ವಾಹನ ಸವಾರರ ಗಮನಕ್ಕೆ : ಮತ್ತೊಮ್ಮೆ ರಾಜ್ಯದಲ್ಲಿ ಜಾರಿಯಾಗಿದೆ 50% ಸಂಚಾರ ದಂಡ ವಿನಾಯಿತಿ ಆಫರ್
ಟ್ರಾಫಿಕ್ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಕೆಲವು ದಿನಗಳ ಹಿಂದೆಷ್ಟೇ ಟ್ರಾಫಿಕ್ ದಂಡ ಪಾವತಿಯಲ್ಲಿ 50 ಪ್ರತಿಶತ ರಿಯಾಯಿತಿ ಘೋಷಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ಈ ಆಫರ್ ನೀಡಿದೆ. ಹೀಗಾಗಿ ಸಂಚಾರ ದಂಡ ಕಟ್ಟಲು ಬಾಕಿ ಇರುವವರಿಗೆ ದಂಡ ಪಾವತಿ ಮಾಡಲು ಇದು ಸರಿಯಾದ ಸಮಯವಾಗಿದೆ.
ಈ ಹಿಂದೆ ವಾಹನ ಸವಾರರಿಗೆ ಈ ರೀತಿ ನೀಡಿದ್ದ ಆಫರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾಕಷ್ಟು ಮಂದಿ ವಾಹನ ಸವಾರರು ಈ ವಿನಾಯಿತಿಯ ಲಾಭ ಪಡೆದು ದಂಡ ಪಾವತಿ ಮಾಡಿದ್ದರು. ಇದರಿಂದ ಸರ್ಕಾರದ ಬೊಕ್ಕಸ ಕೂಡ ತುಂಬಿತ್ತು.
ಹೀಗಾಗಿ ಇದೀಗ ವಾಹನ ಸವಾರರಿಗೆ ಮತ್ತೊಮ್ಮೆ ಸಂಚಾರ ದಂಡ ಪಾವತಿ ಸರಳೀಕೃತಗೊಳಿಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕಳೆದ ಬಾರಿಯಂತೆಯೇ ಈ ಭಾರಿಯೂ ಈ ಸಂಚಾರ ವಿನಾಯಿತಿಗೆ ಭಾರೀ ಬೆಂಬಲ ವ್ಯಕ್ತವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಖಾಸಗಿ ಉದ್ಯಮದ ಮಹಿಳಾ ನೌಕರರಿಗೆ ತಿಂಗಳಲ್ಲಿ ಮಾಸಿಕ ಋತುಚಕ್ರ ರಜೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಇಂದಿನಿಂದ ರಾಜ್ಯಾದ್ಯಂತ ಸಂಚಾರ ದಂಡ ಪಾವತಿಯಲ್ಲಿ 50 ಪ್ರತಿಶತ ವಿನಾಯಿತಿ ಜಾರಿಗೆ ಬಂದಿದೆ. ಡಿಸೆಂಬರ್ 12ರವರೆಗೆ ಮಾತ್ರ ಈ ವಿನಾಯಿತಿ ರಾಜ್ಯಾದ್ಯಂತ ಲಭ್ಯವಿರಲಿದೆ. ಹೀಗಾಗಿ ವಾಹನ ಸವಾರರು ಈ ಅವಧಿಯ ಒಳಗಾಗಿ ತಮ್ಮ ಬಾಕಿ ಇರುವ ಸಂಚಾರ ದಂಡವನ್ನು ಪಾವತಿ ಮಾಡಿಕೊಳ್ಳಬಹುದಾಗಿದೆ.



