Tomato price hike : ಈ ರಾಜ್ಯದಲ್ಲಿ 90 ರೂ.ಗೆ ಸಿಗುತ್ತೆ ಟೊಮ್ಯಾಟೋ: ಕರ್ನಾಟಕದಲ್ಲಿ ಎಷ್ಟಿದೆ ಗೊತ್ತಾ ಬೆಲೆ ?

ನವದೆಹಲಿ : Tomato price hike : ಕೆಲವು ವಾರಗಳ ಹಿಂದೆ ಭಾರತದ ವಿವಿಧ ರಾಜ್ಯದ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿತ್ತು. ಕೆಜಿಗೆ 150 ರಿಂದ 200 ರೂ.ವರೆಗೆ ಮಾರಾಟ ಮಾಡಲಾಗುತ್ತಿತ್ತು. ನಾಗರಿಕರಿಗೆ ಮತ್ತೊಮ್ಮೆ ಟೊಮೆಟೊ ಖರೀದಿಸಲು ಸರಕಾರ ಉತ್ತಮ ಘೋಷಣೆ ಮಾಡಿದೆ.ಟೊಮೇಟೊ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಜನರಿಗೆ ಕೈಗೆಟಕುವ ದರದಲ್ಲಿ ಟೊಮ್ಯಾಟೊ ಲಭ್ಯವಾಗುವಂತೆ ಸರಕಾರ ಮಾಡಲಿದೆ.

ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಪ್ರತಿ ಕೆಜಿಗೆ 90 ರೂಪಾಯಿಗಳ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲು ಪ್ರಾರಂಭಿಸುತ್ತದೆ. ನಗರದಲ್ಲಿ ಮೊಬೈಲ್ ವ್ಯಾನ್‌ಗಳಲ್ಲಿ ಈ ಟೊಮೆಟೊಗಳನ್ನು ಮಾರಾಟ ಮಾಡಲಾಗುವುದು. ವರದಿಗಳ ಪ್ರಕಾರ, ಗುರುವಾರ ಉನ್ನತ ಅಧಿಕಾರಿಗಳು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ದಕ್ಷಿಣ ರಾಜ್ಯಗಳಲ್ಲಿ ಜನವರಿ ಯಿಂದ ಫೆಬ್ರವರಿಯಲ್ಲಿ ಬಿತ್ತನೆ ಮಾಡಿದ ಟೊಮೆಟೊ ಜೂನ್‌ ತಿಂಗಳಿಂದ ಜುಲೈನಲ್ಲಿ ಮಾರುಕಟ್ಟೆಗೆ ಬರಬೇಕಿತ್ತು. ಆದರೆ ಸುದೀರ್ಘ ಕಾಲದ ಚಳಿ, ಕಡು ಬೇಸಿಗೆ ಮತ್ತು ಮಳೆ ವಿಳಂಬದಿಂದಾಗಿ ನಿರೀಕ್ಷಿತ ಇಳುವರಿ ಆಗಿಲ್ಲ. ಕರ್ನಾಟಕ ಆಂಧ್ರಪ್ರದೇಶದ ಟೊಮೆಟೊ ಹೊಲಗಳಲ್ಲಿ ಎಲೆಸುತ್ತು ಶಿಲೀಂದ್ರ ರೋಗಗಳು ಕಾನೀಸಿಕೊಂಡ ಕಾರಣ ಇಳುವರಿ ಕುಂಠಿತವಾಗಿದೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಟೊಮೆಟೊ ಬೆಳೆಗೂ ಬೇರೆ ಬೇರೆ ಶಿಲೀಂದ್ರ ರೋಗಗಳು ಕಾಣಿಸಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಬೆಲೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಏರಿಕೆ ಕಂಡಿದೆ.

ನೋಯ್ಡಾ, ಗ್ರೇಟರ್ ನೋಯ್ಡಾದ ರಜನಿಗಂಧ ಚೌಕ್‌ನಲ್ಲಿರುವ ಎನ್‌ಸಿಸಿಎಫ್ ಕಚೇರಿ ಮತ್ತು ಇತರ ಸ್ಥಳಗಳಲ್ಲಿ ಮೊಬೈಲ್ ವ್ಯಾನ್‌ಗಳ ಮೂಲಕ ಟೊಮೆಟೊಗಳನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹಕಾರಿಯು ವಾರಾಂತ್ಯದಲ್ಲಿ ಲಕ್ನೋ, ಕಾನ್ಪುರ ಮತ್ತು ಜೈಪುರ ಸೇರಿದಂತೆ ಹೆಚ್ಚುವರಿ ನಗರಗಳಲ್ಲಿ ಮಾರಾಟವನ್ನು ಪ್ರಾರಂಭಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Milk Price Rise : ಗ್ರಾಹಕರಿಗೆ ಬರೆ, ಹಾಲಿನ ದರ 5 ರೂ. ಹೆಚ್ಚಳ

ಇದನ್ನೂ ಓದಿ : Tomato White Virus Problem : ಟೊಮ್ಯಾಟೋಗೆ ಮಾರುಕಟ್ಟೆಯಲ್ಲಿ ದರ ಇದ್ರೂ, ರೈತರಿಗಿಲ್ಲ ಅದೃಷ್ಟ

ಕೇಂದ್ರ ಸರಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಸಲು ಒಪ್ಪಿಗೆ ನೀಡಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಟೊಮೆಟೊ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ಇದನ್ನು ಮಾಡಲಾಗಿದೆ. ಫೆಡರಲ್ ಏಜೆನ್ಸಿ ನಾಫೆಡ್ ಈ ರಾಜ್ಯಗಳಿಂದ ಸರ್ಕಾರದ ಪರವಾಗಿ ಟೊಮೆಟೊಗಳನ್ನು ಖರೀದಿಸುತ್ತದೆ. ದೆಹಲಿ ಮತ್ತು NCR ಪ್ರದೇಶಗಳಲ್ಲಿ ಹಲವಾರು ವಿತರಣಾ ಕೇಂದ್ರಗಳಲ್ಲಿ ಇದನ್ನು ವಿತರಿಸಲಾಗುತ್ತದೆ.

Tomato price hike: In this state, you can get it for Rs. 90. Tomato: Do you know the price in Karnataka?

Comments are closed.