ಭಾರತದಲ್ಲಿದೆ ವಿಶ್ವದ ಅತಿ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ

ನವದೆಹಲಿ : ದೇಶದಾದ್ಯಂತ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳು ತಲೆ ಎತ್ತುತ್ತಿವೆ. ಇದೀಗ ವಿಶ್ವದ ಅತಿ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಅನ್ನು ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಕಾಜಾದಲ್ಲಿ ಉದ್ಘಾಟಿಸಲಾಗಿದೆ. ಇದು ಸಮುದ್ರ ಮಟ್ಟದಿಂದ 12,500 ಅಡಿಗಳಷ್ಟು ಎತ್ತರದಲ್ಲಿದೆ. ಸ್ಪಿತಿ ವ್ಯಾಲಿಯ ಕಾಜಾದಲ್ಲಿರುವ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರವು ಸುಸ್ಥಿರ ಪರಿಸರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಕಾಜಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮಹೇಂದ್ರ ಪ್ರತಾಪ್ ಸಿಂಹ ಮಾತನಾಡಿ, “ಇದು ಕಾಜಾದ ವಿಶ್ವದ ಅತಿ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ನಿಲ್ದಾಣವಾಗಿದೆ. ಇದು ಇಲ್ಲಿನ ಮೊದಲ ನಿಲ್ದಾಣವಾಗಿದೆ. ಈ ನಿಲ್ದಾಣಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ, ಹೆಚ್ಚಿನ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಪರಿಸರ ಸಂರಕ್ಷಣೆಗೆ ಇದು ಸಹಕಾರಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Ola electric scooter : 2 ದಿನದಲ್ಲಿ 1,100 ಕೋಟಿ ಮೌಲ್ಯದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಮಾರಾಟ

ಸುಸ್ಥಿರ ವಾತಾವರಣವನ್ನು ಉತ್ತೇಜಿಸಲು ಇಂದು ಇಬ್ಬರು ಮಹಿಳೆಯರು ಎಲೆಕ್ಟ್ರಿಕ್ ವಾಹನದ ಮುಖಾಂತರ ಮನಾಲಿಯಿಂದ ಕಾಜಾಗೆ ಬಂದಿದ್ದಾರೆ. ವಾಯು ಮಾಲಿನ್ಯದ ಹೆಚ್ಚಳದಿಂದಾಗಿ ಇತ್ತೀಚೆಗಿನ ದಿನಗಳಲ್ಲಿ ಹವಾಮಾನವು ಹಠಾತ್ತನೆ ಬದಲಾಗುತ್ತಿದೆ. ವಾಹನಗಳಿಂದ ಅನಿಲ ಹೊರಸೂಸುವಿಕೆ ಕೂಡ ಪರಿಸರ ಮಾಲಿನ್ಯಕ್ಕೆ ಒಂದು ಪ್ರಮುಖ ಕಾರಣವಾಗಿದೆ” ಎಂದು ಮಹೇಂದ್ರ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.

ಇದನ್ನೂ ಓದಿ: ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಕಾರ್ಖಾನೆ ವಿಭಿನ್ನ ಸಾಧನೆ: ಸಂಪೂರ್ಣ ವ್ಯವಸ್ಥೆ ಮಹಿಳಾಮಯ

ಎಲೆಕ್ಟ್ರಿಕ್ ಚಾರ್ಜರ್ ತಯಾರಿಕೆಯಲ್ಲಿ ಬಳಸುವ ಎಲ್ಲಾ ಉಪಕರಣಗಳನ್ನು ಭಾರತದಲ್ಲಿ ತಯಾರಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ದೂರದ ಪ್ರಯಾಣವನ್ನು ಮಾಡಲಾಗುವುದಿಲ್ಲ ಎಂಬ ಅಂತೆಕಂತೆಗಳಿಗೆ ಮನಾಲಿಯಿಂದ ಕಾಜಾಗೆ ಬಂದ ಇಬ್ಬರು ಮಹಿಳೆಯರು ಬ್ರೇಕ್ ಹಾಕಿದ್ದಾರೆ. ಮನಾಲಿಯಿಂದ ಕಾಜಾಗೆ ಆರಾಮದಾಯಕ ಪ್ರಯಾಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

(India is the world’s tallest electric vehicle charging station)

Comments are closed.