Ashwin breaks Kumble record : ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆ ಮುರಿದ ತಮಿಳುನಾಡಿನ ಸ್ಪಿನ್ ಮಾಂತ್ರಿಕ ಅಶ್ವಿನ್

ಡೊಮಿನಿಕಾ : Ashwin breaks Kumble record : ತಮಿಳುನಾಡಿನ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin), ಕರ್ನಾಟಕದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಯವರ (Anil Kumble) ದಾಖಲೆಯನ್ನು ಪುಡಿಗಟ್ಟಿದ್ದಾರೆ.

ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ (India Vs West Indies 1st test) ಆರ್. ಅಶ್ವಿನ್ ಐದು ವಿಕೆಟ್’ಗಳ ಸಾಧನೆ ಮಾಡಿದರು. ಅಷ್ಟೇ ಅಲ್ಲ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 700 ವಿಕೆಟ್’ಗಳನ್ನು ಪೂರ್ತಿಗೊಳಿಸಿದ ಮಹೋನ್ನತ ಮೈಲುಗಲ್ಲು ನೆಟ್ಟರು. ಈ ಸಾಧನೆ ಮಾಡಿದ ಭಾರತದ 3ನೇ ಹಾಗೂ ವಿಶ್ವದ 16ನೇ ಬೌಲರ್ ಎಂಬ ಹಿರಿಮೆಗೆ ಅಶ್ವಿನ್ ಪಾತ್ರರಾಗಿದ್ದಾರೆ.

700 ವಿಕೆಟ್’ಗಳ ದಾಖಲೆಯ ಜೊತೆಗೆ ಇದೇ ಪಂದ್ಯದಲ್ಲಿ ವಿಂಡೀಸ್ ಓಪನರ್ ತೇಜ್’ನಾರಾಯಣ್ ಚಂದ್ರಪಾಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ, ಅಶ್ವಿನ್ ಮತ್ತೊಂದು ದಾಖಲೆ ಬರೆದಿದ್ದಾರೆ. ಕ್ಲೀನ್ ಬೌಲ್ಡ್ ಮೂಲಕ ಭಾರತ ಪರ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆಯವರ ದಾಖಲೆಯನ್ನು ಮುರಿದಿದ್ದಾರೆ.

ಕನ್ನಡಿಗ ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ ಪಡೆದಿರುವ ಒಟ್ಟು 619 ವಿಕೆಟ್’ಗಳಲ್ಲಿ 94 ವಿಕೆಟ್’ಗಳನ್ನು ಕ್ಲೀನ್ ಬೌಲ್ಡ್ ಮೂಲಕ ಕಬಳಿಸಿದ್ದಾರೆ. ರವಿಚಂದ್ರನ್ ಅಶ್ವಿನ್ 93 ಟೆಸ್ಟ್ ಪಂದ್ಯಗಳಲ್ಲಿ ಪಡೆದಿರುವ 479 ವಿಕೆಟ್’ಗಳ ಪೈಕಿ 95 ವಿಕೆಟ್’ಗಳನ್ನು ಕ್ಲೀನ್ ಬೌಲ್ಡ್ ಮೂಲಕ ಪಡೆದಿದ್ದಾರೆ.

ಇದನ್ನೂ ಓದಿ : Ashwin 700 wickets : ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 700 ವಿಕೆಟ್, ಸ್ಪಿನ್ ಮಾಂತ್ರಿಕ ಅಶ್ವಿನ್ ಮಹೋನ್ನತ ಸಾಧನೆ

ಇದನ್ನೂ ಓದಿ : Natwest final : ಐತಿಹಾಸಿಕ ನಾಟ್‌ವೆಸ್ಟ್ ಟ್ರೋಫಿ ಫೈನಲ್’ಗೆ 19ನೇ ಹ್ಯಾಪಿ ಬರ್ತ್ ಡೇ

ಟೆಸ್ಟ್ ಕ್ರಿಕೆಟ್’ನಲ್ಲಿ “ಕ್ಲೀನ್ ಬೌಲ್ಡ್” ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯರು.

  1. ರವಿಚಂದ್ರನ್ ಅಶ್ವಿನ್: 95 ವಿಕೆಟ್
  2. ಅನಿಲ್ ಕುಂಬ್ಳೆ: 94 ವಿಕೆಟ್
  3. ಕಪಿಲ್ ದೇವ್: 88 ವಿಕೆಟ್
  4. ಮೊಹಮ್ಮದ್ ಶಮಿ: 66 ವಿಕೆಟ್
  5. ರವೀಂದ್ರ ಜಡೇಜ: 64 ವಿಕೆಟ್
  6. ಬಿ. ಚಂದ್ರಶೇಖರ್: 64 ವಿಕೆಟ್

ಟೆಸ್ಟ್ ಕ್ರಿಕೆಟ್’ನಲ್ಲಿ ಅಶ್ವಿನ್ ಅವರ ಐದು ವಿಕೆಟ್ ಸಾಧನೆ
ಆಸ್ಟ್ರೇಲಿಯಾ ವಿರುದ್ಧ: 7 ಬಾರಿ
ಇಂಗ್ಲೆಂಡ್ ವಿರುದ್ಧ: 6 ಬಾರಿ
ನ್ಯೂಜಿಲೆಂಡ್ ವಿರುದ್ಧ: 6 ಬಾರಿ
ವೆಸ್ಟ್ ಇಂಡೀಸ್ ವಿರುದ್ಧ: 5 ಬಾರಿ
ದಕ್ಷಿಣ ಆಫ್ರಿಕಾ ವಿರುದ್ಧ: 5 ಬಾರಿ
ಶ್ರೀಲಂಕಾ ವಿರುದ್ಧ: 3 ಬಾರಿ
ಬಾಂಗ್ಲಾದೇಶ ವಿರುದ್ಧ: 1 ಬಾರಿ

Ashwin breaks Kumble record: Kannadigas Anil Kumble’s record is broken by Tamil Nadu’s spin wizard Ashwin

Comments are closed.