Avani Lekhara : ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಅವನಿ ಲೇಖರ

ಟೊಕಿಯೋ : ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದೆ. ಇದೀಗ ಮಹಿಳೆಯರ 10 ಮೀಟರ್‌ ಏರ್‌ ರೈಫಲ್ಸ್‌ನಲ್ಲಿ ಭಾರತದ ಅವನಿ ಲೇಖರ ಐತಿಹಾಸಿಕ ದಾಖಲೆಯನ್ನು ಮಾಡಿದ್ದು, ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಈ ಮೂಲಕ ನಾಲ್ಕನೇ ಪದಕ ಜಯಿಸಿದಂತಾಗಿದೆ.

ಅವನಿ ಲೇಖರಾ 10 ಮೀಟರ್‌ ಏರ್‌ ರೈಪಲ್‌ ಶೂಟಿಂಗ್‌ ಫೈನಲ್‌ನಲ್ಲಿ 249.6 ಅಂಕಗಳನ್ನು ಪಡೆದುಕೊಂಡು ವಿಶ್ವದಾಖಲೆಯನ್ನು ಸರಿದೂಗಿಸಿದ್ದಾರೆ. ಅವನಿ ಲೇಖರ ಈ ಮೊದಲು 617.7 ಅಂಕಗಳೊಂದಿಗೆ 7 ನೇ ಸ್ಪರ್ಧಿಯಾಗಿ ಫೈನಲ್‌ ಪ್ರವೇಶಿಸಿದ್ದರು.

ಫೈನಲ್‌ನಲ್ಲಿ ಅವನಿ ಲೇಖರ್‌ ವಿಶ್ವದಾಖಲೆಯ ಪ್ರದರ್ಶನವನ್ನು ನೀಡುವ ಮೂಲಕ ಪ್ಯಾರಾಲಿಂಪಿಕ್ಸ್‌ ಚಿನ್ನದ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಭಾರತ 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಜಯಿಸಿದೆ.

ಇದನ್ನೂ ಓದಿ : Paralympics 2020 : ಪ್ಯಾರಾಲಿಂಪಿಕ್ಸ್‌ನಲ್ಲಿ ಹೈಜಂಪ್‌ನಲ್ಲಿ ಬೆಳ್ಳಿಗೆದ್ದ ನಿಶಾದ್‌ ಕುಮಾರ್‌

ಇದನ್ನೂ ಓದಿ : MS ಧೋನಿ ವಿಶ್ವದ 2ನೇ ಶ್ರೀಮಂತ ಕ್ರಿಕೆಟಿಗ ! ʼಮಾಹಿʼ ವಾರ್ಷಿಕ ಆದಾಯ ಎಷ್ಟು ಗೊತ್ತಾ?

Comments are closed.