ದಕ್ಷಿಣ ಅಮೆರಿಕಾದಲ್ಲಿ ಈಗಾಗಲೇ ಬಿಡುಗಡೆ ಯಾಗಿರುವ 7 ಆಸನಗಳ ಎಸ್‌ಯುವಿ ಜೀಪ್ ಕಮಾಂಡರ್ ಭಾರತಕ್ಕು ಕಾಲಿಡಲಿದೆ. ಜೀಪ್ ಕಮಾಂಡರ್ ಅನ್ನು ಬ್ರೆಜಿಲ್‌ನ ಪೆರ್ನಾಂಬುಕೋ ದಲ್ಲಿರುವ ಜೀಪ್ ಕಾರ್ಖಾನೆಯಲ್ಲಿ ತಯಾರಿಸ ಲಾಗುತ್ತಿದೆ. ಈ ಎಸ್‌ಯುವಿಯು ಕಂಪಾಸ್, ರೆನೆಗೇಡ್ ಮತ್ತು ಇತರ ಜೀಪ್ ಮಾದರಿಗಳಿಗೆ ಬಳಸುವ ಅದೇ ವೇದಿಕೆಯನ್ನು ಆಧರಿಸಿದೆ. ಇದನ್ನು ದಕ್ಷಿಣ ಅಮೆರಿಕಾದಲ್ಲಿ $ 199,990 (ಸುಮಾರು 28.23 ಲಕ್ಷ ರೂ.) ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಜೀಪ್ ಕಮಾಂಡರ್ ಎಸ್‌ಯುವಿ ಶೀಘ್ರದಲ್ಲೇ ಭಾರತಕ್ಕೂ ಬರಲಿದ್ದು. ಕಾರು ತಯಾರಕರು ಯಾವುದೇ ಟೈಮ್‌ಲೈನ್ ಹಂಚಿಕೊಂಡಿಲ್ಲವಾದರೂ, ಮುಂದಿನ ವರ್ಷದಲ್ಲಿ ಇದನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಜೀಪ್ ಕಮಾಂಡರ್ SUV ಅನ್ನು ಮೆರಿಡಿಯನ್ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಬಹುದು. ಇದು ಮುಂಬರುವ ವೋಕ್ಸ್‌ವ್ಯಾಗನ್ ಟಿಗುವಾನ್, ಎಂಜಿ ಗ್ಲೋಸ್ಟರ್‌ನಂತಹ ಇತರ ಕಾರುಗಳೊಂದಿಗೆ ಸ್ಪರ್ಧಿಸಲಿದೆ.
ಇದನ್ನೂ ಓದಿ: ಪಾಕಿಸ್ತಾನದ Suzuki Alto Vs ಭಾರತದ Maruti Alto ! ಈ ಕಾರುಗಳ ನಡುವಿನ ವ್ಯತ್ಯಾಸ ನಿಮಗೆ ಗೊತ್ತಾ ?

ದಕ್ಷಿಣ ಅಮೆರಿಕಾದ ಮಾರುಕಟ್ಟೆಗಳಿಗೆ, ಜೀಪ್ ಕಮಾಂಡರ್ ಎಸ್‌ಯುವಿಯನ್ನು ಲಿಮಿಟೆಡ್ ಮತ್ತು ಓವರ್‌ಲ್ಯಾಂಡ್ ಎಂಬ ಎರಡು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. ಲಿಮಿಟೆಡ್ ರೂಪಾಂತರವು 4X2 ವೀಲ್ ಡ್ರೈವ್ ವ್ಯವಸ್ಥೆಯನ್ನು ಪಡೆದರೆ, ಓವರ್ ಲ್ಯಾಂಡ್ ಟ್ರಿಮ್ 4X4 ಮೋಡ್ ಅನ್ನು ಪಡೆಯುತ್ತದೆ.

ಜೀಪ್ ಕಮಾಂಡರ್ ಒಂದು ದೊಡ್ಡ ಬೂಟ್ ಜಾಗವನ್ನು ಹೊಂದಿದೆ. ಇದು ಎಲ್ಲಾ ಏಳು ಆಸನ ಗಳೊಂದಿಗೆ 233 ಲೀಟರ್ ಬೂಟ್ ಜಾಗವನ್ನು ನೀಡುತ್ತದೆ. ಮೂರನೇ ಸಾಲಿನ ಆಸನಗಳನ್ನು ಮಡಚಿದಾಗ ಇದನ್ನು 661 ಲೀಟರ್‌ಗಳಿಗೆ ಹೆಚ್ಚಿಸಬಹುದು. ಕೊನೆಯ ಎರಡು ಸಾಲುಗಳ ಆಸನಗಳನ್ನು ಮಡಚಿದರೆ, ಬೂಟ್ ಜಾಗವನ್ನು 1,760 ಲೀಟರ್‌ಗಳಿಗೆ ಹೆಚ್ಚಿಸಬಹುದು.

ಜೀಪ್ ಕಮಾಂಡರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಎಸ್ಯುವಿಯನ್ನು ನೀಡುತ್ತಿದೆ. ಲಿಮಿಟೆಡ್ ಮತ್ತು ಓವರ್‌ಲ್ಯಾಂಡ್ ವೆರಿಯಂಟ್‌ಗಳು 1.3 -ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು 185 ಬಿಎಚ್‌ಪಿ ಪವರ್ ಮತ್ತು 270 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಬಲ್ಲವು. ಇದು 170 ಬಿಎಚ್‌ಪಿ ಪವರ್ ಮತ್ತು 380 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ನೀಡಬಲ್ಲದು.
ಇದನ್ನೂ ಓದಿ: Upcoming Cars : ಸಪ್ಟೆಂಬರ್‌ನಲ್ಲಿ ಭಾರತ ಮಾರುಕಟ್ಟೆಗೆ ಬರುತ್ತೆ ಈ ಕಾರುಗಳು

ಜೀಪ್ ಕಮಾಂಡರ್‌ಗೆ ಎರಡು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡಲಾಗಿದೆ, ಮೊದಲನೆಯದು ಫ್ರಂಟ್ – ವೀಲ್ ಡ್ರೈವ್ ಆವೃತ್ತಿಗಳಿಗೆ ಆರು ಸ್ಪೀಡ್ ಆಟೋಮ್ಯಾಟಿಕ್ ಆಗಿದೆ. ಎರಡನೆಯದು, ಡೀಸೆಲ್ ಚಾಲಿತ ಆಯ್ಕೆಗಳಿಗಾಗಿ ಒಂಬತ್ತು ಗೇರ್ ಗಳೊಂದಿಗೆ ಬರುತ್ತದೆ. ಇನ್ನೂ ಈ ಜೀಪ್ ಕಮಾಂಡರ ಭಾರತಕ್ಕೆ ಯಾವಾಗ ಕಾಲಿಡಲಿದೆ ಅನ್ನೋದನ್ನು ಕಾದುನೋಡಬೇಕಿದೆ.