ಬೈಕ್‌ಗಿಂತ ಅಧಿಕ ಮೈಲೇಜ್‌, ಅತ್ಯಂತ ಕಡಿಮೆ ಬೆಲೆ : ಇಂದು ಬಿಡುಗಡೆ ಆಗಲಿದೆ ಟಾಟಾ ನೆಕ್ಸಾನ್ iCNG

Tata Nexon iCNG : ಟಾಟಾ ಮೋಟಾರ್ಸ್‌ ಕಂಪೆನಿ ಈಗಾಗಲೇ ಅತ್ಯಾಧುನಿಕ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದೀಗ ಟಾಟಾ ಕಂಪೆನಿ ನೆಕ್ಸಾನ್‌ ಸಿಎನ್‌ಜಿ ಮಾದರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ.

Tata Nexon iCNG : ಟಾಟಾ ಮೋಟಾರ್ಸ್‌ ಕಂಪೆನಿ ಈಗಾಗಲೇ ಅತ್ಯಾಧುನಿಕ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದೀಗ ಟಾಟಾ ಕಂಪೆನಿ ನೆಕ್ಸಾನ್‌ ಸಿಎನ್‌ಜಿ ಮಾದರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಇಂದು ಟಾಟಾ ನೆಕ್ಸಾನ್‌ ಸಿಎನ್‌ಜಿ ಕಾರು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ನಲ್ಲಿ ಬಿಡುಗಡೆ ಆಗಲಿದೆ.

More mileage than a bike, very low price Tata Nexon iCNG will be launched today
Image Credit to Original Source

ಟಾಟಾ ನೆಕ್ಸಾನ್ iCNG ಜೊತೆಗೆ ಹ್ಯಾರಿಯರ್ EV, ಕರ್ವ್‌ (Curvv,) ಆಲ್ಟ್ರೋಜ್‌ (Altroz) ಹಾಗೂ ಪಂಚ್ EV ಕಾರುಗಳು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ಬಿಡುಗಡೆ ಆಗುತ್ತಿವೆ. ಟಾಟಾ ನೆಕ್ಸಾನ್‌ (Nexon iCNG) ಮಾದರಿಯು ಗ್ರಾಹಕರಿಗೆ ಹೊಸ ನಿರೀಕ್ಷೆಯನ್ನು ಹುಟ್ಟಿಸಿದೆ. ಅತ್ಯಂತ ಕಡಿಮೆ ಬೆಲೆಯ ಜೊತೆಗೆ ಅತ್ಯಧಿಕ ಮೈಲೇಜ್‌ ನಿರೀಕ್ಷೆ ಮಾಡಲಾಗುತ್ತಿದೆ.

ಇಂದು ಬಿಡುಗಡೆ ಆಗಲಿರುವ ನೆಕ್ಸಾನ್ ಸಿಎನ್‌ಜಿ ಮಾದರಿಯ ಕಾರು ಈ ವರ್ಷದ ಅಂತ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗುವ ನಿರೀಕ್ಷೆಯಿದೆ. ಇನ್ನು ಹ್ಯಾರಿಯರ್ EV, ಕರ್ವ್‌ ಕಾನ್ಸೆಫ್ಟ್‌ (Curvv) ಕಾರುಗಳ ಬಗ್ಗೆ ಹಲವು ನಿರೀಕ್ಷೆಯಿದೆ. ಈಗಾಗಲೇ ಸಫಾರಿ ಆಧಾರಿತ ಸುರಕ್ಷತಾ ಡೆಮೊ ವಾಹನವನ್ನು ಕೂಡ ಪ್ರದರ್ಶಿಸಲಾಗುತ್ತದೆ. ಇತ್ತೀಚೆಗೆ ಫೇಸ್‌ಲಿಫ್ಟೆಡ್ ನೆಕ್ಸಾನ್ SUV ತನ್ನ ಆಕರ್ಷಕ ಔಟ್‌ಲುಕ್‌ನಿಂದಲೇ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ.

ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆ, ಅತ್ಯಧಿಕ ಮೈಲೇಜ್‌ : ಮಾರುಕಟ್ಟೆಗೆ ಎಂಟ್ರಿ ಕೊಡಲಿಗೆ ಕಿಯಾ ಸೋನೆಟ್ 2024 ಫೇಸ್‌ಲಿಫ್ಟ್

ಟಾಟಾ ನೆಕ್ಸಾನ್‌ ಈಗಾಗಲೇ ಪೆಟ್ರೋಲ್‌, ಡಿಸೇಲ್‌ ಹಾಗೂ ಇವಿ ಆವೃತ್ತಿಯಲ್ಲಿ ಬಿಡುಗಡೆ ಆಗಿದೆ. ಆದರೆ ಸಿಎನ್‌ಜಿ ಮಾದರಿಯು ಗ್ರಾಹಕರ ಗಮನ ಸೆಳೆಯುವ ಸಾಧ್ಯತೆಯಿದೆ. ಸದ್ಯ ಟಾಟಾ ನೆಕ್ಸಾನ್‌ ಪೆಟ್ರೋಲ್, ಡೀಸೆಲ್, CNG, EV, ಮ್ಯಾನುವಲ್, AMT ಮತ್ತು DCT ಆಯ್ಕೆಗಳನ್ನು ಒಳಗೊಂಡಿದೆ. ಭಾರತದಲ್ಲಿಯೇ ಅತ್ಯಂತ ಸುರಕ್ಷಿತ ಕಾರು ಅನ್ನೋ ಹೆಗ್ಗಳಿಕೆಗೆ ಈಗಾಗಲೇ ನೆಕ್ಸಾನ್‌ ಪಾತ್ರವಾಗಿದೆ.

More mileage than a bike, very low price Tata Nexon iCNG will be launched today
Image Credit to Original Source

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024ನಲ್ಲಿ ಹ್ಯಾರಿಯರ್ EV, Curvv, Altroz ರೇಸರ್ ಕಾರು ಕೂಡ ಪ್ರದರ್ಶನಗೊಳ್ಳಲಿದ್ದು, ಆಟೋ ಮೊಬೈಲ್‌ ಜಗತ್ತು ಕಾತರದಿಂದ ಕಾಯುತ್ತಿದೆ. ಟಾಟಾ ಮೋಟಾರ್ಸ್ ಹ್ಯಾರಿಯರ್ EV, Altroz ರೇಸರ್, Curvv SUV ಈ ವರ್ಷದ ಕೊನೆಯಲ್ಲಿ ಮಾರಾಟವಾಗಲಿದೆ. Altroz ರೇಸರ್ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಇನ್ನು ಯಾರಿಯರ್ EV, ಈ ವರ್ಷದ ಕೊನೆಯಲ್ಲಿ ಮಾರಾಟವಾಗಲಿದೆ.

ಇದನ್ನೂ ಓದಿ : ಕೇವಲ 21,000ಕ್ಕೆ ಬುಕ್‌ ಮಾಡಿ ಟಾಟಾ ಟಿಯಾಗೋ, ಟಾಟಾ ಟಿಗರ್‌ CNG AMT

More mileage than a bike, very low price Tata Nexon iCNG will be launched today
Image Credit to Original Source

ಟಾಟಾ ನೆಕ್ಸಾನ್ EV ಡಾರ್ಕ್
ಟಾಟಾ ಮೋಟಾರ್ಸ್ ಸಫಾರಿ ಡಾರ್ಕ್ ಎಡಿಷನ್ ಪರಿಕಲ್ಪನೆ, ಸಫಾರಿ ಆಧಾರಿತ ಸುರಕ್ಷತಾ ಪ್ರದರ್ಶನ, ಇತ್ತೀಚೆಗೆ ಬಿಡುಗಡೆಯಾದ ಪಂಚ್ ಇವಿ ಮತ್ತು ನೆಕ್ಸಾನ್ ಇವಿ ಡಾರ್ಕ್ ಒಟ್ಟು ಎಂಟು ವಾಹನಗಳನ್ನು ಪ್ರದರ್ಶಿಸುತ್ತದೆ. Tiago, TIgor CNG AMT ಕೂಡ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.CNG-ಚಾಲಿತ Tiago ಮತ್ತು Tigor AMT ಫೆಬ್ರವರಿ ಆರಂಭದಲ್ಲಿ ಮಾರಾಟವಾಗಲಿದೆ, ಈ ಮಾದರಿಗಳು CNG ಪವರ್‌ಟ್ರೇನ್ ಮತ್ತು AMT ಸ್ವಯಂಚಾಲಿತ ಗೇರ್‌ಬಾಕ್ಸ್ ಹೊಂದಿದ ಭಾರತದ ಮೊದಲ ವಾಹನಗಳಾಗಿವೆ.

ಇದನ್ನೂ ಓದಿ :  ಕೇವಲ 500 ರೂಪಾಯಿಗೆ ಬುಕ್‌ ಮಾಡಿ ಕೈನೆಟಿಕ್ ಇ ಲೂನಾ : ಭಾರತದಲ್ಲಿ ಫೆಬ್ರವರಿ 7ಕ್ಕೆ ಲಾಂಚ್‌

More mileage than a bike, very low price: Tata Nexon iCNG will be launched today

Comments are closed.