Organic Farming ರೈತರ ಅನುಕೂಲಕ್ಕಾಗಿ ‘ನೈಸರ್ಗಿಕ ಕೃಷಿ ಕಾರ್ಯಕ್ರಮ

ಕೃಷಿ ನಮ್ಮ ದೇಶದ ಕುಲ ಕಸುಬಾಗಿದೆ. ಕೃಷಿ (Agriculture) ಮತ್ತು ಕೃಷಿಯ ಉತ್ಪನ್ನವನ್ನು ನಾವು ಒಂದಲ್ಲ ಒಂದು ಕಾರಣಕ್ಕಾಗಿ ಅವಲಂಬಿಸಿಯೇ ಬದುಕುತ್ತಿದ್ದೇವೆ. ಒಂದೊಂದು ಪ್ರದೇಶದಲ್ಲಿಯೂ ಅಲ್ಲಿಯ ಹವಾಮಾನಗಳಿಗೆ ತಕ್ಕಂತೆ ಒಂದೊಂದು ರೀತಿಯ ಕೃಷಿಯನ್ನು ಮಾಡಲಾಗುತ್ತದೆ. ಅದು ಭತ್ತ, ರಾಗಿ, ಜೋಳ, ಶೇಂಗಾ ಹೀಗೆ ವಿಧ ವಿಧದ ಕೃಷಿಯನ್ನು ನಾವು ಬೆಳೆಯುವುದರ ಮೂಲಕ ಕೃಷಿಯಲ್ಲಿಯು ವಿವಿಧತೆಯನ್ನು ಕಾಯ್ದುಕೊಂಡಿದ್ದೇವೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಬೆಳೆಯುವ ಪದ್ದತಿಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತಿರುವುದನ್ನು ನಾವು ಗಮನಿಸಿರಬಹುದು. ತಂತ್ರಜ್ಞಾನಗಳ ಸ್ಪರ್ಶ ಕೃಷಿಗೆ ಆದ ಮೇಲಂತು ರಾಸಾನಿಯಕಗಳ ಬಳಕೆ, ಯಂತ್ರಗಳ ಬಳಕೆ ಹೆಚ್ಚುತ್ತಲೇ ಸಾಗಿದೆ. ಇದರ ಪರಿಣಾಮವಾಗಿ ಕೃಷಿಯ ಫಸಲುಗಳು ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಬರುತ್ತಿದೆ. ಅಲ್ಲದೇ ಅವುಗಳ ಖರ್ಚುಗಳು ಹೆಚ್ಚೆ ಇವೆ. ಒಮ್ಮೊಮ್ಮೆ ರೈತರು ಭೂಮಿ ಉಳಲು ಖರ್ಚು ಹೆಚ್ಚಾಗುತ್ತದೆ ಎಂದು ಸಾಲ ಪಡೆದು ಕೊನೆಗೆ ಸಾಲ ತೀರಿಸಲಾಗದೆ ಒದ್ದಾಡುವುದು ಇದೆ.

ಹಾಗಾಗಿ  ಈ ವರ್ಷ ಕೃಷಿ ರಾಜ್ಯದ ರೈತರ ಅನುಕೂಲಕ್ಕಾಗಿ, ಕೃಷಿಕರಿಗೆ ಯಾವುದೇ ತೊಂದರೆ ಆಗದಿರಲಿ, ಅತಿ ಅಲ್ಪ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವಂತಾಗಲಿ ಎಂಬ ಕಾರಣಕ್ಕಾಗಿಯೇ ಹೊಸದಾದ ಯೋಜನೆಯೊಂದನ್ನು  ಪರಿಚಯಿಸಿದ್ದಾರೆ. ಈ ಯೋಜನೆಯ ಮೂಲಕ ಕೃಷಿಕ    ಶೂನ್ಯ ಬಂಡವಾಳದ ಮೂಲಕ  ಕೃಷಿ ಪದ್ಧತಿಯನ್ನು ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಕಡಿಮೆ ಖರ್ಚಿನ ಜೊತೆ ಜೊತೆಗೆ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ.

2022-23 ರ ಆಯವ್ಯಯ ಘೋಷಣೆಯಂತೆ ರಾಜ್ಯಾದ್ಯಂತ 5000 ಎಕರೆ ರೈತರ ಕ್ಷೇತ್ರದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿ ಬೆಳೆ ಅಥವಾ ತಳಿಗಳ ಇಳುವರಿ, ಕೀಟ ಮತ್ತು ರೋಗಗಳ ಜೈವಿಕ ನಿಯಂತ್ರಣ, ಮಣ್ಣಿನ ರಾಸಾಯನಿಕ, ಭೌತಿಕ ಮತ್ತು ಜೈವಿಕ ಗುಣಧರ್ಮಗಳು, ಸಾರಜನಿಕ ಸ್ಥಿರೀಕರಣ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ವಿಶ್ಲೇಷಣೆ ಮುಂತಾದ ಅಧ್ಯಯನಗಳನ್ನು ಕೃಷಿ ಅಥವಾ ತೋಟಗಾರಿಕಾ ವಿಶ್ವವಿದ್ಯಾನಿಲಯಗಳ ಮುಖಾಂತರ ಕೈಗೊಳ್ಳಲು ಉದ್ದೇಶಿಸಿದೆ.

ಇದರಿಂದಾಗಿ   ಕೃಷಿಯ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು  ಉಂಟಾಗದಂತೆ  ಮಾಡಬಹುದಾಗಿದೆ. ಅಲ್ಲದೇ ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳಬಹುದಾಗಿದೆ. “ನೈಸರ್ಗಿಕ ಕೃಷಿ” ಈ ಕಾರ್ಯಕ್ರಮದ ಮೂಲಕ ರಾಜ್ಯದ ಎಲ್ಲಾ ಕೃಷಿಕರಿಗೂ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ.

ಇದನ್ನೂ ಓದಿ : PM-Kisan Samman Nidhi ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆ ಪಡೆಯಲು ಯಾರು ಅರ್ಹರು ?

ಇದನ್ನೂ ಓದಿ : Narendra Modi at 8 : ಮೋದಿ ಸರ್ಕಾರದ 5 ಜನಪರ ಯೋಜನೆಗಳು

Organic Farming Future of Agriculture

Comments are closed.