Mathura fire accident: 3 ಅಂತಸ್ತಿನ ಬಟ್ಟೆ ಶೋರೂಮ್ ನಲ್ಲಿ ಬೆಂಕಿ ಅವಘಡ

ಮಥುರಾ: (Mathura fire accident) ಬಟ್ಟೆ ಶೋರೂಮ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂ ಮೌಲ್ಯದ ಬಟ್ಟೆ, ಶೂಗಳು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಕೊಟ್ವಾಲಿ ನಗರದ ಧೌಲಿ ಪಿಯಾವೊ ಪ್ರದೇಶದಲ್ಲಿ ನಡೆದಿದೆ. ಮೂರು ಅಂತಸ್ತಿನ ಶೋರೂಂ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಟ್ವಾಲಿ ನಗರದ ಧೌಲಿ ಪಿಯಾವೊ ಪ್ರದೇಶದಲ್ಲಿದ್ದ ಮೂರು ಅಂತಸ್ತಿನ ಬಟ್ಟೆ ಅಂಗಡಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಮಾಹಿತಿ ತಿಳಿದ ಕೂಡಲೇ ಹತ್ತಾರು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದರು. ಸುಮಾರು ಮೂರು ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂ ಮೌಲ್ಯದ ಬಟ್ಟೆ, ಶೂಗಳು ಸುಟ್ಟು ಭಸ್ಮವಾಗಿವೆ.

ಬೆಂಕಿ ನಂದಿಸುವ ಕಾರ್ಯಾಚರಣೆಯ ವೇಳೆ ಗಾಳಿಯ ವೇಗ ಜಾಸ್ತಿಯಾಗಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ನಿರಂತರ ಪ್ರಯತ್ನಪಟ್ಟರು. ಶೋರೂಂನ ಮುಂಭಾಗವನ್ನು ಬುಲ್ಡೋಜರ್‌ನಿಂದ ಅಳಿಸಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಲಾಯಿತು.

“ಕಟ್ಟಡದ ಮೂರು ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. 6-7 ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿವೆ. ಈಗ ಬೆಂಕಿ ನಿಯಂತ್ರಣದಲ್ಲಿದೆ, ನಾವು ಬೆಂಕಿಯನ್ನು ಪಕ್ಕದ ಕಟ್ಟಡಗಳಿಗೆ ಹರಡಲು ಬಿಡಲಿಲ್ಲ” ಎಂದು ಅಗ್ನಿಶಾಮಕ ಅಧಿಕಾರಿ ಹೇಳಿದರು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಸ್ಥಳದಲ್ಲಿದ್ದ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Teacher murder: ಆನ್‌ಲೈನ್ ತರಗತಿ ವೇಳೆ ಶಿಕ್ಷಕ ಕತ್ತು ಹಿಸುಕಿ ಕೊಲೆ

ಇದನ್ನೂ ಓದಿ : Padma Royal Challenge Scheme Fraud: ಕುಂದಾಪುರದಲ್ಲಿ ಪದ್ಮಾ ರಾಯಲ್‌ ಚಾಲೆಂಜ್‌ ಸ್ಕೀಮ್‌ ಹೆಸರಲ್ಲಿ ಕೋಟ್ಯಾಂತರ ರೂ ವಂಚನೆ: ಪ್ರಕರಣ ದಾಖಲು

ಇದನ್ನೂ ಓದಿ : Beltangadi Auto accident: ಸೇತುವೆ ಗೋಡೆಗೆ ಆಟೋ ರಿಕ್ಷಾ ಢಿಕ್ಕಿ: 1.2 ವರ್ಷದ ಮಗು ಸಾವು, ಮೂವರಿಗೆ ಗಾಯ

ಘಟನೆಯ ಕುರಿತು ಮಥುರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಥುರಾ ನಗರ ಎಸ್ಪಿ ಮತ್ತು ಮಥುರಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪರಿಸ್ಥಿತಿಯನ್ನು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

Mathura fire accident: A fire broke out in a 3-storey clothing showroom

Comments are closed.