Vidwath Kaverappa : ಕೊಡಗಿನ ಹುಡುಗನಿಗೆ 7 ವಿಕೆಟ್, ರೋಚಕ ಘಟ್ಟದಲ್ಲಿ ದುಲೀಪ್ ಟ್ರೋಫಿ ಫೈನಲ್

ಬೆಂಗಳೂರು: ಕೊಡಗಿನ ಯುವ ಮಧ್ಯಮ ವೇಗದ ಬೌಲರ್ ವಿದ್ವತ್ ಕಾವೇರಪ್ಪ (Vidwath Kaverappa) ಅವರ ಮಾರಕ ದಾಳಿಗೆ ತತ್ತರಿಸಿದ ಬಲಿಷ್ಠ ಪಶ್ಚಿಮ ವಲಯ ತಂಡ, ದುಲೀಪ್ ಟ್ರೋಫಿ ಫೈನಲ್ (Duleep Trophy final 2023) ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಹಿನ್ನಡೆ ಅನುಭವಿಸಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್’ನಲ್ಲಿ ತಮ್ಮ ಅಮೋಘ ಸ್ವಿಂಗ್ ಬೌಲಿಂಗ್’ನಿಂದ ಮಿಂಚಿದ ವಿದ್ವತ್ ಕಾವೇರಪ್ಪ, ಜೀವನಶ್ರೇಷ್ಠ ಬೌಲಿಂಗ್ ಸಾಧನೆಯೊಂದಿಗೆ ಪಶ್ಚಿಮ ವಲಯ ತಂಡನನ್ನು ಕಾಡಿದರು. 53 ರನ್ನಿಗೆ 7 ವಿಕೆಟ್ ಪಡೆದ ಕಾವೇರಪ್ಪ, ಸ್ಟಾರ್ ಬ್ಯಾಟ್ಸ್’ಮನ್’ಗಳಿಂದಲೇ ತುಂಬಿರುವ ಪಶ್ಚಿಮ ವಲಯ ತಂಡವನ್ನು ಪ್ರಥಣ ಇನ್ನಿಂಗ್ಸ್’ನಲ್ಲಿ 146 ರನ್’ಗಳಿಗೆ ಆಲೌಟ್ ಮಾಡಿದರು.

ಪಶ್ಚಿಮ ವಲಯದ ಸ್ಟಾರ್ ದಾಂಡಿಗರಾದ ಚೇತೇಶ್ವರ್ ಪೂಜಾರ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್ ಸಹಿತ ಏಳು ವಿಕೆಟ್’ಗಳನ್ನು ಉಡಾಯಿಸಿದ ಕಾವೇರಪ್ಪ, ದಕ್ಷಿಣ ವಲಯ ತಂಡಕ್ಕೆ 67 ರನ್’ಗಳ ಅಮೂಲ್ಯ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟರು. ಕರ್ನಾಟಕದ ಮತ್ತೊಬ್ಬ ಯುವ ಬಲಗೈ ವೇಗಿ ವೈಶಾಖ್ ವಿಜಯ್ ಕುಮಾರ್ 33 ರನ್ನಿಗೆ 2 ವಿಕೆಟ್ ಉರುಳಿಸಿದ್ರೆ, ರಾಜ್ಯದ ಇನ್ನೊಬ್ಬ ವೇಗಿ ವಿ. ಕೌಶಿಕ್ 26 ರನ್ನಿಗೆ ಒಂದು ವಿಕೆಟ್ ಪಡೆದರು. ಪಶ್ಚಿಮ ವಲಯದ ಹತ್ತೂ ವಿಕೆಟ್’ಗಳನ್ನು ಕರ್ನಾಟಕದ ವೇಗದ ಬೌಲರ್’ಗಳೇ ಉರುಳಿಸಿದ್ದು ವಿಶೇಷ.

ಇದನ್ನೂ ಓದಿ : Yashaswi Jaiswal : ಆಡಿದ ಎಲ್ಲಾ ಟೂರ್ನಿಗಳಲ್ಲೂ ಶತಕ, ಯಾರೂ ಮಾಡಲಾಗದ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಇದನ್ನೂ ಓದಿ : Ashwin breaks Kumble record : ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆ ಮುರಿದ ತಮಿಳುನಾಡಿನ ಸ್ಪಿನ್ ಮಾಂತ್ರಿಕ ಅಶ್ವಿನ್

67 ರನ್’ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ವಲಯ ತಂಡ, 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿದ್ದು, ಒಟ್ಟಾರೆ 248 ರನ್’ಗಳ ಮುನ್ನಡೆಯಲ್ಲಿದೆ. ವಾಷಿಂಗ್ಟನ್ ಸುಂದರ್ (ಅಜೇಯ 10) ಮತ್ತು ವೈಶಾಖ್ ವಿಜಯ್ ಕುಮಾರ್ (ಅಜೇಯ 1) 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಕ್ಷಿಣ ವಲಯದ 2ನೇ ಇನ್ನಿಂಗ್ಸ್’ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ (35), ನಾಯಕ ಹನುಮ ವಿಹಾರಿ (42), ವಿಕೆಟ್ ಕೀಪರ್ ರಿಕಿ ಭುಯಿ (37) ಕಿರುಕಾಣಿಕೆಗಳೊಂದಿಗೆ ತಂಡಕ್ಕೆ ಆಸರೆಯಾದರು.

Vidwath Kaverappa: 7 wickets for the Kodagu boy, Duleep Trophy final in thrilling action

Comments are closed.