ದಿನಭವಿಷ್ಯ ಅಕ್ಟೋಬರ್‌ 06 2023 : ಆರುದ್ರ ನಕ್ಷತ್ರದ ಪ್ರಭಾವ ಈ 3 ರಾಶಿಯವರಿಗೆ ಧನಲಾಭ

ದ್ವಾದಶ ರಾಶಿಗಳ ಮೇಲೆ ಆರುದ್ರ ನಕ್ಷತ್ರದ (Arudhra Nakshatra) ಪ್ರಭಾವ ಇರುತ್ತದೆ.ಮೇಷರಾಶಿಯಿಂದ ಹಿಡಿದು ಮೀನ ರಾಶಿಯ ವರೆಗೆ ಇಂದಿನ ದಿನಭವಿಷ್ಯ (Horoscope Today) ಹೇಗಿದೆ ತಿಳಿಯೋಣಾ.

ಇಂದು ಅಕ್ಟೋಬರ್‌ 06 2023 ಶುಕ್ರವಾರ. ದ್ವಾದಶ ರಾಶಿಗಳ ಮೇಲೆ ಆರುದ್ರ ನಕ್ಷತ್ರದ (Arudhra Nakshatra) ಪ್ರಭಾವ ಇರುತ್ತದೆ. ಪ್ರಾಧ್ಯ ಯೋಗದಿಂದ ಕನ್ಯಾ ರಾಶಿ, ಕುಂಭರಾಶಿ ಹಾಗೂ ಮಿಥುನ ರಾಶಿಯವರಿಗೆ ಆರ್ಥಿಕ ಲಾಭ ದೊರೆಯಲಿದೆ. ಮೇಷರಾಶಿಯಿಂದ ಹಿಡಿದು ಮೀನ ರಾಶಿಯ ವರೆಗೆ ಇಂದಿನ ದಿನಭವಿಷ್ಯ (Horoscope Today) ಹೇಗಿದೆ ತಿಳಿಯೋಣಾ.

ಮೇಷರಾಶಿ ಇಂದಿನ ದಿನಭವಿಷ್ಯ
ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಜೆಯ ವೇಳೆಗೆ ಶುಭ ಸುದ್ದಿಯನ್ನು ಕೇಳುವಿರಿ. ಕೆಲಸದ ವಿಚಾರದಲ್ಲಿ ನೀವಿಂದು ಯಾವುದೇ ಕಾರಣಕ್ಕೂ ವಿಳಂಭ ಮಾಡಬಾರದು. ನೀವು ಇತರರಿಗೆ ಸಹಾಯ ಮಾಡಲು ಇಂದು ಮುಂದೆ ಬರುತ್ತೀರಿ. ಆದರೆ ಯಾವುದೇ ಕಾರ್ಯದಲ್ಲಿಯೂ ಎಚ್ಚರಿಕೆಯನ್ನು ವಹಿಸಿ.

ವೃಷಭರಾಶಿ ಇಂದಿನ ದಿನಭವಿಷ್ಯ
ಹೊಸ ಹೂಡಿಕೆ ಇಂದು ಲಾಭವನ್ನು ತಂದುಕೊಡಲಿದೆ. ಅಲ್ಲದೇ ಭವಿಷ್ಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ಶತ್ರುಗಳು ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆಯಿದೆ. ಸಾಮಾಜಿಕವಾಗಿ ಗೌರವ ಹೆಚ್ಚುತ್ತದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಮಿಥುನರಾಶಿ ಇಂದಿನ ದಿನಭವಿಷ್ಯ
ತಾಯಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಇರಬೇಕು. ಸಂಬಂಧಿಕರಿಂದ ನಿಮಗೆ ಇಂದು ಸಹಾಯ ದೊರೆಯಲಿದೆ. ಸಂಗಾತಿಯ ಜೊತೆಗೆ ಸಮಯವನ್ನು ಕಳೆಯುವಿರಿ. ವ್ಯವಹಾರಿಕವಾಗಿಯೂ ಇಂದು ನಿಮಗೆ ಯಶಸ್ಸು ದೊರೆಯಲಿದೆ.

ಕರ್ಕಾಟಕರಾಶಿ ಇಂದಿನ ದಿನಭವಿಷ್ಯ
ನಿಮ್ಮ ಯಶಸ್ಸಿನ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಸಂತೋಷ ಮನೆ ಮಾಡಲಿದೆ. ಮನೆ ಅಥವಾ ಜಾಗ ಖರೀದಿ ಮಾಡಲು ಇಂದು ಸೂಕ್ತ ದಿನ. ವ್ಯವಹಾರಿಕವಾಗಿ ನಿಮ್ಮ ಆದಾಯ ಹೆಚ್ಚಳವಾಗಲಿದೆ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ.

Horoscope Today October 06 2023 Zordic Sign
Image Credit to Original Source

ಸಿಂಹರಾಶಿ ಇಂದಿನ ದಿನಭವಿಷ್ಯ
ಉದ್ಯೋಗಳು ಉದ್ಯೋಗ ಸ್ಥಳದ ಬದಲಾವಣೆ ಮಾಡುವ ಸಾಧ್ಯತೆಯಿದೆ. ನಿಮ್ಮ ಸುತ್ತಮುತ್ತಲಿನ ವಾತಾವರಣವು ಆಹ್ಲಾದಕರವಾಗಿ ಇರುತ್ತದೆ. ಮನೆ, ವ್ಯವಹಾರವನ್ನು ಮಾಡಲು ಬಯಸಿದರೆ ವಿವಾದಗಳಿಂದ ದೂರವಿರಿ. ನಿಮ್ಮ ಮಾತಿನ ಮೇಲೆ ಎಚ್ಚರಿಕೆ ಇರಲಿ.

ಇದನ್ನೂ ಓದಿ : ಹೊಸ ಸ್ವಿಫ್ಟ್‌ ಅನಾವರಣಗೊಳಿಸಿದ ಮಾರುತಿ ಸುಜುಕಿ : ಅತ್ಯಂತ ಕಡಿಮೆ ಬೆಲೆ ಅತ್ಯಾಧುನಿಕ ತಂತ್ರಜ್ಞಾನ

ಕನ್ಯಾರಾಶಿ ಇಂದಿನ ದಿನಭವಿಷ್ಯ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕೆಲಸ ಕಾರ್ಯಗಳು ಇಂದು ಸುಲಭವಾಗಿ ಪೂರ್ಣಗೊಳ್ಳುತ್ತದೆ. ಸರಕಾರಿ ಉದ್ಯೋಗಳಿಗೆ ಹೆಚ್ಚಿನ ಅನುಕೂಲ. ಮಹಿಳಾ ಸ್ನೇಹಿತರಿಂದ ನಿಮಗೆ ಇಂದು ಸಹಕಾರ ದೊರೆಯಲಿದೆ. ಸಾಕಷ್ಟು ಚಟುವಟಿಕೆಯಿಂದ ಸಮಯವನ್ನು ಕಳೆಯುವಿರಿ.

ತುಲಾರಾಶಿ ಇಂದಿನ ದಿನಭವಿಷ್ಯ
ಪಾಲುದಾರಿಕೆಯಿಂದ ಹೆಚ್ಚಿನ ಲಾಭ. ಸ್ನೇಹಿತರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಉದ್ಯೋಗದಾತರ ಜೊತೆಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಿ. ವ್ಯವಹಾರ ಕ್ಷೇತ್ರದಲ್ಲಿ ಕಡಿಮೆ ಆರ್ಥಿಕ ಲಾಭ ದೊರೆಯಲಿದೆ. ಸಂಗಾತಿಯ ಬೇಸರವನ್ನು ತಣಿಸಲು ಪ್ರಯತ್ನಿಸಿ, ಇದರಿಂದ ಲಾಭವಿದೆ.

ವೃಶ್ಚಿಕರಾಶಿ ಇಂದಿನ ದಿನಭವಿಷ್ಯ
ತಂದೆಯ ಜೊತೆಗಿನ ಭಿನ್ನಾಭಿಪ್ರಾಯ ಇಂದು ಬಗೆ ಹರಿಯಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ಪಡೆಯಲಿದ್ದೀರಿ. ಸಾಮಾಜಿಕವಾಗಿ ಸಾಕಷ್ಟು ಕೊಡುಗೆಗಳನ್ನು ನೀಡಲಿದ್ದೀರಿ. ವಿದ್ಯಾರ್ಥಿಗಳು ಪರೀಕ್ಷೆಯ ವಿಚಾರದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯಲಿದ್ದಾರೆ.

ಧನಸ್ಸುರಾಶಿ ಇಂದಿನ ದಿನಭವಿಷ್ಯ
ದೂರದ ಬಂಧುಗಳ ಆಗಮನದಿಂದ ನಿಮ್ಮ ಮನಸಿಗೆ ಸಂತಸ ದೊರೆಯಲಿದೆ. ಕುಟುಂಬ ಸದಸ್ಯರ ಜೊತೆಗಿನ ಮನಸ್ತಾಪ ಇಂದು ಕೊನೆಗೊಳ್ಳಲಿದೆ. ಯಾರಿಗಾದರೂ ಸಾಲ ನೀಡಿದ್ದರೆ, ಆ ಸಾಲ ಇಂದು ಹಿಂದಿರುಗಿ ಬರುವ ಸಾಧ್ಯತೆಯಿದೆ. ಸಂಜೆಯ ವೇಳೆಗೆ ನೆರೆ ಹೊರೆಯವರ ಜೊತೆಗೆ ಸಮಯ ಕಳೆಯುವಿರಿ.

ಇದನ್ನೂ ಓದಿ  : ವಿಶ್ವಕಪ್‌ ಕ್ರಿಕೆಟ್‌ : ಇಂಗ್ಲೆಂಡ್‌ ವಿರುದ್ದ ನ್ಯೂಜಿಲೆಂಡ್‌ಗೆ ಗೆಲುವು, ಕಿವೀಸ್ ಪರ ಬೆಂಗಳೂರಿನ ರಾಚಿನ್‌ ರವೀಂದ್ರ ಚೊಚ್ಚಲ ಶತಕ

ಮಕರರಾಶಿ ಇಂದಿನ ದಿನಭವಿಷ್ಯ
ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವ್ಯವಹಾರದಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ವ್ಯಾಪಾರಿಗಳು ವ್ಯವಹಾರಿಕ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಪೋಷಕರ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ.

ಕುಂಭರಾಶಿ ಇಂದಿನ ದಿನಭವಿಷ್ಯ
ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಿವಾದಗಳಿದ್ದರೂ ಕೂಡ ಇಂದು ಕೊನೆಗೊಳ್ಳಲಿದೆ. ವೈವಾಹಿಕ ಜೀವನವು ಆಹ್ಲಾದಕರವಾಗಿ ಇರುತ್ತದೆ. ದೈಹಿಕ ಸಮಸ್ಯೆಗಳು ಇಂದು ಪರಿಹಾರವನ್ನು ಕಾಣಲಿದೆ. ಸಂಗಾತಿಯ ಜೊತೆಗೆ ಕೈಗೊಳ್ಳುವ ನಿರ್ಧಾರಗಳು ಇಂದು ಫಲವನ್ನು ಕೊಡುತ್ತದೆ.

ಮೀನರಾಶಿ ಇಂದಿನ ದಿನಭವಿಷ್ಯ
ಆದಾಯಕ್ಕೆ ತಕ್ಕಂತೆ ಖರ್ಚು ಮಾಡಿ, ಇಲ್ಲವಾದ್ರೆ ನಿಮ್ಮ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಸಂಜೆಯ ವೇಳೆಗೆ ಕುಟುಂಬ ಸದಸ್ಯರು ನಿಮ್ಮ ಸಮಸ್ಯೆಯನ್ನು ಆಲಿಸುತ್ತಾರೆ. ಸ್ನೇಹಿತರ ಜೊತೆಗೆ ಸುತ್ತಾಡಲು ತೆರಳುವಿರಿ. ನಿಮ್ಮ ಜೀವನದಲ್ಲಿ ಇಂದು ಹಲವು ಶುಭ ಘಟನೆಗಳು ಸಂಭವಿಸಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today October 06 2023 Zordic Sign

Comments are closed.