ಟಾಟಾ ಸಫಾರಿ, ಟಾಟಾ ಹ್ಯಾರಿಯರ್ 2023 ಭಾರತದ ಅತ್ಯಂತ ಸುರಕ್ಷಿತ ಕಾರು : ಪ್ರಯಾಣಿಕರ ಸುರಕ್ಷತೆಯಲ್ಲಿ ಮತ್ತೆ ಟಾಟಾ ನಂ.1

ಟಾಟಾ ಮೋಟಾರ್ಸ್ ಕಂಪೆನಿಯ (Tata Motors) ಟಾಟಾ ಸಫಾರಿ (Tata Safari 2023) ಮತ್ತು ಟಾಟಾ ಹ್ಯಾರಿಯರ್‌ 2023 (Tata Harrier 2023) ರ ಭಾರತದ ಅತ್ಯಂತ ಸುರಕ್ಷಿತ ಕಾರು ( safest  cars in india 2023)  ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಅತ್ಯುತ್ತಮ ಕಾರುಗಳನ್ನು ಸಿದ್ದಪಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪೆನಿಯ (Tata Motors) ಟಾಟಾ ಸಫಾರಿ (Tata Safari 2023) ಮತ್ತು ಟಾಟಾ ಹ್ಯಾರಿಯರ್‌ 2023 (Tata Harrier 2023) ರ ಭಾರತದ ಅತ್ಯಂತ ಸುರಕ್ಷಿತ ಕಾರು ( safest  cars in india 2023)  ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ( Global NCAP Test) ಅತ್ಯುತ್ತಮ ರೇಟಿಂಗ್‌ ಪಡೆದುಕೊಂಡಿವೆ.

Tata Safari, Tata Harrier 2023 India's Safest Cars in Global NCAP Test, Tata No.1 Again in Passenger Safety
Image Credit : Tata Motors

ಟಾಟಾಸಫಾರಿ ಮತ್ತು ಹ್ಯಾರಿಯರ್ ಫೇಸ್‌ಲಿಫ್ಟ್‌ಗಳು ವಿಶ್ವದಲ್ಲಿಯೇ ಇಷ್ಷು ಗರಿಷ್ಟ ಸ್ಕೋರ್‌ಗಳನ್ನು ಯಾವ ಕಾರುಗ ಕೂಡ ಪಡೆದುಕೊಂಡಿಲ್ಲ. 2023 ಟಾಟಾ ಸಫಾರಿ, 2023 ಟಾಟಾ ಹ್ಯಾರಿಯರ್, ಟಾಟಾ ಸಫಾರಿ 2023 ಮತ್ತು ಹ್ಯಾರಿಯರ್ 2023 ಸೇರಿ ಆರು ವಿನ್ಯಾಸಲ್ಲಿ ಕಾರು ಖರೀದಿಸಬಹುದಾಗಿದೆ.

Tata Safari, Tata Harrier 2023 India's Safest Cars in Global NCAP Test, Tata No.1 Again in Passenger Safety
Image Credit : Global NCAP

ಟಾಟಾಸಫಾರಿ ಮತ್ತು ಹ್ಯಾರಿಯರ್ ಕಾರುಗಳು ಈಗಾಗಲೇ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಗ್ಲೋಬಲ್ ಎನ್‌ಸಿಎಪಿ) ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಪಾಸ್‌ ಆಗಿದ್ದು, ಮಾತ್ರವಲ್ಲ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿವೆ. ಇದಕ್ಕೆ ಕಾರುಗಳಲ್ಲಿನ ವಿನ್ಯಾಸ ಮತ್ತು ಸುರಕ್ಷತಾ ವೈಶಿಷ್ಟ್ಯತೆಗಳೇ ಕಾರಣವಾಗಿದೆ.

ಇದನ್ನೂ ಓದಿ : ಹೊಸ ಸ್ವಿಫ್ಟ್‌ ಅನಾವರಣಗೊಳಿಸಿದ ಮಾರುತಿ ಸುಜುಕಿ : ಅತ್ಯಂತ ಕಡಿಮೆ ಬೆಲೆ ಅತ್ಯಾಧುನಿಕ ತಂತ್ರಜ್ಞಾನ

ಟಾಟಾಸಫಾರಿ ಮತ್ತು ಹ್ಯಾರಿಯರ್ ಕಾರುಗಳು 34.00 ರಲ್ಲಿ ಎಣಿಕೆಯೂ ಮೀರಿದಂತೆ 33.05 ಅಂಕಗಳನ್ನು ಗಳಿಸಿವೆ. ಮಕ್ಕಳ ಸುರಕ್ಷತೆಯ ವಿಭಾಗ ದಲ್ಲಿಯೂ ಕಾರುಗಳು ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿವೆ. ಮಕ್ಕಳ ಸುರಕ್ಷತಾ ವಿಭಾಗದಲ್ಲಿ ಈ ಕಾರುಗಳು 49 ರಲ್ಲಿ 45.00 ಅಂಕಗಳನ್ನು ಪಡೆದುಕೊಂಡಿವೆ.

Tata Safari, Tata Harrier 2023 India's Safest Cars in Global NCAP Test, Tata No.1 Again in Passenger Safety
Image Credit : Global NCAP

ಟಾಟಾಸಫಾರಿ ಮತ್ತು ಹ್ಯಾರಿಯರ್ ಕಾರುಗಳನ್ನು ಹೊರತು ಪಡಿಸಿ ಉಳಿದ ಭಾರತೀಯ ಯಾವ ಕಾರುಗಳು ಕೂಡ ಗ್ಲೋಬಲ್ NCAPನಲ್ಲಿ ಇಷ್ಟೊಂದು ಗರಿಷ್ಟ ಸ್ಕೋರ್‌ ಪಡೆದುಕೊಂಡಿಲ್ಲ. ದೇಶದ ಕಾರುಗಳಲ್ಲಿಯೇ ಅತ್ಯಂತ ಸುರಕ್ಷಿತ ಕಾರುಗಳನ್ನು ಪರಿಚಯಿಸಿದ ಕೀರ್ತಿ ಇದೀಗ ಟಾಟಾ ಸಂಸ್ಥೆಗೆ ಸಲ್ಲುತ್ತದೆ.

ಇದನ್ನೂ ಓದಿ : ಕೇವಲ 25,000 ರೂಪಾಯಿಗೆ ಬುಕ್‌ ಮಾಡಿ ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಟಾಟಾ ಸಂಸ್ಥೆಯ ಟಾಟಾ ಸಫಾರಿ 2023 ಮತ್ತು ಟಾಟಾ ಹ್ಯಾರಿಯರ್ 2023ರ ಮಾಡೆಲ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಕಾರಿನಲ್ಲಿ ಒಟ್ಟು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರೋಲ್ ಓವರ್ ಮಿಟಿಗೇಶನ್, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಅಳವಡಿಸಲಾಗಿದೆ.

Tata Safari, Tata Harrier 2023 India's Safest Cars in Global NCAP Test, Tata No.1 Again in Passenger Safety
Image Credit : Tata Motors

ಮಾತ್ರವಲ್ಲದೇ ಬ್ರೇಕ್ ಡಿಸ್ಕ್ ವೈಪಿಂಗ್, ಪ್ಯಾನಿಕ್ ಬ್ರೇಕ್ ಅಲರ್ಟ್, ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಎಲೆಕ್ಟ್ರಾನಿಕ್ ಜೊತೆಗೆ ಬ್ರೇಕ್‌ಫೋರ್ಸ್ ವಿತರಣೆ (EBD), ಹಿಂಭಾಗದ ಪಾರ್ಕಿಂಗ್ ಸಂವೇದಕಗಳು ಮತ್ತು ಎಲ್ಲಾ ಆಸನಗಳಿಗೆ ಜ್ಞಾಪನೆಗಳೊಂದಿಗೆ ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿವೆ.

ಇದನ್ನೂ ಓದಿ : ಕೇವಲ ರೂ 6.50 ಲಕ್ಷ ಬೆಲೆಗೆ ಭಾರತದಲ್ಲಿ ಬಿಡುಗಡೆ ಆಯ್ತು ನಿಸ್ಸಾನ್ ಮ್ಯಾಗ್ನೈಟ್ EZ-Shift AMT

ಗ್ಲೋಬಲ್ ಎನ್‌ಸಿಎಪಿ( NCAP) ಪ್ರಕಾರ, ಸಫಾರಿ ಮತ್ತು ಹ್ಯಾರಿಯರ್ ಫೇಸ್‌ಲಿಫ್ಟ್‌ಗಳು ಕ್ರ್ಯಾಶ್ ಪರೀಕ್ಷೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಪ್ರದರ್ಶನವನ್ನು ನೀಡಿವೆ. ಪ್ರಯಾಣಿಕರ ಏರ್‌ಬ್ಯಾಗ್ ನಿಷ್ಕ್ರಿಯಗೊಳಿಸುವ ಸ್ವಿಚ್ ಅನ್ನು ಸಹ ಒಳಗೊಂಡಿರುತ್ತವೆ. ಅಲ್ಲದೇ ಪಾದಚಾರಿ ರಕ್ಷಣೆಗಾಗಿ UN127 ಮತ್ತು GTR9 ನ ಅವಶ್ಯಕತೆಗಳನ್ನು ಪ್ರಮಾಣಿತವಾಗಿ ಪೂರೈಸುತ್ತವೆ.

Tata Safari, Tata Harrier 2023 India's Safest Cars in Global NCAP Test, Tata No.1 Again in Passenger Safety
Image Credit : Tata Motors

ಅಲ್ಲದೇ ಈ ಕಾರುಗಳು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ತಂತ್ರಜ್ಞಾನವನ್ನು ಒಳಗೊಂಡಿವೆ. ಮಾರುಕಟ್ಟೆಯಲ್ಲಿ ಟಾಟಾ ಸಫಾರಿ 2023 ಮಾಡೆಲ್‌ ಕಾರು ಬೆಲೆ ರೂ 16.19 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಿದೆ. ಇನ್ನ ಟಾಟಾ ಹ್ಯಾರಿಯರ್ 2023 ಮಾಡಲ್‌ ಕಾರು 15.49 ಲಕ್ಷ ರೂಪಾಯಿಯಿಂದ ಲಭ್ಯವಾಗುತ್ತಿದೆ.

Tata Safari, Tata Harrier 2023 India’s Safest Cars in Global NCAP Test, Tata No.1 Again in Passenger Safety

Comments are closed.