Dhoni car craze : ರಾಂಚಿ ಬೀದಿಯಲ್ಲಿ ಬಿಂದಾಸ್ ಆಗಿ 1973 Pontiac Trans Am SD-455 ಕಾರು ಓಡಿಸಿದ ಧೋನಿ

ರಾಂಚಿ: ಎರಡು ವಿಶ್ವಕಪ್ ಗೆಲುವುಗಳ ಸರದಾರ, (Dhoni car craze) ಮೂರು ಐಸಿಸಿ ಟ್ರೋಫಿಗಳ ಒಡೆಯ, ಐದು ಐಪಿಎಲ್ ಕಿರೀಟಗಳ ಸಾರಥಿ ಮಹೇಂದ್ರ ಸಿಂಗ್ ಧೋನಿ (Dhoni) ಕ್ರಿಕೆಟ್ ಜಗತ್ತು ಕಂಡ ಅದ್ಭುತ. ಧೋನಿ ಅವರಂಥಾ ಮತ್ತೊಬ್ಬ ನಾಯಕನನ್ನು ಕ್ರಿಕೆಟ್ ಜಗತ್ತು ಈ ಹಿಂದೆ ಕಂಡೇ ಇಲ್ಲ, ಮುಂದೆ ಕಾಣೋದೂ ಇಲ್ಲ. ಧೋನಿ ಅಂದ್ರೆ ಕ್ರಿಕೆಟ್ ಮಾಂತ್ರಿಕ. ನಾಯಕನಾಗಿ ಅವರಷ್ಟು ಮೇರು ಸಾಧನೆ ಮಾಡಿದ ಮತ್ತೊಬ್ಬ ಕ್ಟಾಪ್ಟನ್ ಕ್ರಿಕೆಟ್ ದುನಿಯಾದಲ್ಲೇ ಇಲ್ಲ.

ಧೋನಿ ಅವರಿಗೀಗ 42 ವರ್ಷ. ಜುಲೈ 7ರಂದು ಜನ್ಮದಿನ ಆಚರಿಸಿಕೊಂಡಿದ್ದ ಧೋನಿ 2020ರಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಧೋನಿ ಈಗ ಆಡ್ತಿರೋದು ಐಪಿಎಲ್”ನಲ್ಲಿ ಮಾತ್ರ. 2023ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ದಾಖಲೆಯ 5ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ MSD, ಮುಂದಿನ ಐಪಿಎಲ್’ನಲ್ಲೂ ಆಡಲಿದ್ದಾರಾ ಎಂಬ ಪ್ರಶ್ನೆಗ ಉತ್ತರ ಸಿಕ್ಕಿಲ್ಲ. ಇದನ್ನು ಮುಂದಿನ ಆರು ತಿಂಗಳುಗಳಲ್ಲಿ ನಿರ್ಧರಿಸುವುದಾಗಿ ಸ್ವತಃ ಧೋನಿಯವರೇ ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ : Jasprit Bumrah : ಜಸ್ಪ್ರೀತ್ ಬುಮ್ರಾ ಕಂಪ್ಲೀಟ್ ಫಿಟ್, ಆಲೂರಿನಲ್ಲಿ ಪ್ರಾಕ್ಟೀಸ್ ಮ್ಯಾಚ್ ಆಡಿದ ಟೀಮ್ ಇಂಡಿಯಾ ವೇಗಿ

ಇದನ್ನೂ ಓದಿ : Major League Cricket : ಮುಂಬೈ ಇಂಡಿಯನ್ಸ್’ಗೆ ಮತ್ತೊಂದು ಚಾಂಪಿಯನ್ ಪಟ್ಟ, ಸಿಡಿಲಬ್ಬರದ ಶತಕ ಬಾರಿಸಿ ಟ್ರೋಫಿ ಗೆದ್ದುಕೊಟ್ಟ ನಿಕೋಲಸ್ ಪೂರನ್

ಕ್ರಿಕೆಟ್‌ನಿಂದ ವಿರಾಮ ಪಡೆದಿರುವ ಧೋನಿ ಇದೀಗ ಹುಟ್ಟೂರು ಜಾರ್ಖಂಡ್’ನ ರಾಂಚಿಯಲ್ಲಿದ್ದಾರೆ. ಸಿಕ್ಕಿರುವ ಬಿಡುವಿನ ವೇಳೆಯನ್ನು ಜನ್ಮಭೂಮಿಯಲ್ಲಿ ಕಳೆಯುತ್ತಿದ್ದಾರೆ. ಧೋನಿ ಕಾರು ಪ್ರಿಯ. ಕಾರುಗಳಂದ್ರೆ ಧೋನಿಗೆ ಇನ್ನಿಲ್ಲದ ಪ್ರೀತಿ. ಕಾರು ಪ್ರಿಯ ಧೋನಿ ಹುಟ್ಟೂರು ರಾಂಚಿಯ ಬೀದಿಯಲ್ಲಿ 70ರ ದಶಕದ 1973 Pontiac Trans Am SD-455 ಕಾರನ್ನು ಓಡಿಸಿದ್ದಾರೆ. ಧೋನಿ ಓಬಿರಾಯನ ಕಾರನ್ನು ಓಡಿಸುತ್ತಿರುವ ಆ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕೆಲ ದಿನಗಳ ಹಿಂದಷ್ಟೇ ಧೋನಿ 1980ನೇ ಇಸವಿಯ ರೋಲ್ಸ್ ರಾಯ್ ಕಾರು ಓಡಿಸಿದ್ದು, ಆ ವೀಡಿಯೊ ಕೂಡ ವೈರಲ್ ಆಗಿತ್ತು. ಜಾರ್ಖಂಡ್’ನ ರಾಂಚಿಯಲ್ಲಿರುವ ಧೋನಿ ಅವರ ಮನೆಯಲ್ಲಿ ಕಾರುಗಳ ದೊಡ್ಡ ಗ್ಯಾರೇಜ್ ಇದೆ. ಅಲ್ಲಿ ಧೋನಿ 20ಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸಿದ್ದಾರೆ. ಹಳೆಯ ಮಾದರಿಯ ಕಾರುಗಳಿಂದ ಹಿಡಿದು ಹೊಸ ಹೊಸ ಕಾರುಗಳನ್ನು ಖರೀದಿಸುವುದು ಧೋನಿ ಅವರ ಹವ್ಯಾಸ.

Dhoni car craze : Dhoni drove a 1973 Pontiac Trans Am SD-455 car as a Bindas on the streets of Ranchi.

Comments are closed.