ನವದೆಹಲಿ : ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ಮುಂಗಾರು ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಭತ್ತ, ಎಳ್ಳು, ತೊಗರಿ, ಉದ್ದು ಬೆಳೆಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ. ಭತ್ತ ಕ್ವಿಂಟಾಲ್ ಗೆ 1940 ರೂಪಾಯಿ ನಿಗದಿ ಪಡಿಸಲಾಗಿದೆ. ಕಳೆದ ಬಾರಿ 1868 ರೂಪಾಯಿ ಇದ್ದು, ಈ ಬಾರಿ 72 ರೂಪಾಯಿ ಏರಿಕೆ ಕಂಡಂತಾಗಿದೆ. ಇನ್ನು ಉದ್ದು ಹಾಗೂ ತೊಗರಿ ಕ್ವಿಂಟಾಲ್ ಗೆ 300 ರೂಪಾಯಿ ಹಾಗೂ ಎಳ್ಳಿನ ಬೆಳೆಗಳಿಗೆ ಕ್ವಿಂಟಾಲ್ ಗೆ 452 ರೂಪಾಯಿ ಬೆಂಬಲ ಬೆಲೆಯನ್ನು ನಿಗದಿ ಪಡಿಸಲಾಗಿದೆ.
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಈ ವಿಷಯವನ್ನು ತಿಳಿಸಿದ್ದು, ಮಾನ್ಸೂನ್ ಬೆಳೆಗಳ ಎಂಎಸ್ ಪಿಯನ್ನು ಶೇಕಡಾ 50 ರಷ್ಟು ಹೆಚ್ಚಳ ಮಾಡಿದೆ ಎಂದು ಕೇಂದ್ರ ಸರಕಾರ ನಿರ್ಧರಿಸಿದೆ. ಕೊರೊನಾ ಸಂಕಷ್ಟದಲ್ಲಿ ರೈತರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.