1000 EV Charging Unit : ರಾಜ್ಯದಲ್ಲಿ ಹೆಚ್ಚುವರಿ 1000 ಇವಿ ಚಾರ್ಜಿಂಗ್ ಘಟಕ : ಸಚಿವ ಸುನಿಲ್‌ ಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಚಾರ್ಜಿಂಗ್‌ ಘಟಕಗಳ ಕೊರತೆಯಿಂದಾಗಿ ಸವಾರರು ಖರೀದಿಗೆ ಮುಂದಾಗುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 1000 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳನ್ನು (1000 EV Charging Unit) ಸ್ಥಾಪಿಸಲಾಗುವುದು ಎಂದಿದ್ದಾರೆ.

ಕರ್ನಾಟಕದಲ್ಲಿ ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಹೆಚ್ಚುವರಿ 1000 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು ಇವಿ ಗಳನ್ನು ಉತ್ತೇಜಿಸಲು ವಿಶೇಷ ಡ್ರೈವ್ ನಡೆಸಲಾಗುತ್ತದೆ. ಅಲ್ಲದೇ ಚಾರ್ಜಿಂಗ್ ಘಟಕಗಳನ್ನು ಜಿಲ್ಲಾ ಕೇಂದ್ರಗಳು, ಪ್ರವಾಸಿ ಸ್ಥಳಗಳು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಥಾಪಿಸಲಾಗುವುದು ಎಂದಿದ್ದಾರೆ.

ಇನ್ನು ಚಾರ್ಜಿಂಗ್‌ ಘಟಕಗಳನ್ನು ಸ್ಥಾಪನೆಗೆ ಅಗತ್ಯವಿರುವ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪನೆ ಮಾಡಲು ಸ್ಥಳಾವಕಾಶ ಒದಗಿಸುವಂತೆ ಈಗಾಗಲೇ ಸರಕಾರಿ ಕಚೇರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸುನೀಲ್‌ ಕುಮಾರ್‌ ಅವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸಾವಿರಾರು ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಯಾದ್ರೆ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆಯೂ ಏರಿಕೆಯಾಗಲಿದೆ, ಜೊತೆಗೆ ವಾಹನಗಳನ್ನು ಚಾರ್ಜಿಂಗ್‌ ಮಾಡಲು ಸಹಕಾರವಾಗಲಿದೆ.

ಇದನ್ನೂ ಓದಿ : ಕೆಲಸದ ಅವಧಿಯಲ್ಲಿ ಅರ್ಧ ಗಂಟೆ ನಿದ್ರೆ ಬ್ರೇಕ್ : ವೇಕ್ ಫಿಟ್ ಕಂಪನಿ ಹೊಸ ಆಫರ್‌

ಇದನ್ನೂ ಓದಿ : ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವಾಹನಗಳ ಸಂಖ್ಯೆ : ಜಾರಿಯಾಗುತ್ತಾ ದೆಹಲಿ ಮಾದರಿ ಸಂಚಾರಿ ರೂಲ್ಸ್

1000 EV charging unit in the Karnataka Minister Sunil Kumar

Comments are closed.