ಟಾಟಾ ಮೋಟಾರ್ಸ್ ಈಗಾಗಲೇ ಮಾರುಕಟ್ಟೆಗೆ ಹಲವು ಅತ್ಯಾಧುನಿಕ ತಂತ್ರಜ್ಞಾನದ ಕಾರುಗಳನ್ನು ಪರಿಚಯಿಸಿದೆ. ಇದೀಗ ಟಾಟಾ ಕಾರುಗಳಲ್ಲಿ ಅಲೆಕ್ಸಾ ತಂತ್ರಜ್ಞಾನವನ್ನು (amazon alexa) ಪರಿಚಯಿಸಲಿದೆ. ಪ್ರಮುಖವಾಗಿ ಎಸ್‌ಯುವಿ (SUV) ಕಾರುಗಳಾದ ನೆಕ್ಸಾನ್ (Nexon), ನೆಕ್ಸಾನ್ ಇವಿ (Nexon.ev), ಹ್ಯಾರಿಯರ್ ಮತ್ತು ಸಫಾರಿಗಳಲ್ಲಿ ಈ ಫಿಚರ್ಸ್ ಲಭ್ಯವಾಗಲಿದೆ.
ಟಾಟಾ ಮೋಟಾರ್ಸ್ ಕಂಪೆನಿಯ ಜೊತೆಗೆ ಅಮೆಜಾನ್ ಕೈಜೋಡಿಸಿದೆ. ಸ್ವದೇಶಿ ಬೃಹತ್ ಕಾರು ತಯಾರಿಕಾ ಸಂಸ್ಥೆಯಾಗಿರುವ ಟಾಟಾದ ಕಾರುಗಳಲ್ಲಿ ಇನ್ಮುಂದೆ ಅಲೆಕ್ಸಾ ಬಿಲ್ಟ್-ಇನ್ ಫೀಚರ್ಸ್ ಲಭ್ಯವಾಗಲಿದೆ. ಈ ಫೀಚರ್ಸ್‌ನಿಂದಾಗಿ ವಾಹನ ಚಾಲಕರು ತಮ್ಮ ಕೈಯನ್ನು ಸ್ಟೇರಿಂಗ್ ಮೇಲಿನಿಂದ ತೆಗೆಯದೇ ಕಾರುಗಳಲ್ಲಿನ ವೈಶಿಷ್ಟ್ಯತೆಗಳನ್ನು ಬಳಸಿಕೊಳ್ಳಬಹುದಾಗಿದೆ.

ಕಾರುಗಳ ಮಾಲೀಕರು ಅಲೆಕ್ಸಾವನ್ನನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಬಳಕೆ ಮಾಡಬಹುದಾಗಿದೆ. ಕಾರಿನಲ್ಲಿನ ಎಸಿ ಕಂಟ್ರೋಲ್, ಗಾಳಿಯ ಹರಿವಿನ ಸೆಟ್ಟಿಂಗ್, ಸನ್‌ರೂಪ್ ತೆಗೆಯಲು ಹಾಗೂ ಮುಚ್ಚಲು ಸೇರಿದಂತೆ ವಿವಿಧ ಫೀಚರ್ಸ್‌ಗಳನ್ನು ಬಳಸಿಕೊಳ್ಳಲು ಅಲೆಕ್ಸಾ ನೆರವಾಗಲಿದೆ.
ಇದನ್ನೂ ಓದಿ : ಕೇವಲ 25,000 ರೂಪಾಯಿಗೆ ಬುಕ್ ಮಾಡಿ ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್
ಇನ್ಮುಂದೆ ಟಾಟಾ ಕಾರುಗಳ ಮಾಲೀಕರು ತಮ್ಮ ಕಾರುಗಳಲ್ಲಿ 360-ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾವನ್ನು ಕೂಡ ಅಲೆಕ್ಸಾದಿಂದ ನಿರ್ವಹಣೆ ಮಾಡಬಹುದಾಗಿದೆ. ಕಾರುಗಳ ಸುರಕ್ಷತೆಯ ಜೊತೆಗೆ ಉತ್ತಮ ಚಾಲನಾ ಅನುಭವವನ್ನು ಅಲೆಕ್ಸಾ ನೀಡಲಿದೆ.

ಟಾಟಾ ಮೋಟಾರ್ಸ್ ನೀಡಿರುವ ಮಾಹಿತಿಯ ಪ್ರಕಾರ. ಕಾರುಗಳಲ್ಲಿ ಮಾಲೀಕರು ತಮ್ಮ ನೆಚ್ಚಿನ ಹಾಡುಗಳನ್ನು ಕೇಳಲು, ಮಾರ್ಗಗಳನ್ನು ನ್ಯಾನಿಗೇಟ್ ಮಾಡಲು, ಪೋನ್ ಕರೆಗಳನ್ನು ಸ್ವೀಕರಿಸಲು, ಆಡಿಯೋ ಬುಕ್ ನಿರ್ವಹಣೆ ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಪಡೆಯಲು ಅಲೆಕ್ಸಾ ನೆರವಾಗಲಿದೆ.
ಇದನ್ನೂ ಓದಿ : ಕೇವಲ 3.5 ಗಂಟೆಗಳ ವೇಗದ ಚಾರ್ಜಿಂಗ್ : ಸೋನಾಲಿಕಾ ಎಲೆಕ್ಟ್ರಿಕ್ ಹೊಸ ಟ್ರ್ಯಾಕ್ಟರ್ ಬಿಡುಗಡೆ ಮಾಡಿದ ಐಟಿಎಲ್
ಈಗಾಗಲೇ ಎಲ್ಲೆಡೆಯಲ್ಲಿಯೂ AI ತಂತ್ರಜ್ಞಾನವೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಅಲೆಕ್ಸಾ AI ತಂತ್ರಜ್ಞಾನದ ಜೊತೆಗೆ ನಮ್ಮ ಗಾಹಕರ ದೈನಂದಿನ ಜೀವನದಲ್ಲಿ ಉತ್ತಮ ಸೇವೆ ನೀಡಲು ಟಾಟಾ ಮೋಟಾರ್ಸ್ ಮುಂದಾಗಿದೆ ಎಂದು ಅಲೆಕ್ಸಾ ಅಮೇಜಾನ್ ಇಂಡಿಯಾದ ಭಾರತದ ನಿರ್ದೇಶ ದಿಲೀಪ್ ಆರ್‌ಎಸ್ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಮ್ಯಾನೇಜರ್, ಅಲೆಕ್ಸಾ, ಅಮೆಜಾನ್ ಇಂಡಿಯಾ.

“ಟಾಟಾ ಮೋಟಾರ್ಸ್ ಜೊತೆಗಿನ ಈ ಸಹಯೋಗವು ಗ್ರಾಹಕರು ತಮ್ಮ ಮನೆಯಿಂದ ತಮ್ಮ ಟಾಟಾ ಮೋಟಾರ್ಸ್ ವಾಹನಗಳಲ್ಲಿ, ಕಾರುಗಳ ನಿಯಂತ್ರಣ ಮತ್ತು ನ್ಯಾವಿಗೇಷನ್‌ಗೆ ಹೆಚ್ಚುವರಿ ಕಾರ್ಯನಿರ್ವಹಣೆಯೊಂದಿಗೆ ಅಲೆಕ್ಸಾ ಸಹಕಾರಿಯಾಗಲಿದೆ. ಇನ್ನೂ ಹೆಚ್ಚಿನ ಸೌಲಭ್ಯ ನೀಡಲು ನಾವು ಬದ್ದರಾಗಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ : ಟಾಟಾ ಸಫಾರಿ, ಟಾಟಾ ಹ್ಯಾರಿಯರ್ 2023 ಭಾರತದ ಅತ್ಯಂತ ಸುರಕ್ಷಿತ ಕಾರು : ಪ್ರಯಾಣಿಕರ ಸುರಕ್ಷತೆಯಲ್ಲಿ ಮತ್ತೆ ಟಾಟಾ ನಂ.1
ಟಾಟಾ ಸಫಾರಿ ಹಾಗೂ ಟಾಟಾ ಹ್ಯಾರಿಯರ್ ಕಾರುಗಳು ಈಗಾಗಲೇ ಸುರಕ್ಷತೆಯಲ್ಲಿ ಅತ್ಯುತ್ತಮ ರೇಟಿಂಗ್ ಪಡೆದುಕೊಂಡಿದೆ. ಆಲ್ಟ್ರೋಜ್ ಕಾರು ಅತ್ಯಂತ ಸುರಕ್ಷಿತ ಕಾರು ಅನ್ನೊ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ವಿಪಿ ಮತ್ತು ಸಿಟಿಒ ಸೈನ್ ಪಟುಷ್ಕಾ ಮಾತನಾಡಿದ್ದಾರೆ.

ಹೊಸ ತಂತ್ರಜ್ಞಾನದಿಂದಾಗಿ ಗ್ರಾಹಕರು ಡ್ರೈವಿಂಗ್ ವೇಳೆಯಲ್ಲಿ ಹೊಸ ಅನುಭವನ್ನು ನೀಡಲಿದೆ. ಟಾಟಾ ಕಾರುಗಳಲ್ಲಿ ಇನ್ಮುಂದೆ ಅಲೆಕ್ಸಾ ಅನುಭವ ನಿಮ್ಮದಾಗಲಿದೆ ಎಂದಿದ್ದಾರೆ. ಟಾಟಾ ಸಂಸ್ಥೆ ಇತ್ತೀಚಿಗಷ್ಟೆ ಹೊಸ ತಂತ್ರಜ್ಞಾನದ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಅಲೆಕ್ಸಾ ಅನುಭವ ಇನ್ಮುಂದೆ ಕಾರುಗಳ ಮಾಲಕರದ್ದಾಗಲಿದೆ.
Alexa features in Tata cars New experience in Tata Nexon Nexon.ev Harrier Safari cars