Pm Kisan 13th Installment : ರೈತ ಬಂಧುಗಳಿಗೆ ಗುಡ್‌ನ್ಯೂಸ್‌ : ಫೆಬ್ರವರಿ 24 ರಂದು ಪಿಎಂ ಕಿಸಾನ್‌ ಕಂತು ಬಿಡುಗಡೆ

ನವದೆಹಲಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pm Kisan 13th Installment) ಇತ್ತೀಚಿನ ಕಂತಿಗಾಗಿ ಕಾಯುತ್ತಿರುವ ಫಲಾನುಭವಿ ರೈತರು, ನಿಮಗಾಗಿ ಒಂದು ಗುಡ್‌ ನ್ಯೂಸ್‌ ಕಾದಿದೆ. ಪಿಎಂ ಕಿಸಾನ್ ಯೋಜನೆಯ 13 ನೇ ಕಂತು ಫೆಬ್ರವರಿ 24 ರಂದು ಬಿಡುಗಡೆಯಾಗುವ ಹೆಚ್ಚಿನ ಸಾಧ್ಯತೆಯಿದೆ ಎಂದು ವರದಿ ಆಗಿದೆ. ಪಿಎಂ ಕಿಸಾನ್‌ನ 13 ನೇ ಕಂತಿನ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲವಾದರೂ, 24 ಫೆಬ್ರವರಿ 2023 ರಂದು ಹಣವನ್ನು ವರ್ಗಾಯಿಸಬಹುದು ಎಂದು ವರದಿಯು ಸೂಚಿಸಿದೆ. ಇದೀಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು 4 ವರ್ಷಗಳನ್ನು ಪೂರ್ಣಗೊಳಿಸುವ ದಿನದಂದು ದೇಶದ ರೈತರಿಗೆ 13 ನೇ ಕಂತಿನ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಭಾಗವಾಗಿ, ಕೇಂದ್ರ ಸರಕಾರವು ಪ್ರತಿ ಹಣಕಾಸು ವರ್ಷದಲ್ಲಿ ರೈತ ಕುಟುಂಬಗಳಿಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವ ಮೂಲಕ 6,000 ರೂ. ಪ್ರಸಕ್ತ ಹಣಕಾಸು ವರ್ಷದ ಮೂರು ಕಂತುಗಳು ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದ್ದು, ಮುಂದಿನ ಕಂತು (13 ನೇ ಕಂತು) ಫೆಬ್ರವರಿ 24 ರಂದು ನಡೆಯಲಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಪಿಎಂ-ಕಿಸಾನ್ ಯೋಜನೆಯ 12 ನೇ ಕಂತನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು.

ಅದರಲ್ಲಿ 10 ಲಕ್ಷಕ್ಕೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 16,000 ಕೋಟಿ ರೂ. ಯೋಜನೆಯ ಪ್ರಯೋಜನ ಲಭ್ಯವಾಗಿರುತ್ತದೆ. ದೇಶದ ಜನತೆಗೆ ತಿಳಿದಿರುವಂತೆ ಪಿಎಂ ಕಿಸಾನ್ ಯೋಜನೆಯನ್ನು 2019 ರಲ್ಲಿ ಪಿಎಂ ಮೋದಿ ಅವರು ಪ್ರಾರಂಭಿಸಿದರು. ಇದು ಕೆಲವು ವಿನಾಯಿತಿಗಳಿಗೆ ಒಳಪಟ್ಟು ಕೃಷಿಯೋಗ್ಯ ಭೂಮಿಯೊಂದಿಗೆ ದೇಶಾದ್ಯಂತ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇನ್ನು ನಿಮ್ಮ ಮುಂದಿನ ಕಂತಿನ ಬಿಡುಗಡೆ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ :

  • ಮೊದಲು, ಪಿಎಂ ಕಿಸಾನ್‌ ಯೋಜನೆಯ ಅಧಿಕೃತ ವೆಬ್‌ಸೈಟ್ ಆದ https://pmkisan.gov.in/ ಪೋರ್ಟಲ್‌ಗೆ ಭೇಟಿ ನೀಡಬೇಕು.
  • ವೆಬ್‌ಸೈಟ್‌ನ ಬಲಭಾಗದಲ್ಲಿ, “ಡ್ಯಾಶ್‌ಬೋರ್ಡ್” ಎಂಬ ಹಳದಿ ಬಣ್ಣದ ಟ್ಯಾಬ್ ಇರುತ್ತದೆ.
  • ನಂತರ ಫಲಾನುಭವಿಗಳು ಡ್ಯಾಶ್‌ಬೋರ್ಡ್ ಮೇಲೆ ಕ್ಲಿಕ್ ಮಾಡಬೇಕು.
  • ಕ್ಲಿಕ್ ಮಾಡಿದ ನಂತರ, ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯಲಾಗುತ್ತದೆ.
  • ವಿಲೇಜ್ ಡ್ಯಾಶ್‌ಬೋರ್ಡ್ ಟ್ಯಾಬ್‌ನಲ್ಲಿ, ನಿಮ್ಮ ಸಂಪೂರ್ಣ ವಿವರಗಳನ್ನು ನೀವು ಭರ್ತಿ ಮಾಡಬೇಕು.
  • ರಾಜ್ಯ, ಜಿಲ್ಲೆ, ಉಪಜಿಲ್ಲೆ ಮತ್ತು ಪಂಚಾಯತ್ ಆಯ್ಕೆ ಮಾಡಬೇಕು.
  • ನಂತರ ಶೋ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಇದರ ನಂತರ ನೀವು ನಿಮ್ಮ ವಿವರಗಳನ್ನು ಆಯ್ಕೆ ಮಾಡಬಹುದು.‌

ಇದನ್ನೂ ಓದಿ : PM Kisan Yojana 13th installment : 4 ವರ್ಷ ಪೂರ್ಣಗೊಳಿಸಿದ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ : 13 ನೇ ಕಂತು ಬಿಡುಗಡೆ ಸಾಧ್ಯತೆ

ಇದನ್ನೂ ಓದಿ : Banana Price Hike : ಬಾಳೆಹಣ್ಣಿನ ಬೆಲೆ ಡಜನ್ ಗೆ 80 ರೂಪಾಯಿ : ಬೆಲೆ ಕೇಳಿ ಸುಸ್ತಾದ ಗ್ರಾಹಕರು

Pm Kisan 13th Installment: Good news for farmers: PM Kisan installment released on February 24

Comments are closed.