ಭಾನುವಾರ, ಏಪ್ರಿಲ್ 27, 2025
Homeautomobileಒಂದೇ ಚಾರ್ಜ್‌ 550ಕಿ.ಮೀ. ಮೈಲೇಜ್‌ : ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUV ಫೀಚರ್ಸ್‌...

ಒಂದೇ ಚಾರ್ಜ್‌ 550ಕಿ.ಮೀ. ಮೈಲೇಜ್‌ : ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUV ಫೀಚರ್ಸ್‌ ಕೇಳಿದ್ರೆ ಸುಸ್ತಾಗೋದು ಗ್ಯಾರಂಟಿ

- Advertisement -

ಮಾರುತಿ ಕಂಪೆನಿಯ (Maruthi) ಮಾತೃಸಂಸ್ಥೆ ಸುಜುಕಿ ಮೋಟಾರ್‌ ಕಾರ್ಪೋರೇಷನ್‌ (Suzuki Motor Corporation) ಜಪಾನ್ ಮೊಬಿಲಿಟಿ ಶೋ 2023 (Japan Mobility Show 2023) ಆಯೋಜಿಸಿದೆ. ಹೊಸ ಹೊಸ ಕಾರುಗಳನ್ನು ಈ ಶೋ ಮೂಲಕ ಪರಿಚಯಿಸುತ್ತಿದೆ. ಇದೀಗ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUV (Maruthi Suzuki eVX SUV Electric Car) ಕಾರನ್ನು ಬಿಡುಗಡೆ ಮಾಡಲಿದೆ.

ಮಾರುತಿ ಕಂಪೆನಿ ಸ್ವಿಫ್ಟ್‌, ಬೊಲೆರೋ ಸೇರಿದಂತೆ ಬಹುತೇಕ ಕಾರುಗಳ ಹೊಸ ವಿನ್ಯಾಸವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ದವಾಗಿದೆ. ಜಪಾನ್‌ನಲ್ಲಿ ನಡೆಯಲಿರುವ ಮೊಬಿಲಿಟಿ ಶೋನಲ್ಲಿ ಈ ಕಾರುಗಳು ಅನಾವರಣಗೊಳ್ಳಲಿವೆ. ನಂತರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಲಿವೆ.

550 km on a single charge Mileage Maruti Suzuki eVX Electric SUV Features Japan Mobility Show
Image Credit to Original Source

ಟಾಟಾ, ಹುಂಡೈ ಕಂಪೆನಿಗಳು ಈಗಾಗಲೇ ಎಲೆಕ್ಟ್ರಿಕ್‌ ಕಾರುಗಳ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಇದೀಗ ಮಾರುತಿ ಸುಜುಕಿ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ದವಾಗಿದ್ದು, ಮೊಬಿಲಿಟಿ ಶೋನಲ್ಲಿ ಈ ಕಾರು ಲಾಂಚ್‌ ಆಗುವುದು ಖಚಿತವಾಗಿದೆ.

ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUV ಕಾರಿನ ಓಟ್‌ಲುಕ್‌ ಈಗಾಗಲೇ ಬಿಡುಗಡೆ ಆಗಿದ್ದು, ಮೊದಲ ನೋಟದಲ್ಲೇ ಕಾರು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಮಾರುತಿ ಸುಜುಕಿ eVX ವಿಶ್ವದಲ್ಲೇ ಮೊದಲ ಸುಜುಕಿ ಕಂಪೆನಿಯ ಎಲೆಕ್ಟ್ರಿಕ್‌ ಕಾರು ಎನಿಸಿಕೊಂಡಿದೆ.

ಇದನ್ನೂ ಓದಿ : ಕೇವಲ 3 ಲಕ್ಷಕ್ಕೆ ಮಾರುತಿ ಸರ್ವೋ ! ಭಾರತೀಯ ಮಾರುಕಟ್ಟೆ ಪ್ರವೇಶಿಸಲಿವೆ ಅತ್ಯಂತ ಕಡಿಮೆ ಬೆಲೆಯ ಕಾರುಗಳು

ಜಪಾನ್ ಮೊಬಿಲಿಟಿ ಶೋ 2023 ಅಕ್ಟೋಬರ್ 26 ರಿಂದ ನವೆಂಬರ್ 5 ರವರೆಗೆ ಟೋಕಿಯೊದಲ್ಲಿ ನಡೆಯಲಿದೆ. ಈ ಶೋ ಮೂಲಕ ಜಗತ್ತಿಗೆ ಮಾರುತಿ ಸುಜುಕಿ ಇವಿಎಕ್ಸ್, ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಪರಿಚಯಿಸಲಿದೆ. ಭಾರತದಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಕಾರಿನ ಸ್ವರೂಪವನ್ನು ಈ ಹಿಂದೆಯೇ ಪರಿಚಯಿಸಲಾಗಿತ್ತು.

550 km on a single charge Mileage Maruti Suzuki eVX Electric SUV Features Japan Mobility Show
Image Credit to Original Source

eVX ನ ಹೊರಭಾಗವನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಇದೀಗ ಜಪಾನ್ ಮೊಬಿಲಿಟಿ ಶೋನಲ್ಲಿ ಒಳಭಾಗವನ್ನು ಮೊದಲ ಬಾರಿಗೆ ಅನಾವರಣಗೊಳಿಸಲಾಗುತ್ತದೆ. eVX ಕಾರನ್ನು ವಿಶಾಲವಾದ ಶೈಲಿಯಲ್ಲಿ ಅನಾವರಣಗೊಳಿಸಲಾಗಿದೆ. ಕಾರು 4,300mm ಉದ್ದ, 1,800mm ಅಗಲ ಮತ್ತು 1,600mm ಎತ್ತರವನ್ನು ಹೊಂದಿದ್ದು, ಪ್ರಯಾಣಕ್ಕೆ ಆರಾಮದಾಯಕವಾಗಿದೆ.

eVX ಡ್ಯುಯಲ್ ಮೋಟಾರ್ ಸೆಟಪ್ ಮತ್ತು ಎಲೆಕ್ಟ್ರಾನಿಕ್ ನಿಯಂತ್ರಿತ 4×4 ತಂತ್ರಜ್ಞಾನಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದು ಸುರಕ್ಷಿತ ಬ್ಯಾಟರಿ ತಂತ್ರಜ್ಞಾನದ ಜೊತೆಗೆ 60kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಲಿದ್ದು, ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್‌ ಮಾಡಿದ್ರೆ 500 ಕಿ.ಮೀ. ನಿಂದ 550 ಕಿ.ಮೀ ವರೆಗೆ ಮೈಲೇಜ್‌ ನೀಡುತ್ತದೆ.

ಇದನ್ನೂ ಓದಿ : ತಾಂತ್ರಿಕ ಸಮಸ್ಯೆ 34 ಲಕ್ಷಕ್ಕೂ ಅಧಿಕ ಕಾರುಗಳನ್ನು ವಾಪಾಸ್‌ ಪಡೆಯಲಿದೆ ಹ್ಯುಂಡೈ, ಕಿಯಾ ಕಂಪೆನಿ

ಮಾರುತಿ ಕಂಪೆನಿ ೨೦25ಕ್ಕೆ ಭಾರತದಲ್ಲಿ eVX ಬಿಡುಗಡೆಗೆ ಫ್ಲ್ಯಾನ್‌ ಹಾಕಿಕೊಂಡಿದೆ. ಈ ವೇಳೆಗೆ ಒಟ್ಟು ೬ ಎಲೆಕ್ಟ್ರಿಕ್‌ ಮಾದರಿಗಳನ್ನು ಪರಿಚಯಿಸುವ ಯೋಜನೆಯನ್ನು ಮಾರುತಿ ಕಂಪೆನಿ ಹಾಕಿಕೊಂಡಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರುತಿಯ ಪೋರ್ಟ್‌ಫೋಲಿಯೊದಲ್ಲಿ 15% ರಷ್ಟನ್ನು ರೂಪಿಸುತ್ತದೆ. ಇನ್ನು ಹೈಬ್ರಿಡ್‌ಗಳು 25% ಕೊಡುಗೆ ನೀಡುತ್ತವೆ ಮತ್ತು ಆಂತರಿಕ ದಹನಕಾರಿ ಎಂಜಿನ್ ಮಾದರಿಗಳು ಇನ್ನೂ 60% ರಷ್ಟು ಹೆಚ್ಚಿನ ಪಾಲನ್ನು ಹೊಂದಿವೆ.

550 km on a single charge Mileage Maruti Suzuki eVX Electric SUV Features Japan Mobility Show
Image Credit to Original Source

ಇವಿಎಕ್ಸ್ ಹೊರತುಪಡಿಸಿ, ಜಪಾನ್ ಮೊಬಿಲಿಟಿ ಶೋ 2023 ರಲ್ಲಿ ಪ್ರದರ್ಶಿಸಲಾಗುವ ಮತ್ತೊಂದು ಆಸಕ್ತಿದಾಯಕ ಮಾದರಿ ಹೊಸ ಸ್ವಿಫ್ಟ್. ಮೂರನೇ ತಲೆಮಾರಿನ ಸ್ವಿಫ್ಟ್, ಮಾರುತಿ ಕಂಪೆನಿ ನಿರ್ಮಿಸಿದ ಕಾರುಗಳ ಪೈಕಿ ಅತೀ ಹೆಚ್ಚು ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ : ಹೊಸ ಸ್ವಿಫ್ಟ್‌ ಅನಾವರಣಗೊಳಿಸಿದ ಮಾರುತಿ ಸುಜುಕಿ : ಅತ್ಯಂತ ಕಡಿಮೆ ಬೆಲೆ ಅತ್ಯಾಧುನಿಕ ತಂತ್ರಜ್ಞಾನ

ಹೊಸ ಸ್ವಿಫ್ಟ್‌ FY24 (ಏಪ್ರಿಲ್-ಸೆಪ್ಟೆಂಬರ್) ನಲ್ಲಿ 103,000 ಯುನಿಟ್‌ಗಳು, FY23 ನಲ್ಲಿ 177,000 ಯುನಿಟ್‌ಗಳು ಮತ್ತು FY22 ರಲ್ಲಿ 168,000 ಕಾರುಗಳು ಭಾರೀತ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ಅಲ್ಲದೇ ಸತತವಾಗಿ ದಾಖಲೆಯ ಪ್ರಮಾಣದಲ್ಲಿ ಸ್ವಿಫ್ಟ್‌ ಕಾರುಗಳನ್ನು ಜನರು ಖರೀದಿ ಮಾಡುತ್ತಿದ್ದಾರೆ.

ಇನ್ನು ಹೊಸ ಸ್ವಿಫ್ಟ್‌ ಕಾರು ಕೂಡ ಮೊಬಿಲಿಟಿ ಶೋನಲ್ಲಿಯೇ ಅನಾವರಣಗೊಳ್ಳಲಿದೆ. ಈಗಾಗಲೇ ಸ್ವಿಫ್ಟ್‌ ಕಾರಿನ ಔಟ್‌ಲುಕ್‌ ಬಿಡುಗಡೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ ಸ್ವಿಫ್ಟ್‌ ಕಾರಿಗೆ ಹೋಲಿಕೆ ಮಾಡಿದ್ರೆ ಡಿಸನ್‌ ವಿಭಿನ್ನವಾಗಿದೆ. ಜೊತೆಗೆ ಸನ್‌ ರೂಪ್‌ ಜೊತೆಗೆ ಕಾರು ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಕಾರಿನಲ್ಲಿ ಅಳವಡಿಸಲಾಗಿದೆ.

550 km on a single charge Mileage Maruti Suzuki eVX Electric SUV Features Japan Mobility Show

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular