PM Fasal Yojana : ಉಡುಪಿ : ಬೆಳೆ ವಿಮೆ ತಿರಸ್ಕೃತ : ಆಕ್ಷೇಪಣೆ ಆಹ್ವಾನ

ಉಡುಪಿ : PM Fasal Yojana : ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2022-23 ರ ಮುಂಗಾರು ಹಂಗಾಮಿಗೆ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆಯಾಗದ ಪ್ರಸ್ತಾವನೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಪರಿಶೀಲಿಸಿ, ನಂತರ ಅಂತಿಮವಾಗಿ ವಿಮಾ ಸಂಸ್ಥೆಯವರು ವಿಮೆ ನೋಂದಾಯಿಸಿದ ಬೆಳೆಗೂ ಹಾಗೂ ಬೆಳೆ ಸಮೀಕ್ಷಾ ವರದಿಗೂ ತಾಳೆ ಬಾರದಿರುವುದರಿಂದ ತಿರಸ್ಕರಿಸಿರುತ್ತಾರೆ.

ತಿರಸ್ಕೃತ ಪ್ರಕರಣಗಳ ಪಟ್ಟಿಯನ್ನು ಉಡುಪಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯತ್ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಕುರಿತು ರೈತರು ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ 15 ದಿನಗಳ ಒಳಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಉಡುಪಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Tomato Prices : ಜನ ಸಾಮಾನ್ಯರಿಗೆ ಗುಡ್‌ ನ್ಯೂಸ್‌ : ಟೊಮೇಟೊ ಬೆಲೆ ಕೆಜಿಗೆ 70 ರೂ.ಗೆ ಇಳಿಸಿದ ಸರಕಾರ

ಇದನ್ನೂ ಓದಿ : PM Fasal Yojana : ರೈತರ ಗಮನಕ್ಕೆ : ಮಳೆಯಿಂದ ಬೆಳೆ ಹಾಳಾಗಿದೆಯೇ ? ಪರಿಹಾರಕ್ಕೆ ಅರ್ಜಿ ಸಲ್ಲಿಸಿ

ಹೀಗಾಗಿ ಸಂಬಂಧಪಟ್ಟ ರೈತರು ಕೂಡಲೇ ತಮ್ಮ ಆಕ್ಷೇಪಣ ಪಟ್ಟಿಗಳನ್ನು ತಯಾರಿ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒದಗಿಸಬೇಕಾಗಿದೆ. ಇದ್ದರಿಂದ ಅರ್ಹತೆ ಇರುವ ರೈತರು ಬೆಳೆ ವಿಮೆಯ ಪ್ರಯೋಜನವನ್ನು ಭವಿಷ್ಯದಲ್ಲಿ ಅಂದರೆ ವಿಪತ್ತಿನ ಕಾಲದಲ್ಲಿ ಪಡೆಯಬಹುದಾಗಿದೆ.

PM Fasal Yojana : Udupi : Crop insurance rejected : Objection invited

Comments are closed.