ಕರಾವಳಿಯಲ್ಲಿ ಭತ್ತದ ಕಟಾವು ಕಾರ್ಯಕ್ಕೆ ಮಳೆಯ ಆತಂಕ : ಕರ್ನಾಟಕದಲ್ಲಿ ನವೆಂಬರ್‌ 5ರ ವರೆಗೆ ಸುರಿಯಲಿದೆ ಭಾರೀ ಮಳೆ

ಕಳೆದ ಒಂದು ವಾರದಿಂದಲೂ ಉಡುಪಿ ಜಿಲ್ಲೆಯ ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಉಡುಪಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಭತ್ತದ ಕಟಾವು ಕಾರ್ಯ ನಡೆಯುತ್ತಿದೆ. ಕಟಾವು ಯಂತ್ರಗಳನ್ನು ಬಳಸಿ ರೈತರು ಕಟಾವು ಕಾರ್ಯ ನಡೆಸುತ್ತಿದ್ದಾರೆ.

ಉಡುಪಿ : (karnataka weather Report)  ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೀಗ ಭತ್ತದ ಕಟಾವು ಕಾರ್ಯ ಆರಂಭಗೊಂಡಿದೆ. ಆದರೆ ಹವಾಮಾನ ಇಲಾಖೆ ಕರ್ನಾಟಕ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನವೆಂಬರ್‌ 5 ರ ವರೆಗೆ ಬಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಇದರಿಂದಾಗಿ ಭತ್ತದ ಕಟಾವು ಕಾರ್ಯ ನಡೆಸುತ್ತಿರುವ ರೈತರಿಗೆ ಆತಂಕ ಶುರುವಾಗಿದೆ. ಕರ್ನಾಟಕದ ಹವಾಮಾನ ವರದಿ ಇಲ್ಲಿದೆ.

Karnataka weather Report Fear of rain for paddy harvesting in the coastal Karnataka Heavy rain alert till November 5
Image credit to Original Source

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೃಷಿಕರ ಜೀವನಾಧಾರವಾಗಿರುವುದು ಭತ್ತ. ಈ ಬಾರಿ ಮಳೆಯ ಕಣ್ಣಾಮುಚ್ಚಾಲೆ ಆಟದಿಂದಾಗಿ ಭತ್ತದ ಕೃಷಿಗೆ ಮಳೆಯ ಕೊರತೆ ಉಂಟಾಗಿತ್ತು. ಜೂನ್‌, ಜುಲೈ ತಿಂಗಳಲ್ಲಿ ಕೈಕೊಟ್ಟಿದ್ದ ಮಳೆ ಸೆಪ್ಟೆಂಬರ್‌ನಲ್ಲಿ ಸುರಿದಿತ್ತು. ಭತ್ತ ತೆಲೆ ಮೂಡುವ ಹೊತ್ತಲ್ಲೆ ಮಳೆಯಾಗಿರುವುದು ಭತ್ತದ ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ರೈತರು.

ಆದ್ರೀಗ ಕಳೆದ ಒಂದು ವಾರದಿಂದಲೂ ಉಡುಪಿ ಜಿಲ್ಲೆಯ ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಉಡುಪಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಭತ್ತದ ಕಟಾವು ಕಾರ್ಯ ನಡೆಯುತ್ತಿದೆ. ಕಟಾವು ಯಂತ್ರಗಳನ್ನು ಬಳಸಿ ರೈತರು ಕಟಾವು ಕಾರ್ಯ ನಡೆಸುತ್ತಿದ್ದಾರೆ. ಒಂದೊಮ್ಮೆ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಒಂದು ವಾರಗಳ ಕಾಲ ಸುರಿದ್ರೆ ಭತ್ತದ ಪೈರು ಸಂಪೂರ್ಣವಾಗಿ ನೆಲಕಚ್ಚುವ ಸಾಧ್ಯತೆಯಿದೆ.

ಇದನ್ನೂ ಓದಿ : ವಾರಕ್ಕೆ 5 ದಿನ ಕೆಲಸ, ವೇತನದಲ್ಲಿ ಶೇ.15ರಷ್ಟು ಹೆಚ್ಚಳ : ನೌಕರರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಬಹುತೇಕ ಕಡೆಗಳಲ್ಲಿ ಬಿಸಿಲ ಆರ್ಭಟಕ್ಕೆ ಭತ್ತದ ಪೈರು ಸಂಪೂರ್ಣವಾಗಿ ಒಣಗಿದೆ. ಮಳೆ ಸುರಿದ್ರೆ ಭತ್ತ ತೆನೆ ಸಂಪೂರ್ಣವಾಗಿ ಉದುರಿ ಹೋಗಲಿದೆ. ಇದರಿಂದಾಗಿ ಕರಾವಳಿ ಭಾಗದ ರೈತರಿಗೆ ಕೋಟ್ಯಾಂತರ ರೂಪಾಯಿ ನಷ್ಟದ ಭೀತಿಯಿದೆ. ಅಲ್ಲದೇ ಕಟಾವು ಸಂದರ್ಭದಲ್ಲಿಯೇ ಮಳೆ ಸುರಿದ್ರೆ ಹೈನುಗಾರಿಕೆಗೆ ನೆರವಾಗುವ ಹುಲ್ಲು ಉಪಯೋಗಕ್ಕೆ ಬಾರದಂತೆ ಆಗುತ್ತದೆ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 47,390 ಹೆಕ್ಟೇರ್‌ ಭತ್ತ ಉತ್ಪಾದನೆ ನಿರೀಕ್ಷೆ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೃಷಿಕರು ಭತ್ತದ ಕೃಷಿಯನ್ನು ಮಾಡಿದ್ದಾರೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಒಟ್ಟು 47,390 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬಿತ್ತನೆ ಕಾರ್ಯವನ್ನು ನಡೆಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9,389 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ.

Karnataka weather Report Fear of rain for paddy harvesting in the coastal Karnataka Heavy rain alert till November 5
Image credit to Original Source

ಈ ಬಾರಿ ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 17,650 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಸಲಾಗಿದ್ದು, ಕುಂದಾಪುರ ತಾಲೂಕಿನಲ್ಲಿ 13,250 ಹೆಕ್ಟೇರ್‌, ಕಾರ್ಕಳದಲ್ಲಿ 7,199 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ನಡೆಸಲಾಗಿದೆ. ಉಡುಪಿ ಮತ್ತು ದಕ್ಷಣ ಕನ್ನಡ ಜಿಲ್ಲೆಗೆ ಹೋಲಿಕೆ ಮಾಡಿದ್ರೆ ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ ಅತೀ ಹೆಚ್ಚಿನ ಪ್ರಮಾಣದಲ್ಲಿದೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನಲ್ಲಿ 1,700 ಹೆಕ್ಟೇರ್‌, ಮೂಡಬಿದ್ರೆಯಲ್ಲಿ 1,650, ಮಂಗಳೂರಿನಲ್ಲಿ 1,500 ಹೆಕ್ಟೇರ್‌, ಬಂಟ್ವಾಳದಲ್ಲಿ 1,500 ಬೆಳ್ತಂಗಡಿ 1,600 ಹಕ್ಡೇರ್‌, ಸುಳ್ಯದಲ್ಲಿ 210, ಪುತ್ತೂರು 205, ಕಡಬ 165 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.

Karnataka weather Report Fear of rain for paddy harvesting in the coastal Karnataka Heavy rain alert till November 5
Image credit to Original Source

ಕರಾವಳಿ ಜಿಲ್ಲೆಗಳಲ್ಲಿಯೇ ರೈತರು ಅತೀ ಹೆಚ್ಚಿನ ಪ್ರಮಾಣದಲ್ಲಿ ಎಂಒ 4 ತಳಿಯ ಭತ್ತವನ್ನು ನಾಟಿ ಮಾಡಿದ್ದರು. ಗಾಳಿ, ಮಳೆಗೆ ಈ ಭತ್ತದ ಪೈರು ತುಂಡಾಗುವ ಸಾಧ್ಯತೆ ತೀರಾ ಕಡಿಮೆ. ಆದರೆ ಈ ಬಾರಿ ಭತ್ತದ ಪೈರು ಕೃಷಿಕರ ನಿರೀಕ್ಷೆಯಷ್ಟು ಇಳುವರಿ ಬಂದಿಲ್ಲ. ಮಳೆ, ಬಿಸಿಲ ಆರ್ಭಟಕ್ಕೆ ಕರಾವಳಿಯ ಭತ್ತದ ಕೃಷಿ ಬಲಿಯಾಗಿದೆ.

ಇದೀಗ ಅಳಿದುಳಿದ ಭತ್ತದ ಫಸಲನ್ನು ಮನೆ ತುಂಬಿಸಿಕೊಳ್ಳುವುದಕ್ಕೂ ಮಳೆಯ ಆತಂಕ ಶುರುವಾಗಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ ನವೆಂಬರ್‌ ತಿಂಗಳು ಪೂರ್ತಿ ಮಳೆ ಸುರಿದ್ರೆ ಕರಾವಳಿಯ ಭತ್ತದ ಕೃಷಿ ಸಂಪೂರ್ಣವಾಗಿ ನೆಲಕಚ್ಚುವ ಭೀತಿಯಿದೆ.

ನವೆಂಬರ್‌ 5ರ ವರೆಗೆ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಕರ್ನಾಟಕ ರಾಜ್ಯದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ನವೆಂಬರ್‌ ೫ರ ವರೆಗೆ ಭಾರೀ ಮಳೆ ಸುರಿಯುವ ಕುರಿತು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಜೊತೆಗೆ ನವೆಂಬರ್‌ ಇಡೀ ತಿಂಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ನೀವು ಬಿಪಿಎಲ್‌ ಕಾರ್ಡ್‌ ಹೊಂದಿದ್ದೀರಾ ? ಜೊತೆಗೆ ಕಾರು ಇದ್ಯಾ ? ಹಾಗಾದ್ರೆ ರದ್ದಾಗುತ್ತೆ ನಿಮ್ಮ ರೇಷನ್‌ ಕಾರ್ಡ್‌

ನವೆಂಬರ್‌ 2 ಮತ್ತು 3 ರಂದು ಕರ್ನಾಟಕ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿರಲಿದೆ. ಅದ್ರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಸಮುದ್ರ ಹಾಗೂ ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಮುನ್ಸೂಚನೆಯನ್ನು ನೀಡಿವೆ.

Karnataka weather Report Fear of rain for paddy harvesting in the coastal Karnataka Heavy rain alert till November 5
Image credit to Original Source

ಕರ್ನಾಟಕ ಮಾತ್ರವಲ್ಲದೇ ನೆರೆಯ ಕೇರಳ, ತಮಿಳುನಾಡು, ಒಡಿಶಾ, ಸಿಕ್ಕಿಂ, ಪಶ್ಚಿಮ ಬಂಗಾಳ, ಆಂಧ್ರ ಕರಾವಳಿ, ರಾಜ್ಯಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಂಡಮಾನ್‌ ನಿಕೋಬಾರ್ ನಲ್ಲಿಯೂ ಮಳೆ ಸುರಿಯಲಿದೆ. ಇನ್ನು ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರದಲ್ಲಿ ಹಿಮಮಳೆಯಾಗುವ ಕುರಿತು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ.

ಕೇರಳ ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಈಗಾಗಲೇ ಕೇರಳ ರಾಜ್ಯ ಹಲವು ಕಡೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದೀಗ ಕೇರಳದ ಕೊಲ್ಲಂ, ಇಡುಕ್ಕಿ, ಪಾಲಕ್ಕಾಡ್‌, ತ್ರಿಶೂರ್‌, ವಯನಾಡ್‌, ಕೋಝಿಕೋಡ್‌, ಕಣ್ಣೂರು, ಎರ್ನಾಕುಲಂ, ಪತ್ತಿನಂತಿಟ್ಟ ಮುಂತಾದ ಕಡೆಗಳಲ್ಲಿ ಭಾರೀ ಮಳೆಯ ಜಿಲ್ಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

Karnataka weather Report Fear of rain for paddy harvesting in the coastal Karnataka Heavy rain alert till November 5

Comments are closed.