ಕೇರಳದಲ್ಲಿ ಕಟುಕ ದುರ್ಯೋಧನನಿಗೂ ಇದೆ ದೇವಾಲಯ – ಇಲ್ಲಿನ ಜನಾಂಗಕ್ಕೆ ಇವನೇ ಆರಾಧ್ಯ ದೈವ

Duryodhana temple kerala : ದುರ್ಯೋಧನ ಅಂದ್ರೆ ಸಾಕು ನಮಗೆ ಹಠ ಕೋಪ , ಮಾತ್ಸರ್ಯದ ನೆನಪಾಗುತ್ತೆ . ಪಾಂಡವರ ಅವನತಿಗಾಗಿ ಪ್ರತಿ ಕ್ಷಣ ಬಯಸಿದಾತ. ಅದಕ್ಕಾಗಿ ಯಾವ ಮಟ್ಟಕ್ಕೆ ಅಂದ್ರೆ ಒಂದು ಹೆಣ್ಣಿನ ಮರ್ಯಾದಾ ಹಾನಿ ಮಾಡೋಕು ಆತ ಹಿಂದೆ ಮುಂದೆ ನೋಡಿರಲಿಲ್ಲ .

Duryodhana temple kerala : ದುರ್ಯೋಧನ ಅಂದ್ರೆ ಸಾಕು ನಮಗೆ ಹಠ ಕೋಪ , ಮಾತ್ಸರ್ಯದ ನೆನಪಾಗುತ್ತೆ . ಪಾಂಡವರ ಅವನತಿಗಾಗಿ ಪ್ರತಿ ಕ್ಷಣ ಬಯಸಿದಾತ. ಅದಕ್ಕಾಗಿ ಯಾವ ಮಟ್ಟಕ್ಕೆ ಅಂದ್ರೆ ಒಂದು ಹೆಣ್ಣಿನ ಮರ್ಯಾದಾ ಹಾನಿ ಮಾಡೋಕು ಆತ ಹಿಂದೆ ಮುಂದೆ ನೋಡಿರಲಿಲ್ಲ . ಕೊನೆ ಉಸಿರೋ ವರೆಗೂ ತನ್ನ ಹಠವನ್ನು ಬಿಟ್ಟು ಕೊಡದೇ ಹೋರಾಡುತ್ತಾ ಮಡಿದಾತ. ಜೊತೆಯಲ್ಲಿ ಸಾವಿನಂಚಿನಲ್ಲಿ ಇದ್ದಾಗಲೂ ಪಾಂಡವರ ಸಾವನ್ನೇ ಬಯಸಿದ್ದ . ಇದನ್ನೆಲ್ಲಾ ಕೇಳಿದ್ರೆ ಎಂಥಾ ಕಟುಕ ಅಂತ ಅನ್ನಿಸದೇ ಇರೋದಿಲ್ಲ. ಆದ್ರೆ ಅಂಥಹ ಕಟುಕ ದುರ್ಯೋಧನನಿಗೂ ದೇವಾಲಯವಿದೆ ಗೊತ್ತಾ ? ಅದೆಲ್ಲಿ ಅಂದ್ರೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ.

Duryodhana temple kerala There is also a temple for the butcher Duryodhana in Kerala - he is the idol of the people here
Image Credit to Original Source

ಹೌದು ಕೇರಳ ಹಾಗೂ ಉತ್ತರಾಖಾಂಡ್ ನ ಬುಡಕಟ್ಟು ಜನಾಂಗಗಳಿಗೆ ಇಂದೂ ದುರ್ಯೋಧನ ಆರಾಧ್ಯ ದೈವ . ಕಾರಣ ಆತ ಅಂದು ಈ ಜನಾಂಗವನ್ನು ಆದರದಿಂದ ಕಂಡಿದ್ದನಂತೆ . ಇದೇ ಕಾರಣಕ್ಕೆ ಕೇರಳದಲ್ಲಿ ದುರ್ಯೋಧನನ ದೇವಾಲಯ ತಲೆ ಎತ್ತಿ ನಿಂತಿದೆ. ಇದು ಇಂದು, ನಿನ್ನೆ ನಿರ್ಮಾಣವಾದ ದೇವಾಲಯವಲ್ಲ.ಬದಲಾಗಿ ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಅಂದ್ರೆ ನೀವು ನಂಬಲೇಬೇಕು .

ಹೌದು ಈ ದೇವಾಲಯವು ದುರ್ಯೋಧನನ ಸಾವಿನ ನಂತರ ನಿರ್ಮಾಣವಾದ ದೇವಾಲಯ . ಇಲ್ಲಿ ವಾಸಿಸುವ ಕುರವ ಎನ್ನುವ ಜನಾಂಗ ದುರ್ಯೋಧನನನ್ನು ತಮ್ಮ ವಂಶಜನ ರೂಪದಲ್ಲಿ ಪೂಜಿಸಿಕೊಂಡು ಬಂದಿದ್ದಾರೆ . ಇಲ್ಲಿನ ಸ್ಥಳ ಪುರಾಣದ ಪ್ರಕಾರ ಒಂದು ಬಾರಿ ದುರ್ಯೋಧನ ಪಾಂಡವರನ್ನು ಅರಸಿಕೊಂಡು ಕೇರಳದ ಈ ಪ್ರದೇಶಕ್ಕೆ ತನ್ನಪರಿವಾರ ಸಮೇತನಾಗಿ ಬಂದಿದ್ದನಂತೆ. ಆಗ ಈ ಕುರವ ಜನಾಂಗ ಆತನನ್ನು ಸತ್ಕರಿಸಿತ್ತಂತೆ .

Duryodhana temple kerala There is also a temple for the butcher Duryodhana in Kerala - he is the idol of the people here
Image Credit to Original Source

ಇದರಿಂದ ಖುಷಿಯಾದ ಸುಯೋಧನ, ತನ್ನ ಕುಲದ ಹೆಸರಿನಿಂದಲೇ ನಿಮ್ಮ ಕುಲವನ್ನು ಕರೆಯಲಿ ಅಂತ ಹರಸಿ ಭೂಮಿ ನೀಡಿದ್ದನಂತೆ. ಅವನ ಮರಣಾ ನಂತರ ಇದೇ ಜಾಗದಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ ಅಂತಾರೆ ಇಲ್ಲಿನ ಸ್ಥಳೀಯರು.ಇನ್ನೊಂದು ಕಥೆಯ ಪ್ರಕಾರ ಒಂದು ಬಾರಿ ದುರ್ಯೋಧನ ಪಾಂಡವರನ್ನು ಅರಸಿಕೊಂಡು ಈ ಜಾಗಕ್ಕೆ ಬಂದಾಗ ಅತೀವ ಬಾಯಾರಿಕೆ ಆಯಿತಂತೆ.

ಇದನ್ನೂ ಓದಿ : ಭಾರತದಲ್ಲೇ ಹುಟ್ಟಿದ್ದನಂತೆ ರಾವಣ – ರಾವಣನಿಗೂ ಭಾರತದಲ್ಲಿವೆ ಹಲವು  ದೇವಾಲಯಗಳು 

ಆಗ ಅಲ್ಲೇ ಇದ್ದ ಮುದುಕಿಯೊಬ್ಬಳು ಹೆಂಡವನ್ನು ನೀಡಿದಳಂತೆ . ತದ ನಂತರ ಆಕೆಗೆ ಒಂದು ಯೋಚನೆಯಾಯಿತಂತೆ ತನ್ನಂತ ಕೀಳು ಜಾತಿಯವಳು ರಾಜನಿಗೆ ಹೆಂಡ ಕೊಟ್ಟಿದ್ದು ತಪ್ಪು ಎಂಬುದಾಗಿ ಮರುಗಿದಳಂತೆ . ಆಗ ದುರ್ಯೋಧನ ತಾಯಿ, ಬಾಯಾರಿಕೆ ನೀಗಿಸಿದ ನಿನ್ನನ್ನು ಜಾತಿಯಿಂದ ನಾನು ನೋಡುವುದಿಲ್ಲ ಎಂದನಂತೆ . ಹಾಗೂ ಆಕೆಯ ಜನಾಂಗವೂ ತನ್ನ ಜನಾಂಗದ ಹೆಸರಿನಲ್ಲಿ ಬೆಳೆಯಲಿ ಎಂದನಂತೆ . ಜೊತೆಗೆ ಆಕೆಗೆ ಭೂಮಿ ಹಾಗೂ ಸಂಪತ್ತು ಕೂಡಾ ದಾನ ನೀಡಿದ ಎಂಬ ನಂಬಿಕೆ ಇದೆ . ಹೀಗಾಗಿ ಈ ದೇವಾಲಯದಲ್ಲಿ ಹೆಂಡವನ್ನು ಭಕ್ತರು ನೈವೇದ್ಯವಾಗಿ ನೀಡುತ್ತಾರೆ .

Duryodhana temple kerala There is also a temple for the butcher Duryodhana in Kerala - he is the idol of the people here
Image Credit to Original Source

ಈ ದೇವಾಲಯದ ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ದುರ್ಯೋಧನ ಯಾವುದೇ ವಿಗ್ರಹವೂ ಕೂಡಾ ಇಲ್ಲ . ಬದಲಾಗಿ ಬೃಂದಾವನ ಮಾದರಿ ಅಂದ್ರೆ ಎತ್ತರದ ಕಟ್ಟೆಯನ್ನು ನಿರ್ಮಿಸಿ ಅದಕ್ಕೆ ಪೂಜೆಯನ್ನು ಸಲ್ಲಿಸುತ್ತಾರೆ. ಈ ದೇವಾಲಯಕ್ಕೆ ಪೊರುವಾಝೈ ಪೆರುವಿರುತ್ತೈ ಮಲನಾದ ಅಂತ ಕರೆಯುತ್ತಾರೆ . ಇನ್ನು ಇಲ್ಲಿ ಪ್ರತಿ ವರ್ಷ ಮಾರ್ಚ್ನಲ್ಲಿ ರಥೋತ್ಸವನ್ನು ನಡೆಸಲಾಗುತ್ತೆ . ಇದನ್ನು ನೋಡೋಕೆ ಅಂತಾನೆ ಲಕ್ಷಾಂತ ಮಂದಿ ಇಲ್ಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ : ಇದು ವಾಮನ ಮಹಿಮೆಯನ್ನು ಸಾರುವ ಕ್ಷೇತ್ರ : ಇಲ್ಲೇ ವಾಮನ ಬಲಿಚಕ್ರವರ್ತಿ ಪಾತಾಳಕ್ಕೆ ತುಳಿದಿದ್ದನಂತೆ

ಹಾಗೂ ಇಲ್ಲಿ ಹರಕೆ ಕಟ್ಟಿಕೊಂಡ್ರೆ ಸಕಲ ಇಷ್ಟಾರ್ಥಗಳು ಈಡೇರುತ್ತೆ ಅನ್ನೋದು ಇಲ್ಲಿನ ನಂಬಿಕೆ . ಇನ್ನು ಈ ದೇವಾಲಯದ ವಿಚಾರಕ್ಕೆ ಬರೋದಾದ್ರೆ ಇದು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಮಲ್ಲಂಗದಲ್ಲಿದೆ. ಕೊಲ್ಲಂ ನಿಂದ ಖಾಸಗಿ ವಾಹನದ ಮೂಲಕ ಇಲ್ಲಿಗೆ ತಲುಪಬಹುದು. ಇನ್ನು ಇಲ್ಲಿ ಪಕ್ಕದಲ್ಲೇ ಶಕುನಿ ದೇವಾಲಯವಿದ್ದು, ಅಲ್ಲಿಗೂ ನೀವು ಭೇಟಿ ನೀಡಬಹುದು .

Duryodhana temple kerala There is also a temple for the butcher Duryodhana in Kerala – he is the idol of the people here

Comments are closed.