ಕೃಷಿ ಇಂದು ನಿನ್ನೆಯ ಕಸಬಲ್ಲ ತಲ ತಲಾಂತರದಿಂದ ನಮ್ಮ ಹಿರಿಯರು ನೆಡೆಸಿಕೊಂಡು ಬರುತ್ತಿದ್ದ ವಂಶಪಾರಂಪರೆಯ ಕಸಬು ಅದು. ಆದರೆ ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಪ್ರಭಾವದಿಂದ, ಎಲ್ಲರೂ ಐಟಿ, ಬಿಟಿ ಕಂಪೆನಿಗಳಲ್ಲಿ ಕೆಲಸ ಮಾಡಬೇಕು ಎಂದೆ ಕನಸನ್ನು ಕಾಣುವುದರಿಂದ ಕೃಷಿಯನ್ನು ಮಾಡುವವರ ಒಲವು ಕೊಂಚ ಕಡಿಮೆಯೆ ಆಗಿದೆ. ಆದರೆ ಇನ್ನು ಕೆಲವುಕಡೆ ಕೃಷಿಯನ್ನೇ ತಮ್ಮ ಅನ್ನ ನೀಡುವ ದೇವರು ಎಂದು ಮುಂದುವರಿಸಿಕೊಂಡು ಹೋಗುವವರು ಇದ್ದಾರೆ.
ಇದರಲ್ಲಿ ಕೃಷಿ ಮಾಡುವವರನ್ನೇ ಉದ್ದೇಶಿಸಿ ಈಗಾಗಲೇ ನಮ್ಮ ಭಾರತ ಸರ್ಕಾರ ಹಲವಾರು ಯೋಜನೆಗಳನ್ನು ತರುತ್ತಲೇ ಇದೆ. ಒಂದೊಂದು ಯೋಜನೆಯು ಒಂದೊಂದು ರೀತಿಯಲ್ಲಿ ರೈತರಿಗೆ ನೆರವಾಗಿದೆ. ಇದೀಗ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯ ಜಾರಿಯಲ್ಲಿದ್ದು ಈ ಯೋಜನೆಯ ಅಡಿಯಲ್ಲಿ ಯಾರೆಲ್ಲ ಬರುತ್ತಾರೆ ಯಾರೆಲ್ಲ ಈ ಯೋಜನೆಯನ್ನು ಪಡೆದುಕೊಳ್ಳಲು ಅರ್ಹತೆ ಹೊಂದಿದ್ದಾರೆ ಎಂಬುದನ್ನು ಈ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯು ತಿಳಿಸಿಕೊಟ್ಟಿದೆ. ಹಾಗಾದರೆ ಅವರು ಯಾರೆಲ್ಲ ಎಂಬುದಾಗಿ ನೋಡುವುದಾದರೆ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಸಾಗುವಳಿ ಜಮೀನು ಹೊಂದಿರುವ ಪ್ರತಿಯೊಬ್ಬ ರೈತನ ಕುಟುಂಬವು ಈ ಯೋಜನೆಯಡಿ ಆರ್ಥಿಕ ಸಹಾಯ ಪಡೆಯಲು ಅರ್ಹರಾಗಿರುತ್ತಾರೆ. ಭೂಮಿ ಹೊಂದಿರುವ ಸಂಘ ಅಥವಾ ಸಂಸ್ಥೆಗಳು, ಕುಟುಂಬ ಸದಸ್ಯರು ಮಾಜಿ ಅಥವಾ ಹಾಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದ್ದರೆ ಅವರು ಅರ್ಹತೆಯನ್ನು ಹೊಂದಿರುತ್ತಾರೆ.
ಕುಟುಂಬ ಸದಸ್ಯರು ಮಾಜಿ ಮತ್ತು ಹಾಲಿ ಸಚಿವರು ಅಥವಾ ಲೋಕ ಸಭೆ, ರಾಜ್ಯಸಭೆ ಸದಸ್ಯರು ಅಥವಾ ವಿಧಾನಸಭೆ, ವಿಧಾನ ಪರಿಷತ್ತಿನ ಸದಸ್ಯರು ಅಥವಾ ನಗರ ಸಭೆ, ಪುರಸಭೆ ಅಧ್ಯಕ್ಷರು, ಜಿಲ್ಲಾಪಂಚಾಯಿತಿ ಅಧ್ಯಕ್ಷರು ಆಗಿದ್ದರೆ ಅವರು ಈ ಯೋಜನೆಯ ಅಡಿಯಲ್ಲಿ ಅರ್ಹತೆಯನ್ನು ಪಡೆದಿರುತ್ತಾರೆ. ಕುಟುಂಬ ಸದಸ್ಯರು ನಿವೃತ್ತಿ ಅಥವಾ ಹಾಲಿ ಸೇವೆಯಲ್ಲಿರುವ ಕೇಂದ್ರ, ರಾಜ್ಯ ಸರ್ಕಾರಗಳ ಅಥವಾ ಸಚಿವಾಲಯ ಕಛೇರಿ ಅಥವಾ ಇಲಾಖೆ ಅಥವಾ ಕ್ಷೇತ್ರ ಕಛೇರಿಗಳು/ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಅಂಗ ಸಂಸ್ಥೆಗಳು ಅಥವಾ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಹಾಗೂ ನೌಕರರು ಅಥವಾ ಸ್ಥಳೀಯ ಸಂಸ್ಥೆಗಳ ಖಾಯಂ ನೌಕರರು ಆಗಿದ್ದಲ್ಲಿ, (ಗ್ರೂಪ್ ಡಿ/4ನೇ ವರ್ಗ/ Multi Tasking Staff ಹೊರತುಪಡಿಸಿ) ಇವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹತೆ ಪಡೆದಿರುತ್ತಾರೆ.
ಇನ್ನು ಕುಟುಂಬ ಸದಸ್ಯರು ರೂ. 10,000/- ಅಥವಾ ಹೆಚ್ಚಿನ ಮೊತ್ತ ಪಡೆಯುತ್ತಿರುವ ವಯೋ ನಿವೃತ್ತ ಅಥವಾ ನಿವೃತ್ತ ಪಿಂಚಣಿದಾರರು. ಆಗಿದ್ದಲ್ಲಿ (ಗ್ರೂಪ್ ಡಿ/4ನೇ ವರ್ಗ/ Multi Tasking Staff ಹೊರತುಪಡಿಸಿ) ಮತ್ತು ಕುಟುಂಬ ಸದಸ್ಯರು ಕಳೆದ ಸಾಲಿನ ಆದಾಯ ತೆರಿಗೆ ಪಾವತಿದಾರರು, ವೈದ್ಯ, ಅಭಿಯಂತರ, ವಕೀಲ, ಲೆಕ್ಕ ಪರಿಶೋಧಕರು, ವಾಸ್ತುಶಿಲ್ಪದಂತಹ ವೃತ್ತಿಪರ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ವೃತ್ತಿ ನಿರ್ವಹಿಸುತ್ತಿದ್ದರೆ ಅವರು ಈ ಯೋಜನೆಯ ಅಡಿ ಅನರ್ಹತೆಯನ್ನು ಪಡೆದುಕೊಂಡಿರುತ್ತಾರೆ. ಹೀಗೆ ಅರ್ಹ ವ್ಯಕ್ತಿಗಳು ಸರ್ಕಾರ ಒದಗಿಸುತ್ತಿರುವ ಈ ಯೋಜನೆಯ ಪ್ರಯೋಜನವನ್ನು ಸರಿಯಾಗಿ ಪಡೆದುಕೊಂಡರೆ ತಮ್ಮ ಜೀವನವನ್ನು ಇನ್ನಷ್ಟು ಹಸನಾಗಿಸಬಹುದು ಮತ್ತು ಕೃಷಿಯನ್ನು ಮಾಡುವುದರ ಮುಖೇನ ಲಾಭವನ್ನು ಗಳಿಸಬಹುದಾಗಿದೆ.
ಇದನ್ನೂ ಓದಿ :Fetus in fetu: 40 ದಿನ ಪ್ರಾಯದ ಗಂಡು ಮಗುವಿನ ಹೊಟ್ಟೆಯಲ್ಲಿ ಪತ್ತೆಯಾಯ್ತು ಭ್ರೂಣ
ಇದನ್ನೂ ಓದಿ :OLA Uber ಸುಲಿಗೆಯ ವಿರುದ್ದ ಸಮರ ಸಾರಿದ RTO
Big Day for Lakh of Farmers