ಅನ್ನದಿಂದಲೂ ತಯಾರಿಸಬಹುದು ʼರಸಗುಲ್ಲ’ ! ಈ ರೆಸಿಪಿ ನಿಮಗೆ ಗೊತ್ತಾ..?

ರಾತ್ರಿ ಮಿಕ್ಕ ಅನ್ನವನ್ನು ಬೆಳಿಗ್ಗೆ ಚಿತ್ರನ್ನ ಇಲ್ಲಾ ಪುಳಿಯೊಗರೆ ಮಾಡಲು ಉಪಯೋಗಿಸುತ್ತೇವೆ. ಆದರೆ ರಾತ್ರಿ ಉಳಿದ ಅನ್ನದಿಂದ ರುಚಿಯಾದ, ಸಿಹಿಯಾದ ಸಿಹಿ ತಿಂಡಿಯನ್ನು ತಯಾರಿಸಬಹುದು ಅಂತ ನಿಮಗೆ ತಿಳಿದಿದ್ಯಾ?  ಹೌದು ರಾತ್ರಿ ಉಳಿದಿರುವ ಅನ್ನದಿಂದ ರುಚಿಕರವಾದ ರಸಗುಲ್ಲವನ್ನು ತಯಾರಿಸಬಹುದು. ಅನ್ನದ ರಸಗುಲ್ಲ ರೆಸಿಪಿ ನಿಮಗಾಗಿ.

ಅನ್ನದ ರಸಗುಲ್ಲ ಮಾಡಲು ಬೇಕಾಗುವ ಪದಾರ್ಥ: ಒಂದು ಚಮಚ ಆರಾರೊಟ್ಟಿನ ಪುಡಿ, ಒಂದು ಚಮಚ ಮೈದಾ ಹಿಟ್ಟು, ಒಂದು ದೊಡ್ಡ ಚಮಚ ಹಾಲಿನ ಪುಡಿ, ಒಂದು ಚಮಚ ತುಪ್ಪ, ಅರ್ಧ ಕಪ್ ಸಕ್ಕರೆ, ಮೂರು ಕಪ್ ನೀರು, ಅರ್ಧ ಕಪ್ ಅನ್ನ ಇವಿಷ್ಟನ್ನು ರೆಡಿಮಾಡಿ ಇಟ್ಟುಕೊಳ್ಳಬೇಕು.

ಇದನ್ನೂ ಓದಿ: Banana Jamun :ಬಾಳೆಹಣ್ಣಿನಿಂದ ಮಾಡಬಹುದು ʼಜಾಮೂನ್ʼ ! ರೆಸಿಪಿ ಗೊತ್ತಾ ನಿಮಗೆ ?

ಅನ್ನದ ರಸಗುಲ್ಲ ಮಾಡುವ ವಿಧಾನ : ಮೊದಲು ಅನ್ನವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಗೆ ತುಪ್ಪ ಹಾಕಿ. ಅದಕ್ಕೆ ರುಬ್ಬಿದ ಅನ್ನ, ಆರಾರೊಟ್, ಹಾಲಿನ ಪುಡಿ, ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚೆನ್ನಾಗಿ ನಾದಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.

ಇನ್ನೊಂದು ಪಾತ್ರೆಗೆ ಸಕ್ಕರೆ ಹಾಗೂ ನೀರನ್ನು ಹಾಕಿ ಬಿಸಿ ಮಾಡಿ. ನಂತರ ಸಕ್ಕರೆ ಪಾಕ ಸಿದ್ಧವಾಗ್ತಿದ್ದಂತೆ ರಸಗುಲ್ಲದ ಉಂಡೆಗಳನ್ನು 5-10 ನಿಮಿಷ ಬೇಯಿಸಿ. ಮತ್ತೆ ಇನ್ನೊಂದು ಕಡೆಯೂ 5-10 ನಿಮಿಷ ಬೇಯಿಸಿ. ಇಷ್ಟು ಮಾಡಿದರೆ ಸಾಕು ಉಳಿದ ಅನ್ನದಲ್ಲಿ ರುಚಿರುಚಿ ರಸಗುಲ್ಲ ಸವಿಯಲ್ಲೂ ಸಿದ್ಧವಾಗುತ್ತೆ.

ಇದನ್ನೂ ಓದಿ: ಬಾಯಲ್ಲಿ ನೀರು ತರಿಸುತ್ತೆ ಸಿಹಿ ಸಿಹಿ ಜಿಲೇಬಿ : ಮನೆಯಲ್ಲಿ ಒಮ್ಮೆ ಟ್ರೈಮಾಡಿ

Comments are closed.