೆಯನ್ನು ಪಡೆಯಲಿದ್ದಾರೆ. ವಿದ್ಯಾರ್ಥಿ ವರ್ಗದವರು ಬಂದ ಅವಕಾಶ ವನ್ನು ಸದುಪಯೋಗಿಸಬೇಕು. ಸಂತಾನಭಾಗ್ಯ ಸಂತಸ ತಂದೀತು. ಮೇಲಾಧಿಕಾರಿಗಳಿಂದ ತೊಂದರೆ, ನೀಚ ಜನರಿಂದ ದೂರವಿರಿ, ಮಾನಸಿಕ ಒತ್ತಡ, ಆದ್ಯಾತ್ಮದಿಂದ ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಕಿರಿಕಿರಿ.
ಕುಂಭರಾಶಿ
ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ, ಹಿರಿಯರ ಮಾತಿಗೆ ತಾಳ್ಮೆಯಿಂದ ಸಹಕರಿಸಿದ್ದಲ್ಲಿ ಕಾರ್ಯಸಾಧನೆಯಾಗಲಿದೆ. ಉದ್ಯೋಗ ನಿಮಿತ್ತ ಪರಸ್ಥಳಕ್ಕೆ ತೆರಳಬೇಕಾದೀತು. ನೂತನ ಕಟ್ಟಡದ ಕಾರ್ಯಕ್ಕೆ ಹಣದ ಅಭಾವ ತಲೆದೋರಿತು. ಅಸಡ್ಡೆ ಮಾಡದಿರಿ. ಕೆಲಸ ಕಾರ್ಯಗಳಲ್ಲಿ ಎಚ್ಚರ, ಯತ್ನ ಕಾರ್ಯದಲ್ಲಿ ವಿಳಂಬ, ಅರಿವಿಲ್ಲದೇ ತಪ್ಪು ಮಾಡುವಿರಿ, ಅಧಿಕವಾದ ಚಿಂತೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ.
ಮೀನರಾಶಿ
ಮುಖ್ಯ ವಿಚಾರ ಗೌಪ್ಯದಲ್ಲಿಡುವುದು ಉತ್ತಮ, ಆದಾಯ ಕಡಿಮೆ, ಅಧಿಕವಾದ ಖರ್ಚು, ಕೆಲಸದಲ್ಲಿ ಅಧಿಕ ಒತ್ತಡ, ತೆರಿಗೆ ಅಧಿಕಾರಿಗಳಿಗೆ ಸರಕಾರಿ ಇಲಾಖೆ ಯಿಂದ ಸಮಸ್ಯೆಗಳು ಕಂಡು ಬಂದಾವು. ಅನಾವಶ್ಯಕ ವಾಗಿ ತಂದೆ ಮಕ್ಕಳಲ್ಲಿ ವಿರಸ ಮೂಡಲಿದೆ. ನಾನಾ ಮೂಲಗಳಿಂದ ಧನಾಗಮನವು ಕಾರ್ಯಸಿದ್ಧಿಗೆ ಅನುಕೂಲವಾದೀತು. ಆರೋಗ್ಯದಲ್ಲಿ ಏರುಪೇರು, ಆತುರ ಸ್ವಭಾವ, ಮನಸ್ಸಿನಲ್ಲಿ ಆತಂಕ, ತಾಳ್ಮೆ ಅತ್ಯಗತ್ಯ.