ಅಕ್ಕಿ ಉತ್ಪಾದನೆಯಲ್ಲಿ ಪ್ರಪ್ರಥಮ ಬಾರಿಗೆ ಚೀನಾ ಹಿಂದಿಕ್ಕಿದ ಭಾರತ : ವಿಶ್ವಕ್ಕೆ ನಾವೇ ನಂ.1

ಬಡತನದ ರಾಷ್ಟ್ರ, ಆಹಾರದ ಕೊರತೆ ಹೊಂದಿರುವ ರಾಷ್ಟ್ರ ಎಂದೆಲ್ಲ ಹಣೆಪಟ್ಟಿವನ್ನು ನಮ್ಮ ಭಾರತ ಒಂದು ಕಾಲದಲ್ಲಿ ಹೊಂದಿತ್ತು. ಆದರೆ ಇದೀಗ ಭಾರತ ಬದಲಾಗಿದ್ದು ಆರ್ಥಿಕತೆಯಲ್ಲಿ ಮಹತ್ವದ ಸಾಧನೆ ಮಾಡುತ್ತಿರುವುದು ತಿಳಿದಿರೋ ವಿಚಾರ. ಈ ಎಲ್ಲದರ ನಡುವೆ ಇದೀಗ ನಮ್ಮ ಭಾರತ ಅಕ್ಕಿ ಉತ್ಪಾದನೆಯನ್ನು ಬಹುದೊಡ್ಡ ಸಾಧನೆಗೈದಿದೆ. ಬಹಳ ವರ್ಷಗಳಿಂದ ಅಕ್ಕಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಚೀನಾ ದೇಶವನ್ನು ಹಿಂದಿಕ್ಕಿ ಭಾರತ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದೆ. ಸಂಪೂರ್ಣ ವಿಶ್ವಕ್ಕೆ ಅಕ್ಕಿ ಪೂರೈಕೆಯಲ್ಲಿ ಭಾರತದ ಪಾಲು ಇದೀಗ 28 ಪ್ರತಿಶತವಿದೆ.

ಈ ವಿಚಾರವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್​ ಸಿಂಗ್​ ಚೌಹಾಣ್​ ಮಾಹಿತಿ ನೀಡಿದ್ದು, 2025ರಲ್ಲಿ ಭಾರತವು 15.2 ಕೋಟಿ ಮೆಟ್ರಿಕ್​ ಟನ್​ ಅಕ್ಕಿ ಉತ್ಪಾದನೆ ಮಾಡಿದೆ. ಈ ಮೂಲಕ ವಿಶ್ವದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿ ಸಾಧನೆ ಮಾಡಿದೆ. ರೈತ ಸ್ನೇಹಿ ಯೋಜನೆಗಳು, ಸಮಗ್ರ ಕೃಷಿ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಗೆ ಸರ್ಕಾರದ ಪ್ರೋತ್ಸಾಹದಿಂದಾಗಿಯೇ ಈ ಸಾಧನೆ ಸಾಧ್ಯವಾಗಿದೆ ಎಂದು ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ.
ಆದರೆ ದುರಾದೃಷ್ಠ ಎಂಬಂತೆ ಕರ್ನಾಟಕದಲ್ಲಿ ಅಕ್ಕಿ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2024-25ನೇ ಸಾಲಿನಲ್ಲಿ 42.1 ಲಕ್ಷ ಟನ್​ಗಳಿಗೆ ಇಳುವರಿ ಕುಸಿದಿರುವುದು ಆತಂಕಕಾರಿ ವಿಷಯವಾಗಿದೆ. ರಾಜ್ಯದಲ್ಲಿ ಸರಾಸರಿ 1.8 ಪ್ರತಿಶತದಷ್ಟು ಇಳುವರಿ ಕಡಿಮೆಯಾಗಿದೆ. ಹಾವೇರಿ, ಬೀದರ್, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಇಳುವರಿ ಹೆಚ್ಚಾಗಿ ಕುಸಿದಿದೆ. ದೇಶದ ಒಟ್ಟೂ ಅಕ್ಕಿ ಉತ್ಪಾದನೆಯಲ್ಲಿ 2.5 ಪ್ರತಿಶತ ಪಾಲನ್ನು ಪ್ರಸ್ತುತ ಕರ್ನಾಟಕ ಹೊಂದಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories