ಕೊರೋನಾದಿಂದ ಕೆಲಸವಿಲ್ಲ…! ತೆರಿಗೆ ಪಾವತಿಸಲು ದುಡ್ಡಿಲ್ಲ….!! ಸಂಕಷ್ಟ ತೋಡಿಕೊಂಡ ಬಾಲಿವುಡ್ ನಟಿ…!!

ಬಾಲಿವುಡ್ ನ  ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿಯ ಕಂಗನಾ ರನಾವುತ್, ಕೊರೋನಾದಿಂದ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಂಕಷ್ಟ ತೋಡಿಕೊಡಿದ್ದಾರೆ.

ಕಂಗನಾ ರನಾವುತ್ ಸಾಕಷ್ಟು ಬ್ಯುಸಿಯಾಗಿರುವ ಹಾಗೂ ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿ. ಆದರೆ ಕೊರೋನಾದಿಂದ ಸಂಕಷ್ಟಕ್ಕಿಡಾಗಿದ್ದು, ನಾನು ಸರ್ಕಾರಕ್ಕೆ ಪಾವತಿಸಬೇಕಾಗಿರುವ ತೆರಿಗೆಯ ಅರ್ಧದಷ್ಟನ್ನು ಪಾವತಿಸಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಮಂಗಳವಾರ ರಾತ್ರಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಕಂಗನಾ, ನಾನು ಅತ್ಯಧಿಕ ತೆರಿಗೆ ಪಾವತಿಸುವ ವಿಭಾಗದಲ್ಲಿ ಬರುತ್ತೇನೆ. ಹೀಗಾಗಿ ನನ್ನ ಆದಾಯ ಶೇಕಡಾ 45 ರಷ್ಟನ್ನು ನಾನು ತೆರಿಗೆಗೆ ಪಾವತಿಸುತ್ತೇನೆ. ಆದರೆ ಈ ವರ್ಷ ಮಾತ್ರ ಕೊರೋನಾ ಸಂಕಷ್ಟದಿಂದಾಗಿ ನಾನು ಇನ್ನು ಅರ್ಧದಷ್ಟು ತೆರಿಗೆ ಪಾವತಿಸಿಲ್ಲ. ಇದೇ ಮೊದಲ ಬಾರಿಗೆ ನಾನು ತೆರಿಗೆಯನ್ನು ಪಾವತಿಸಲು ವಿಳಂಬವಾಗುತ್ತಿದೆ ಎಂದಿದ್ದಾರೆ.

ಅಲ್ಲದೇ ತಾವು ಪಾವತಿಸಲು ವಿಳಂಬವಾಗಿರುವ ತೆರಿಗೆ ಹಣದ ಮೇಲೆ ಸರ್ಕಾರ ಬಡ್ಡಿ ವಿಧಿಸುತ್ತಿದೆ. ಸರ್ಕಾರದ ಈ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ನನಗೆ ಈಗ ತಕ್ಷಣಕ್ಕೆ ಕಷ್ಟವಾಗಬಹುದು. ಆದರೆ ಇದು ದೇಶಕ್ಕೆ ಅಗತ್ಯವಿದೆ ಎಂದಿದ್ದಾರೆ.

ಇತ್ತೀಚಿಗಷ್ಟೇ ಕರೋನಾದಿಂದ ಚೇತರಿಸಿಕೊಂಡಿರುವ ಕಂಗನಾ ಸದ್ಯ ಹಿಮಾಚಲ ಪ್ರದೇಶದ ನಿವಾಸದಲ್ಲಿದ್ದು ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ.

ಕೊರೋನಾದಿಂದ ಕಂಗನಾ ಅಭಿನಯದ ಬಹುನೀರಿಕ್ಷಿತ ಚಿತ್ರ ತಲೈವಿ ರಿಲೀಸ್ ವಿಳಂಬವಾಗಿದ್ದು, ಇದನ್ನು ಹೊರತುಪಡಿಸಿ ತೇಜಸ್, ಧಾಕಡ್,ಮಣಿಕರ್ಣಿಕಾ ರಿಟರ್ನ್ಸ್ ಹಾಗೂ ದಿ ಲೆಜೆಂಡ್ ಆಫ್  ದಿಡ್ಡಾ ಸಿನಿಮಾ  ಕೈಯಲ್ಲಿದೆ.

Comments are closed.