Ginger price hike : ಟೊಮ್ಯಾಟೊ, ಬೆಳ್ಳುಳ್ಳಿ ನಂತರ, ಶುಂಠಿಗೂ ಬಂತು ಬಂಗಾರದ ಬೆಲೆ

ಬೆಂಗಳೂರು : (Ginger price hike) ವಿಪರೀತ ಚಳಿ, ಕಡು ಬಿಸಿಲಿನಿಂದಾಗಿ ಮಾರುಕಟ್ಟೆಯಲ್ಲಿ ಅಡುಗೆ ಮನೆಗೆ ಅಗತ್ಯವಿರುವ ಸಾಮಾಗ್ರಿಗಳೊಂದಿಗೆ ಹೆಚ್ಚಿನ ತರಕಾರಿ ದರ ಏರಿಕೆಯಾಗಿದೆ. ಜುಲೈ ತಿಂಗಳ ಪ್ರಾರಂಭದಿಂದ ಟೊಮ್ಯಾಟೊ ಬೆಲೆ ಏರಿಕೆ ಕಂಡಿದ್ದು, ಅದರ ಬೆನ್ನಲ್ಲೆ ಬೆಳ್ಳುಳ್ಳಿ ದರ ಕೂಡ ಗಗನಕ್ಕೇರಿದೆ. ಇದೀಗ ಅಡುಗೆಗೂ ಆರೋಗ್ಯಕ್ಕೂ ಮುಖ್ಯವಾಗಿರುವ ಶುಂಠಿ ಬೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ 100 ಕೆ.ಜಿ ಶುಂಠಿಗೆ 18 ರಿಂದ 20 ಸಾವಿರ ರೂ.ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 100 ಕೆಜಿ ಶುಂಠಿಗೆ 900 ರೂಪಾಯಿಯಿಂದ 1200 ರೂಪಾಯಿ ಇತ್ತು. ಇದೀಗ ಶುಂಠಿ ಬೆಲೆ ಗಗನಕ್ಕೇರಿದ್ದು, ರೈತರಿಗೆ ಸಂತಸ ನೀಡಿದೆ. ಈಗಾಗಲೇ ಸ್ಟಾಕ್‌ ಇಟ್ಟುಕೊಂಡ ರೈತರು ಉತ್ತಮ ಬೆಲೆಯನ್ನು ಪಡೆಯಬಹುದಾಗಿದೆ.

ಶುಂಠಿ ಬೆಳೆದ ರೈತರು ಉತ್ತಮ ಬೆಲೆ ಸಿಗದೇ ಆತಂಕಗೊಂಡ ರೈತರಿಗೆ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ. ಅದರಲ್ಲೂ ಹಳೆಯ ಶುಂಠಿಗೆ ಬೇಡಿಕೆ ಹೆಚ್ಚಾಗಿದ್ದು, 18 ರಿಂದ 20 ಸಾವಿರ ರೂ ಇರುತ್ತದೆ. ಇನ್ನು ಈ ವರ್ಷ ಶುಂಠಿ ಬೆಳೆದ ರೈತರಿಗೆ 10 ರಿಂದ 12 ಸಾವಿರ ರೂ. ವರೆಗೆ ಬೆಲೆ ಇರುತ್ತದೆ. ಇದರಿಂದ ಕಳೆದ ವರ್ಷದ ಶುಂಠಿಯನ್ನು ಹೊಲದಲ್ಲಿ ಉಳಿಸಿಕೊಂಡ ರೈತರಿಗೆ ಬಂಪರ್‌ ಬೆಲೆ ಸಿಗುತ್ತದೆ.

ಇದನ್ನೂ ಓದಿ : Tomato price : ಟೊಮ್ಯಾಟೋ ಬೆನ್ನಲ್ಲೇ ಏರಿಕೆ ಕಂಡ ಬೆಳ್ಳುಳ್ಳಿ : ಪ್ರತೀ ಕೆಜಿಗೆ 230 ರೂ.

ಇದನ್ನೂ ಓದಿ : Tomato price hike : ಈ ರಾಜ್ಯದಲ್ಲಿ 90 ರೂ.ಗೆ ಸಿಗುತ್ತೆ ಟೊಮ್ಯಾಟೋ: ಕರ್ನಾಟಕದಲ್ಲಿ ಎಷ್ಟಿದೆ ಗೊತ್ತಾ ಬೆಲೆ ?

ಸಾಮಾನ್ಯವಾಗಿ ಏಪ್ರಿಲ್‌ ಯಿಂದ ಮೇ ತಿಂಗಳಲ್ಲಿ ಶುಂಠಿ ಬೆಳೆ ಶುರು ಮಾಡಲಾಗುತ್ತದೆ. ಸಾಧಾರಣ ಏಂಟು ತಿಂಗಳಿಗೂ ಅಧಿಕ ಅವಧಿಯ ಈ ಬೆಳೆ ಜನವರಿ ಹೊತ್ತಿಗೆ ಕೈಗೆ ಸಿಗುತ್ತದೆ. ಆದರೆ ಇದೀಗ ರೈತರು ಬೆಳೆದ ಫಸಲನ್ನು ಮಾರಾಟ ಮಾಡಿ ಹೊಸದಾಗಿ ಬಿತ್ತನೆ ಮಾಡಿ ಶುಂಠಿ ಸಸಿ ಬೆಳೆಸುವ ಸಮಯದಲ್ಲಿ ಹಿಂದೆ ಎಂದೂ ಕಾಣದ ದಾಖಲೆಯ ಬೆಲೆ ಬಂದಿರುತ್ತದೆ. ಹೀಗಾಗಿ ಹೆಚ್ಚಿನ ರೈತರಿಗೆ ಬೆಲೆ ಇದ್ದರೂ ಕೈಯಲ್ಲಿ ಬೆಳೆ ಇಲ್ಲದೇ ಬೇಸರಗೊಂಡಿದ್ದಾರೆ.

Ginger price hike: After tomato, garlic, ginger also got the price of gold

Comments are closed.