Pm kisan : ರೈತರಿಗೆ ದೀಪಾವಳಿ ಗಿಫ್ಟ್ ಕೊಟ್ಟ ಮೋದಿ : ಪಿಎಂ ಕಿಸಾನ್ 12 ನೇ ಕಂತು ಬಿಡುಗಡೆ

ನವದೆಹಲಿ:(Pm kisan) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಎರಡು ದಿನಗಳ ಕಾಲ ಆಯೋಜಿಸಿರುವ ಪ್ರಧಾನ ಮಂತ್ರಿ ಕೃಷಿ ಕಿಸಾನ್ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ ಈ ವೇಳೆಯಲ್ಲಿ ಕೃಷಿ ಸಮ್ಮಾನ್ ಯೋಜನೆಯಡಿಯಲ್ಲಿ ರೈತರಿಗೆ ನೀಡುತ್ತಿರುವ ಗೌರವ ಧನದ 12 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯ ಮೂಲಕ 16 ಸಾವಿರ ಕೋಟಿ ರೂಪಾಯಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲಿದೆ.

(Pm kisan)ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಸಮ್ಮಾನ್ ಯೋಜನೆಯ 12 ನೇ ಕಂತಿನ ಮೊತ್ತವನ್ನು ಬಿಡುಗಡೆಗೊಳಿಸುವ ಮೂಲಕ ದೀಪಾವಳಿ ಹೊತ್ತಲೇ ರೈತರಿಗೆ ಗಿಫ್ಟ್ ಕೊಟ್ಟಿದ್ದಾರೆ.ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಹಣವನ್ನು ಈ ಯೋಜನೆಯ ಮೂಲಕ ತಲುಪಿಸಲಾಗುತ್ತದೆ. ಕಿಸಾನ್‌ ಸಮ್ಮಾನ್‌ ನಿಧಿಯ 16,000 ಕೋಟಿ ಯೋಜನೆಯ ಅಡಿಯಲ್ಲಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರಂತೆ ಮೂರು ಕಂತುಗಳ ಮೂಲಕ ತಲಾ 2000 ರೂಪಾಯಿಯನ್ನು ನೀಡಲಾಗುತ್ತದೆ. ಹಲವಾರು ರೈತ ಕುಟುಂಬಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆದು ಕೊಂಡಿದೆ .ರೈತ ಕುಟುಂಬಗಳಿಗೆ ಇನ್ನು ಹೆಚ್ಚಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಏನಿದು ಕಿಸಾನ್ ಸಮ್ಮಾನ್ (Pm kisan) ಸಮ್ಮೇಳನ ? ಏನಿದರ ಉದ್ದೇಶ

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಅಕ್ಟೋಬರ್ 17 ಮತ್ತು 18ರಂದು ಕಿಸಾನ್ ಸಮ್ಮಾನ್ ಸಮ್ಮೇಳನವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ದೇಶದಲ್ಲಿರುವ 13,000ಕ್ಕೂ ರೈತರನ್ನು ಮತ್ತು 1,500 ರಷ್ಟು ಸ್ಟಾರ್ಟ್‌ಅಫ್‌ಗಳನ್ನು ಒಟ್ಟುಗೂಡಿಸುವಂತಹ ಗುರಿಯನ್ನು ಹೊಂದಲಾಗಿದೆ.ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ.ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌,ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಮುನ್ಸುಖ್‌ ಮಾಂಡವಿಯಾ,ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಭಗವಂತ ಖೂಬಾ, ಕೇಂದ್ರ ಕೃಷಿ ರಾಜ್ಯ ಸಚಿವರಾದ ಕೈಲಾಶ್‌ ಚೌಧರಿ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದಾರೆ.

ಇದನ್ನೂ ಓದಿ:BMW Car Accident Live : ಬಿಎಂಡಬ್ಲ್ಯು ಕಾರಲ್ಲಿ 230 kM ವೇಗದ ಡ್ರೈವಿಂಗ್, ವಿಡಿಯೋ ಹುಚ್ಚಿಗೆ 4 ಬಲಿ

ಇದನ್ನೂ ಓದಿ:KSLU Recruitment 2022 : KSLU ನೇಮಕಾತಿ 2022 :ಸಹಾಯಕ ಪ್ರಾಧ್ಯಾಪಕರು, ಅತಿಥಿ ಅಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ600 ಪ್ರದಾನ ಮಂತ್ರಿ ಕಿಸಾನ್‌ ಸಮೃದ್ಧಿ ಕೇಂದ್ರಗಳನ್ನು ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಯೋಜನೆಯ ಮುಖ್ಯ ಉದ್ದೇಶ ರೈತರ ಅಗತ್ಯಗಳನ್ನೂ ಪೂರೈಸಲು ದೇಶದಲ್ಲಿ ಹೆಚ್ಚು ರಸಗೊಬ್ಬರ ಅಂಗಡಿಗಳನ್ನು ತೆರೆಯಲಾಗುತ್ತದೆ.ಒಟ್ಟು 3.3 ಲಕ್ಷಕ್ಕೂ ಹೆಚ್ಚು ರಸಗೊಬ್ಬರ ಅಂಗಡಿಗಳನ್ನು ತೆರೆಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಿ ಎಂ ಕಿಸಾನ್‌ ಸಮ್ಮಾನ್‌ ಸಮ್ಮೇಳನದಲ್ಲಿ ಉದ್ಘಾಟನೆ ಮಾಡಿರುವ ಪ್ರಧಾನ ಮಂತ್ರಿ ಭಾರತ್‌ ಯುರಿಯಾ ಬ್ಯಾಗ್ ಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ದೇಶೀಯ ವಸ್ತುಗಳನ್ನು ಬಳಕೆ ಮಾಡಬೇಕೆಂಬ ಧ್ಯೇಯವನ್ನಿಟ್ಟುಕೊಂಡು ಭಾರತ್ ಎಂಬ ರಸಗೊಬ್ಬರವನ್ನು ಪರಿಚಯಿಸಲಾಗುತ್ತಿದೆ. ಅಲ್ಲದೇ ಅಗ್ರಿ ಸ್ಟಾರ್ಟಾಪ್‌ ಕಾನ್ಲ್ಕೆವ್‌ ಮತ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಈ ಸಮಾವೇಶದ ಮೂಲಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕೋಟಿಗೂ ಹೆಚ್ಚು ರೈತರನ್ನು ಒಗ್ಗೂಡಿಸಲಿದ್ದಾರೆ .

ಇದನ್ನೂ ಓದಿ:KPSC Recruitment 2022 : KPSC ನೇಮಕಾತಿ 2022 : ಸ್ಟ್ಯಾಟಿಸ್ಟಿಕಲ್ ಇನ್‌ಸ್ಪೆಕ್ಟರ್‌ ಹುದ್ದೆಗೆ ಅರ್ಜಿ ಆಹ್ವಾನ

Modi gave Diwali gift to farmers: PM Kisan 12th installment released

Comments are closed.