12 ಕೋಟಿ ರೈತರಿಗೆ ಗುಡ್‌ ನ್ಯೂಸ್‌ : ಈ ದಿನದಂದು 13ನೇ ಕಂತು ಖಾತೆಗೆ ಜಮೆ

ಬೆಂಗಳೂರು : ದೇಶದಾದ್ಯಂತ 12 ಕೋಟಿ ಪಿಎಂ ಕಿಸಾನ್‌ ಯೋಜನೆಯ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌ ಇದಾಗಿದೆ. ಮುಂದಿನ ವಾರ ಪಿಎಂ ಕಿಸಾನ್‌ ಯೋಜನೆಯ 13ನೇ ಕಂತಿಗೆ ಕಾಯುತ್ತಿರುವ ಸುಮಾರು 12 ಕೋಟಿ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಹೌದು, ಇದೀಗ 13ನೇ ಕಂತಿನ ಬಿಡುಗಡೆ ದಿನಾಂಕವನ್ನು ಸರಕಾರ ಪ್ರಕಟಿಸಿದೆ. ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಜನ್ಮ ದಿನವಾದ (BS Yeddyurappa’s birthday) ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ 13ನೇ ಕಂತು ಬಿಡುಗಡೆ ಮಾಡಲಿದ್ದಾರೆ ಎಂದು ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಿಷನ್‌ ಕರ್ನಾಟಕದ ಅಡಿಯಲ್ಲಿ ಪ್ರಧಾನಿ ಮೋದಿ ಮುಂದಿನ ವಾರ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಬಿ.ಎಸ್‌ ಯಡಿಯೂರಪ್ಪ ಅವರ ಜನ್ಮದಿನವಾದ ಫೆ. 27ರ ಸೋಮವಾರದಂದು ಹೈಟೆಕ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ. ಇದರ ನಂತರ, ವರು ಕಿಸಾನ್‌ ಸಮ್ಮಾನ್‌ನ ಹೊಸ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಅಕ್ಟೋಬರ್‌ 2022ರಲ್ಲಿ, ಪ್ರಧಾನಿ ದೆಹಲಿಯಿಂದ ರೈತರ ಖಾತೆಗಳಿಗೆ 22,000 ಕೋಟಿ ರೂಪಾಯಿಗಳ 12ನೇ ಕಂತನ್ನು ಬಿಡುಗಡೆ ಮಾಡಿದರು. ಇದುವರೆಗೆ ಈ ಯೋಜನೆಯಡಿ ಫಲಾನುಭವಿ ರೈತರ 14 ಕೋಟಿ ಖಾತೆಗಳಿಗೆ 2.70 ಲಕ್ಷ ಕೋಟಿ ರೂ. ವರ್ಗಾ ಆಗಿರುತ್ತದೆ.

ಪಿಎಂ ಕಿಸಾನ್‌ ಯೋಜನೆಯ ಈ ರೀತಿಯ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ :

  • ಮೊದಲನೆಯದಾಗಿ ನೀವು ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ ಆದ https://pmkisan.gov.in/ಗೆ ಭೇಟಿ ನೀಡಬಹುದು.
  • ಇದರ ನಂತರ, “ಡ್ಯಾಶ್‌ಬೋರ್ಡ್”‌ ಭಾರತದ ನಕ್ಷೆಯೊಂದಿಗೆ ಪರದೆಯ ಮೇಲೆ ಕಾಣಿಸುತ್ತದೆ. ನಂತರ ಅದರ ಮೇಲೆ ಕ್ಲಿಕ್‌ ಮಾಡಬೇಕು.
  • ಅದರ ನಂತರ ನಿಮ್ಮ ಆಯಾ ರಾಜ್ಯ, ಜಿಲ್ಲೆ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು.

ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು ?
ಪಿಎಂ ಕಿಸಾನ್‌ ಅಡಿಯಲ್ಲಿ, ಸರಕಾರವು ಬಡ ರೈತರಿಗೆ ವರ್ಷಕ್ಕೆ ರೂ. 6000 ಆದಾಯ ಬೆಂಬಲವನ್ನು ನೀಡುತ್ತದೆ. ಇದರ ಅಡಿಯಲ್ಲಿ ಮೂರು ವಿಭಿನ್ನ ಕಂತುಗಳಲ್ಲಿ ರೂ. 2000 ನೀಡಲಾಗುತ್ತದೆ. ಇದು ಫೆಬ್ರವರಿ 2019ರಂದು ಮೊದಲು ಕಂತನ್ನು ರೈತರ ಖಾತೆಗೆ ವರ್ಗಾಯಿಸುವ ಮೂಲಕ ಪ್ರಾರಂಭಿಸಲಾಯಿತು. ಈ ಯೋಜನೆಯಲ್ಲಿ ಹಣವನ್ನು ರೈತ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ : Pm Kisan 13th Installment : ರೈತ ಬಂಧುಗಳಿಗೆ ಗುಡ್‌ನ್ಯೂಸ್‌ : ಫೆಬ್ರವರಿ 24 ರಂದು ಪಿಎಂ ಕಿಸಾನ್‌ ಕಂತು ಬಿಡುಗಡೆ

ಇದನ್ನೂ ಓದಿ : PM Kisan Yojana 13th installment : 4 ವರ್ಷ ಪೂರ್ಣಗೊಳಿಸಿದ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ : 13 ನೇ ಕಂತು ಬಿಡುಗಡೆ ಸಾಧ್ಯತೆ

BS Yeddyurappa’s birthday: Good news for 12 crore farmers: 13th installment of PM Kisan Yojana will be deposited on this day.

Comments are closed.