Auto Expo 2023: ಇಂದು ಪ್ರಾರಂಭವಾದ ಆಟೋ ಎಕ್ಸ್ಪೋ 2023; ಭರ್ಜರಿಯಾಗಿ ಅನಾವರಣವಾಗಲಿರುವ ಹೊಸ ಕಾರುಗಳು

ಬಹು ನಿರೀಕ್ಷಿತ ಆಟೋ ಎಕ್ಪೋ 2023 (Auto Expo 2023) ಇಂದು (January 11, 2023) ಪ್ರಾರಂಭವಾಗಿದೆ. ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಮೂರು ವರ್ಷದ ನಂತರ ಮರಳಿದ ಭಾರತದ ಪ್ರಮುಖ ಮೋಟಾರ್‌ ಶೋ ಇದಾಗಿದೆ. ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಆಟೋ ಎಕ್ಸ್ಪೋದಲ್ಲಿ ತಮ್ಮ ಹಲವು ಉತ್ಪನ್ನಗಳನ್ನು ಬಿಡುಗಡೆ ಮತ್ತು ಅನಾವರಣ ಮಾಡಲಿವೆ. ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಕಿಯಾ ಇಂಡಿಯಾ, ಟೊಯೋಟಾ ಕಿರ್ಲೋಸ್ಕರ್ ಮತ್ತು ಎಂಜಿ ಮೋಟಾರ್ ಇಂಡಿಯಾ ಮುಂತಾದ ಕಂಪನಿಗಳು ಇದರಲ್ಲಿ ಭಾಗಿಯಾಗಿ ಅನೇಕ ನಿರೀಕ್ಷೆಗಳನ್ನು ಹೆಚ್ಚಿಸಿವೆ.

ಆಟೋ ಎಕ್ಸ್ಪೋ 2023 ಯು ಎರಡು ಸ್ಥಳಗಳಲ್ಲಿ ನಡೆಯಲಿದೆ. ಆಟೋಮೊಬೈಲ್‌ ವಸ್ತುಗಳ ಪ್ರದರ್ಶನ ಆಟೋ ಎಕ್ಸ್ಪೋ ಕಂಪೋನೆಂಟ್‌ ಶೋವನ್ನು ಪ್ರಗತಿ ಮೈದಾನ, ನವದೆಹಲಿಯಲ್ಲಿದಾರೆ, ಆಟೋ ಎಕ್ಸ್ಪೋ ಮೋಟಾರ್‌ ಶೋ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿದೆ. ಆಟೋ ಎಕ್ಸ್ಪೋ ಶೋ ಜನವರಿ 11ರಿಂದ 18 ರವರೆಗೆ ನಡೆಯಲಿದೆ. ಮೊದಲ ಎರಡು ದಿನ ಜನವರಿ 11 ಮತ್ತು 12 ಅನ್ನು ಮಾಧ್ಯಮಗಳಿಗಾಗಿ ಕಾಯ್ದಿರಿಸಲಾಗಿದೆ. ಜನವರಿ 13 ವ್ಯವಹಾರಗಳಿಗಾಗಿ ತೆರೆದಿರುತ್ತದೆ. ನಂತರ ಜನವರಿ 14 ರಿಂದ 18 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.

ಆಟೋ ಎಕ್ಸ್ಪೋ 2023 ಯಲ್ಲಿ ಭಾಗಿಯಾಗಲು ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಜನವರಿ 13 ರ ಶೋದಲ್ಲಿ ಟಿಕೆಟ್‌ ದರವು 750 ರೂ. ಗಳಾಗಿದೆ. ನಂತರ ಜನವರಿ 14 ಮತ್ತು 15 ರಂದು 475 ರೂ. ಗಳನ್ನು ನಿಗದಿಪಡಿಸಿದೆ. ಪ್ರದರ್ಶನದ ಕಡೆಯ ಮೂರು ದಿನಗಳಿಗೆ 350 ರೂ. ಗಳಾಗಿದೆ. ಆಟೋ ಎಕ್ಸ್ಪೋ 2023 ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಖರೀದಿಸಬಹುದಾಗಿದೆ.

ಇದನ್ನೂ ಓದಿ : ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಪಟ್ಟಿ 2023 : ಭಾರತಕ್ಕೆ ಎಷ್ಟನೇ ಸ್ಥಾನ ?

ಇದನ್ನೂ ಓದಿ : Mahindra Thar 4X2 RWD : 9.99 ಲಕ್ಷಕ್ಕೆ ಥಾರ್‌ 4X2 RWD ಅನ್ನು ಪರಿಚಯಿಸಿದ ಮಹಿಂದ್ರ

(Auto Expo 2023 starts today. Know the location, ticket price, and more)

Comments are closed.