ತಾಂತ್ರಿಕ ಸಮಸ್ಯೆ 34 ಲಕ್ಷಕ್ಕೂ ಅಧಿಕ ಕಾರುಗಳನ್ನು ವಾಪಾಸ್‌ ಪಡೆಯಲಿದೆ ಹ್ಯುಂಡೈ, ಕಿಯಾ ಕಂಪೆನಿ

ಹ್ಯುಂಡೈ  (Hyundai)ಹಾಗೂ ಕಿಯಾ (Kia)ಕಾರುಗಳಲ್ಲಿ ಇದೀಗ ತಾಂತ್ರಿಕ ಸಮಸ್ಯೆ (Technical Issues) ಉಂಟಾಗಿದೆ. ಬರೋಬ್ಬರಿ 34 ಲಕ್ಷಕ್ಕೂ ಹೆಚ್ಚು ಕಾರುಗಳನ್ನು (34 Lakh Cars Return) ವಾಪಾಸ್‌ ಪಡೆಯಲಿದ್ದೇವೆ ಎಂದು ಕಂಪೆನಿ ಘೋಷಣೆ ಮಾಡಿದೆ.

ವಿಶ್ವದ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿರುವ ಹ್ಯುಂಡೈ  (Hyundai)ಹಾಗೂ ಕಿಯಾ (Kia)ಕಾರುಗಳಲ್ಲಿ ಇದೀಗ ತಾಂತ್ರಿಕ ಸಮಸ್ಯೆ (Technical Issues) ಉಂಟಾಗಿದೆ. ಬರೋಬ್ಬರಿ 34 ಲಕ್ಷಕ್ಕೂ ಹೆಚ್ಚು ಕಾರುಗಳನ್ನು (34 Lakh Cars Return) ವಾಪಾಸ್‌ ಪಡೆಯಲಿದ್ದೇವೆ ಎಂದು ಕಂಪೆನಿ ಘೋಷಣೆ ಮಾಡಿದೆ.

Hyundai and Kia companies have recalled more than 34 lakh cars due to technical problems
Image Credit To Original Source

ಹುಂಡೈ (Hyundai cars) ಹಾಗೂ ಕಿಯಾ ಕಾರಿನ (KIA Cars) ಇಂಜಿನ್‌ ಕಂಪಾರ್ಟ್‌ಮೆಂಟ್‌ ನಲ್ಲಿ (Cars engine compartments ) ಬೆಂಕಿಯ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹ್ಯುಂಡೈನ ಸಾಂಟಾ ಫೆ ಎಸ್‌ಯುವಿ (Hundai Santafe SUV) ಮತ್ತು ಕಿಯಾದ ಸೊರೆಂಟೊ ಎಸ್‌ಯುವಿ (kia sorento SUV)  ಸೇರಿದಂತೆ 2010 ರಿಂದ 2019 ರವರೆಗಿನ ಮಾದರಿ ವರ್ಷಗಳಲ್ಲಿ ಬಹು ಕಾರು ಮತ್ತು ಎಸ್‌ಯುವಿ ಮಾದರಿಗಳನ್ನು ಮರುಪಡೆಯಲಾಗಿದೆ.

ಅಮೇರಿಕಾದ ಸುರಕ್ಷತಾ ನಿಯಂತ್ರಕರು ಮಾಡಿರುವ ಪೋಸ್ಟ್‌ ಮಾಡಿರುವ ದಾಖಲೆಗಳ ಪ್ರಕಾರ,ಕಾರುಗಳು ಆಂಟಿ-ಲಾಕ್ ಬ್ರೇಕ್ ಕಂಟ್ರೋಲ್ ಮಾಡ್ಯೂಲ್ ದ್ರವವನ್ನು ಸೋರಿಕೆ ಮಾಡಬಹುದು. ಅಲ್ಲದೇ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ಗೆ ಕಾರಣವಾಗುವ ಸಾಧ್ಯತೆಯಿದೆ. ಹೀಗಾಗಿ ವಾಹನ ನಿಲ್ಲಿಸುವಾಗ ಹಾಗೂ ಚಾಲಕ ಮಾಡುವ ಎಚ್ಚರವಾಗಿರುವಂತೆ ಸೂಚಿಸಿದೆ.

Hyundai and Kia companies have recalled more than 34 lakh cars due to technical problems
Image Credit To Original Source

ಇದನ್ನೂ ಓದಿ :ಕೇವಲ 3 ಲಕ್ಷಕ್ಕೆ ಮಾರುತಿ ಸರ್ವೋ ! ಭಾರತೀಯ ಮಾರುಕಟ್ಟೆ ಪ್ರವೇಶಿಸಲಿವೆ ಅತ್ಯಂತ ಕಡಿಮೆ ಬೆಲೆಯ ಕಾರುಗಳು

ಹ್ಯುಂಡೈ ಕಾರು ಅಮೇರಿಕಾದಲ್ಲಿ ಈಗಾಗಲೇ 21 ಬೆಂಕಿ ಪ್ರಕರಣ ಪತ್ತೆಯಾಗಿದೆ. ಅಲ್ಲದೇ ಹೊಗೆ ಉಗುಳುವ ಪ್ರಕರಣ ಪತ್ತೆಯಾಗಿದೆ. ಇನ್ನು ೧೦ಕ್ಕೂ ಅಧಿಕ ಸಂದರ್ಭಗಳಲ್ಲಿ ಕಿಯಾ ಕಾರು ಬೆಂಕಿ ಅವಘಡಕ್ಕೆ ತುತ್ತಾಗಿದೆ. ಇದೇ ಕಾರಣಕ್ಕೆ ಹ್ಯುಡೈ ಮತ್ತು ಕಿಯಾ ಯುಎಸ್‌ನಲ್ಲಿ ಸುಮಾರು 3.4 ಮಿಲಿಯನ್ ವಾಹನಗಳನ್ನು ಹಿಂಪಡೆಯುತ್ತಿವೆ.

ಕಾರುಗಳನ್ನು ರಿಪೇರಿ ಮಾಡುವವರೆಗೆ ಎಚ್ಚರಿಕೆಯಿಂದ ಇರುವಂತೆ ಮಾಲೀಕರಿಗೆ ಕಂಪೆನಿಗಳು ಸೂಚನೆಯನ್ನು ನೀಡಿವೆ. ಇನ್ನು ಉಚಿತವಾಗಿ ಆಂಟಿ-ಲಾಕ್ ಬ್ರೇಕ್ ಫ್ಯೂಸ್ ಅನ್ನು ಬದಲಾಯಿಸಿ ಕೊಡುವುದಾಗಿಯೂ ಘೋಷಣೆ ಮಾಡಿದೆ. ನವೆಂಬರ್ 14ರ ನಂತರ ಕಿಯಾ ಕಂಪೆನಿ ಮಾಲೀಕರಿಗೆ ನೋಟಿಸ್‌ ಕಳುಹಿಸಲಿದ್ರೆ, ನವೆಂಬರ್ 21ರ ನಂತರ ಹ್ಯುಂಡೈ ಕಂಪೆನಿ ಕಾರುಗಳನ್ನು ವಾಪಾಸ್‌ ಪಡೆಯಲಿದೆ.

Hyundai and Kia companies have recalled more than 34 lakh cars due to technical problems
Image Credit To Original Source

ಕಾರುಗಳನ್ನು ವಾಪಾಸ್‌ ಪಡೆಯಲು ಕಾರಣಗಳೇನು ?

ಇನ್ನು ಕಾರು ತಯಾರಕರು ತಮ್ಮ ವಾಹನಗಳನ್ನು ಪಾಪಾಸ್‌ ಪಡೆಯುತ್ತಿರುವುದರ ಹಿಂದೆ ಬಲವಾದ ಕಾರಣವಿದೆ. ಆಂಟಿಲಾಕ್ ಬ್ರೇಕ್ ಮೋಟಾರ್ ಶಾಫ್ಟ್‌ನಲ್ಲಿರುವ O-ರಿಂಗ್ ಬ್ರೇಕ್ ದ್ರವದಲ್ಲಿ ತೇವಾಂಶ, ಕೊಳಕು ಮತ್ತು ಕರಗಿದ ಲೋಹಗಳ ಉಪಸ್ಥಿತಿಯಿಂದಾಗಿ ಸೋರಿಕೆಗೆ ಕಾರಣವಾಗುವುದರಿಂದ ಕಾಲಾನಂತರದಲ್ಲಿ ಸೀಲಿಂಗ್ ಶಕ್ತಿಯನ್ನು ಕಳೆದುಕೊಳ್ಳಬಹುದು ಎಂದು ಕಂಪೆನಿ ಹೇಳಿಕೊಂಡಿದೆ ಎಂದು ಇಂಡಿಯಾ ಟಿವಿ ಡಾಟ್‌ ಕಾಂ ವರದಿ ಮಾಡಿದೆ.

ಇದನ್ನೂ ಓದಿ : Tata Nexon Facelift : ಕೇವಲ 8.10 ಲಕ್ಷಕ್ಕೆ ಬಿಡುಗಡೆ ಆಯ್ತು ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್

ಕಿಯಾ ಕಂಪೆನಿಯ (KIA CARS) ಯಾವ ಮಾಡೆಲ್‌ಗಳು ವಾಪಾಸ್‌ :

ಇನ್ನು ಕಿಯಾ ಕಂಪೆನಿಯ 2010 ರಿಂದ 2019 ಬೊರೆಗೊ (KIA Borrego), 2014 ರಿಂದ 2016 ಕ್ಯಾಡೆನ್ಜಾ (KIA Cadenza), 2010 ರಿಂದ 2013 ಫೋರ್ಟೆ (KIA Forte), ಫೋರ್ಟೆ ಕೌಪ್  (KIA forte koup)ಮತ್ತು ಸ್ಪೋರ್ಟೇಜ್ (kia forte sportage) , 2015 ರಿಂದ 2018 ಕೆ900, 2011 ರಿಂದ 2015 ಆಪ್ಟಿಮಾ (KIA optima) 2011, ಆಪ್ಟಿಮಾ 2015 ಆಪ್ಟಿಮಾ 2010 2012 2017 ರಿಯೊ, 2011 ರಿಂದ 2014 ಸೊರೆಂಟೊ (KIA Sorento suv, ಮತ್ತು 2010 ರಿಂದ 2011 ರೊಂಡೋ (KIA Rondo ) ಕಾರುಗಳನ್ನು ವಾಪಾಸ್‌ ಪಡೆಯಲಾಗುತ್ತದೆ.

Hyundai and Kia companies have recalled more than 34 lakh cars due to technical problems
Image Credit To Original Source

ಇದನ್ನೂ ಓದಿ : ಕುಂದಾಪುರದ ಕಾವೇರಿ ಮೋಟಾರ್ಸ್‌ನಲ್ಲಿ ಟಾಟಾ ನೆಕ್ಸಾನ್‌ ಇವಿ ಬಿಡುಗಡೆ : ಒಂದೇ ಚಾರ್ಜ್‌ 463 ಕಿ.ಮೀ. ಮೈಲೇಜ್‌

ಹ್ಯುಂಡೈ ಕಂಪೆನಿಯ (Hyundai Cars) ಯಾವ ಮಾಡೆಲ್‌ಗಳು ವಾಪಾಸ್‌ :

ಹುಂಡೈ ಕಾರಿನ 2011 ರಿಂದ 2015 ರವರೆಗಿನ ಎಲಾಂಟ್ರಾ (Hyundai elantra), ಜೆನೆಸಿಸ್ ಕೂಪೆ ಮತ್ತು ಸೊನಾಟಾ ಹೈಬ್ರಿಡ್ (hyundai  Sonata Hybrid), 2012 ರಿಂದ 2015 ಆಕ್ಸೆಂಟ್ (Hyundai Accent), ಅಜೆರಾ (Hyundai Ajera)ಮತ್ತು ವೆಲೋಸ್ಟರ್ (Hyundai Veloster), 2013 ರಿಂದ 2015 ರವರೆಗಿನ ಎಲಾಂಟ್ರಾ ಕೂಪೆ (hyundai elantra coupe) ಮತ್ತು ಸಾಂಟಾ ಫೆ (hyundai elantra santa fe), 2012 ರಿಂದ 2015 ರವರೆಗೆ 2012 ರಿಂದ 2015 ರವರೆಗೆ ದುರಸ್ಥಿ ಮಾಡಲಾಗುತ್ತದೆ. ಆದರೆ . 2012 ವೆರಾಕ್ರಜ್, 2010 ರಿಂದ 2013 ಟಕ್ಸನ್, 2015 ಟಕ್ಸನ್ ಇಂಧನ ಕೋಶ, ಮತ್ತು 2013 ಸಾಂಟಾ ಫೆ ಸ್ಪೋರ್ಟ್ ಕಾರುಗಳನ್ನು ವಾಪಾಸ್‌ ಪಡೆಯಲಾಗುತ್ತದೆ.

Hyundai and Kia companies have recalled more than 34 lakh cars due to technical problems

Comments are closed.