ಕರ್ನಾಟಕದಲ್ಲಿ ಕನ್ನಡ ಬಳಕೆ ಕಡ್ಡಾಯ : ವಿಧಾನಸಭೆಯಲ್ಲಿ ʻಕನ್ನಡ ಕಾಯ್ದೆʼ ಅಂಗೀಕಾರ

ಬೆಂಗಳೂರು: (Passage of ‘Kannada Act’) ರಾಜ್ಯದಲ್ಲಿ ಇನ್ನು ಕನ್ನಡ ಭಾಷೆಯನ್ನು ಕಡ್ಡಾಯ ಮಾಡಲಾಗಿದ್ದು, ಕರ್ನಾಟಕದಲ್ಲಿದ್ದೂ ಕನ್ನಡವನ್ನು ಬಳಸದೇ ಇದ್ದರೆ 5 ರಿಂದ 20 ಸಾವಿರ ರೂಪಾಯಿ ದಂಡ ವಿಧಿಸುವ ʻಕನ್ನಡ ಕಾಯ್ದೆʼಯನ್ನು (ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೇಯಕ-2022) ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.

ಅಲ್ಲದೇ ಕನ್ನಡ ಮಾದ್ಯಮದಲ್ಲಿ ಕಲಿತ ವಿದ್ಯಾರ್ಥಿ, ವಿದ್ಯಾರ್ಥುಇನಿಯರಿಗೆ ಉನ್ನತ, ತಾಂತ್ರಿಕ, ಹಾಗೂ ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ; ಪ್ರಮುಖ ಸಹಕಾರಿ, ಖಾಸಗಿ ಮತ್ತು ಸಾರ್ವಜನಿಕ ಉದ್ಯಮಗಳಲ್ಲಿ ಉದ್ಯೋಗ ಮೀಸಲಾತಿ; ಕೆಳ ಹಂತದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಕಲಾಪ ಹಾಗೂ ಕನ್ನಡದಲ್ಲೇ ತೀರ್ಪು ಪ್ರಕಟ; ಬ್ಯಾಂಕುಗಳು ಸೇರಿದಂತೆ ಎಲ್ಲಾ ಖಾಸಗಿಯವರು ಸಾರ್ವಜನಿಕರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು; ಖಾಸಗಿ ಕೈಗಾರಿಕಾ ವಲಯ ಸರ್ಕಾರ ನಿಗದಿ ಮಾಡಿದಷ್ಟು ಮೀಸಲಾತಿಯನ್ನು ಕನ್ನಡಿಗರಿಗೆ ನೀಡದೇ ಇದ್ದರೆ ತೆರಿಗೆ ರಿಯಾಯಿತಿ ವಿನಾಯಿತಿಗಳು ರದ್ದು; ಉದ್ಯಮ ಸ್ನೇಹಿ ನೀತಿಯಡಿ ದೊರೆಯುವ ಸೌಲಭ್ಯಗಳಿಂದ ಈ ಕೈಗಾರಿಕೆಗಳಿಗೆ ಕೋಕ್‌; ಇದು ವಿಧೇಯಕದ ಇನ್ನಿತರ ಮುಖ್ಯಾಂಶಗಳಾಗಿವೆ.

ವಿದ್ಯುಕ್ತವಾಗಿ ವಿಧಾನ ಪರಿಷತ್ತು ಒಪ್ಪಿಗೆ ನೀಡಿ, ರಾಜ್ಯಪಾಲರು ಅಂಕಿತ ಹಾಕಿದ ತಕ್ಷಣ ರಾಜ್ಯದಲ್ಲಿ ಕನ್ನಡ ಕಡ್ಡಾಯ ಕಾಯ್ದೆ ಜಾರಿಗೆ ಬರಲಿದೆ. ವಿಧೇಯಕವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ ಕುಮಾರ್‌ ಮಂಡಿಸಿದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಇಡೀ ಸದನ ಹರ್ಷ ವ್ಯಕ್ತಪಡಿಸಿ ಅನುಮೋದಿಸಿತು. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರ ಇನ್ನು ಮುಂದೆ ನಿಗದಿ ಮಾಡಲಿರುವ ಪ್ರಮಾಣದಷ್ಟು ಮೀಸಲಾತಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡಬೇಕು.

ಹತ್ತನೇ ತರಗತಿಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಯದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು. ಇದಕ್ಕಾಗಿ ಪಠ್ಯ ಕ್ರಮಣಿಕೆಯಲ್ಲೇ ವಿಷಯವನ್ನು ಕಡ್ಡಾಯವಾಗಿ ಸೇರ್ಪಡೆಗೊಳಿಸಬೇಕು ಎಂಬ ಪ್ರಮುಖ ಅಂಶಗಳು ಕನ್ನಡ ಕಾಯ್ದೆಯಲ್ಲಿವೆ.

ಇದನ್ನೂ ಓದಿ : “ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿಯಾಗಲಿ : ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಮೋದಿ ಟ್ವೀಟ್

ಇದನ್ನೂ ಓದಿ : Annual Examination timetable: 5 ಮತ್ತು 8 ನೇ ತರಗತಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : Seats reserved for Kannadigas: ಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಶೇಕಡಾ 25ರಷ್ಟು ಸೀಟ್ ಕನ್ನಡಿಗರಿಗೆ ಮೀಸಲು

ಇನ್ನೂ ಕಾಯ್ದೆಯ ಜಾರಿ ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳಲು ರಾಜಭಾಷಾ ಆಯೋಗ ಅಸ್ತತ್ವಕ್ಕೆ ಬರಲಿದ್ದು, ಸಂಸದೀಯ ಮತ್ತು ಶಾಸನ ರಚನಾ ಇಲಾಖೆಯ ನಿವೃತ್ತ ಕಾರ್ಯದರ್ಶಿ ಇದರ ಅಧ್ಯಕ್ಚರಾಗಿ ಅಧಿಕಾರ ತೆಗೆದುಕೊಳ್ಳಲಿದ್ದಾರೆ. ಅಲ್ಲದೇ ಕಾಯ್ದೆಯ ಜಾರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ. ಇದರಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ಸೇರಿದಂತೆ ಎಂಟು ಮಂದಿ ಪ್ರಮುಖರು ಇರಲಿದ್ದಾರೆ. ಈ ಸಮಿತಿಯು ಜಿಲ್ಲಾ ಮಟ್ಟದ ಕಾಯ್ದೆ ಅನುಷ್ಠಾನ ಸಮಿತಿಗಳನ್ನು ರಚಿಸಲಾಗಿದೆ.

Passage of ‘Kannada Act’: Use of Kannada is mandatory in Karnataka: Passage of “Kannada Act” in the Assembly

Comments are closed.