Kerala : ಶವರ್ಮಾ ತಿಂದು ವಿದ್ಯಾರ್ಥಿನಿ ಸಾವು ಪ್ರಕರಣ : ಕೇರಳದಲ್ಲಿ ಮುಚ್ಚಿದ ಹೋಟೆಲ್‌, ರೆಸ್ಟೋರೆಂಟ್ ತೆರೆಯಲು ಪ್ರತ್ಯೇಕ ಮಾರ್ಗಸೂಚಿ ‌

ತಿರುವನಂತಪುರ : ಶವರ್ಮ ತಿಂದು ವಿದ್ಯಾರ್ಥಿನಿ ಸಾವನ್ನಪ್ಪಿದ ಪ್ರಕರಣದ ಬೆನ್ನಲ್ಲೇ ಹಲವು ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಆಹಾರ ತಿನಿಸು ಅಂಗಡಿಗಳನ್ನು ಮುಚ್ಚಲಾಗಿತ್ತು. ಇದೀಗ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಿರುವ ಸರಕಾರ ಕಟ್ಟಿನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿತ್ತು. ಇದೀಗ ಕೇರಳ (Kerala) ಆಹಾರ ಸುರಕ್ಷತಾ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಆಹಾರ ಸುರಕ್ಷತಾ ಇಲಾಖೆಯ ತಪಾಸಣೆಯ ನಂತರ ಮುಚ್ಚಿದ ತಿನಿಸುಗಳನ್ನು ತೆರೆಯಲು ಕೇರಳ ಆಹಾರ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ಇತ್ತೀಚೆಗೆ ಹಲವು ತಿನಿಸುಗಳಲ್ಲಿ ಪತ್ತೆಯಾದ ಆಹಾರ ಸುರಕ್ಷತಾ ಮಾನದಂಡಗಳ ಗಂಭೀರ ಉಲ್ಲಂಘನೆಯ ದೃಷ್ಟಿಯಿಂದ ಹೊಸ ಮಾರ್ಗಸೂಚಿಗಳನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಅನೈರ್ಮಲ್ಯದ ಅಡಿಗೆ ಮನೆಗಳು ಮತ್ತು ಕೊಳೆತ ಮೀನು ಮತ್ತು ಮಾಂಸದ ಬಳಕೆಯನ್ನು ಉಲ್ಲೇಖಿಸಿ ಕಳೆದ ವಾರ ಹಲವಾರು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಯಿತು.

ಈ ಹಿಂದೆ ಪ್ರತಿ ವಿಧಾನಸಭಾ ಕ್ಷೇತ್ರದ ಆಹಾರ ಸುರಕ್ಷತಾ ಅಧಿಕಾರಿಗಳು ಆಯಾ ಜಿಲ್ಲೆಗಳ ಸಹಾಯಕ ಆಯುಕ್ತರ ಒಪ್ಪಿಗೆಯೊಂದಿಗೆ ಮುಚ್ಚಿದ ಉಪಾಹಾರ ಗೃಹಗಳನ್ನು ತೆರೆಯಲು ಒಪ್ಪಿಗೆ ನೀಡಲಾಗಿತ್ತು. ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಉಲ್ಲಂಘನೆಗಳನ್ನು ಸರಿಪಡಿಸಿದ ನಂತರ ಉಪಾಹಾರ ಗೃಹಗಳ ಮಾಲೀಕರು ಮಳಿಗೆಗಳನ್ನು ಪುನರಾರಂಭಿಸಲು ಅರ್ಜಿ ಸಲ್ಲಿಸಿದಾಗ, ಅಧಿಕಾರಿಗಳು ತಿನಿಸುಗಳಿಗೆ ಭೇಟಿ ನೀಡಿ ತೆರೆಯಲು ಅನುಮತಿ ನೀಡಬೇಕು. ಹಲವಾರು ನಿದರ್ಶನಗಳಲ್ಲಿ, ರಾಜಕೀಯ ಒತ್ತಡದಲ್ಲಿ ಸರಿಯಾದ ತಪಾಸಣೆ ನಡೆಸದೆ ಅನುಮತಿಗಳನ್ನು ನೀಡಲಾಯಿತು. ಆಹಾರ ಸುರಕ್ಷತಾ ಆಯುಕ್ತರ ಹೊಸ ಮಾರ್ಗಸೂಚಿಯಲ್ಲಿ ನೈರ್ಮಲ್ಯ ಪಾಲನೆ ಮಾಡದ ಅಂಗಡಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ : IPL 2022ನಲ್ಲಿ ಕ್ರಿಸ್‌ಗೇಲ್‌ ಹೊರಗುಳಿದಿದ್ಯಾಕೆ ? ಕೊನೆಗೂ ಬಯಲಾಯ್ತು ನಿಜವಾದ ಕಾರಣ

ಇದನ್ನೂ ಓದಿ :  IPL 2022 ರಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದ CSK : ಇಲ್ಲಿದೆ ಐಪಿಎಲ್‌ ಪಾಯಿಂಟ್ಸ್‌ ಟೇಬಲ್‌

Kerala food Safety Department Issues Strict Guidelines for Hotels

Comments are closed.