Mahindra BIG Offer : ಹಬ್ಬದ ಸಂಭ್ರಮಕ್ಕೆ ಕಾರುಗಳ ಮೇಲೆ ಭರ್ಜರಿ ಆಫರ್‌ ಘೋಷಿಸಿದ ಮಹೇಂದ್ರ ಕಂಪೆನಿ

ಸಾಮಾನ್ಯವಾಗಿ ಜನರು ಹಬ್ಬದ ಸೀಸನ್ ನಲ್ಲಿ ಹೊಸ ವಾಹನಗಳನ್ನು ಖರೀದಿಸುತ್ತಾರೆ. ಆದ್ದರಿಂದಲೇ ಹೊಸ ಗ್ರಾಹಕರನ್ನು ಸೆಳೆಯಲು ವಾಹನ ತಯಾರಕ ಕಂಪನಿಗಳು ವಿವಿಧ ಕೊಡುಗೆ ಹಾಗೂ ರಿಯಾಯಿತಿಗಳನ್ನು ಹಬ್ಬದ ಸಂದರ್ಭದಲ್ಲಿ ನೀಡುತ್ತವೆ. ಭಾರತೀಯ ಮೂಲದ ಎಸ್‌ಯುವಿ ತಯಾರಕ ಕಂಪನಿಯಾದ Mahindra and Mahindra ಸಹ ತನ್ನ ಕಾರುಗಳ ಮೇಲೆ ನಗದು ರಿಯಾಯಿತಿ ಹಾಗೂ ಇತರ ಕೊಡುಗೆಗಳನ್ನು ನೀಡುತ್ತಿದೆ. ಯಾವ Mahindra ಕಾರಿನ ಖರೀದಿಯ ಮೇಲೆ ಎಷ್ಟು ಕೊಡುಗೆಗಳನ್ನು ನೀಡಲಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

Mahindra Bolero
Mahindra Bolero ಕಾರ್ ಅನ್ನು ಭಾರತದಲ್ಲಿ ಎಂಪಿವಿಯಾಗಿ ಬಳಸಲಾಗುತ್ತದೆ. ಕಂಪನಿಯು ಅಕ್ಟೋಬರ್‌ ತಿಂಗಳಿನಲ್ಲಿ ಈ ಕಾರಿನ ಮೇಲೆ ಒಟ್ಟು ರೂ. 30,450 ಗಳವರೆಗೆ ಕೊಡುಗೆಗಳನ್ನು ನೀಡುತ್ತದೆ. ಈ ಕಾರಿಗೆ ರೂ. 19,000 ವರೆಗೆ ನಗದು ರಿಯಾಯಿತಿ ಹಾಗೂ ರೂ. 11,450 ಕಾರ್ಪೊರೇಟ್ ಬೋನಸ್ ನೀಡಲಾಗುತ್ತದೆ. ಈ ಕಾರಿನ ಮೇಲೆ ಯಾವುದೇ ನಗದು ರಿಯಾಯಿತಿ ಲಭ್ಯವಿಲ್ಲ.

ಇದನ್ನೂ ಓದಿ: Mercedes Benz ಇಂದ ʼಮೇಡ್ ಇನ್ ಇಂಡಿಯಾ 2021 S Classʼ ಹೊಸ ಕಾರು ಬಿಡುಗಡೆ

Mahindra ಕಂಪನಿಯು ತನ್ನ ಪೂರ್ಣ ಗಾತ್ರದ ಎಸ್‌ಯುವಿಯಾದ XUV 500 ಮೇಲೆ ರೂ. 2,63,314 ಗಳ ಕೊಡುಗೆಗಳನ್ನು ನೀಡುತ್ತದೆ. ಇದರಲ್ಲಿ ರೂ. 1,79,800 ವರೆಗಿನ ನಗದು ರಿಯಾಯಿತಿ, ರೂ. 50,000 ವರೆಗಿನ ವಿನಿಮಯ ಬೋನಸ್, ರೂ. 13,514 ವರೆಗಿನ ಕಾರ್ಪೊರೇಟ್ ಬೋನಸ್ ಹಾಗೂ ರೂ. 20,000 ಮೌಲ್ಯದ ಇತರ ಕೊಡುಗೆಗಳು ಸೇರಿವೆ.

Mahindra Scorpio
Mahindra Scorpio ಕೂಡ ಕಂಪನಿಯ ಜನಪ್ರಿಯ ಎಸ್‌ಯುವಿಯಾಗಿದ್ದು, ಅದರ ಮೇಲೆ ಕಂಪನಿಯು ರೂ. 57,135 ವರೆಗೆ ಕೊಡುಗೆಗಳನ್ನು ನೀಡುತ್ತದೆ. ಈ ಕಾರಿನ ಮೇಲೆ ರೂ. 20,000 ವರೆಗಿನ ನಗದು ರಿಯಾಯಿತಿ, ರೂ. 5,000 ವಿನಿಮಯ ಬೋನಸ್, ರೂ. 10,135 ಕಾರ್ಪೊರೇಟ್ ಬೋನಸ್ ಹಾಗೂ ರೂ. 22,000 ವರೆಗಿನ ಇತರ ಪ್ರಯೋಜನಗಳನ್ನು ನೀಡಲಾಗುತ್ತದೆ

ಇದನ್ನೂ ಓದಿ: 2021 Maruti Suzuki Celerio : ಶೀಘ್ರದಲ್ಲೇ ಬಿಡುಗಡೆಯಾಗುತ್ತೆ ಮಾರುತಿ ಸೆಲೆರಿಯೋ ಹೊಸ ಕಾರ್‌

Mahindra XUV 300
Mahindra ಕಂಪನಿಯ ಅತ್ಯಂತ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯು‌ವಿಯಾದ Mahindra XUV 300 ಮೇಲೆ ರೂ. 31,628 ರವರೆಗಿನ ಕೊಡುಗೆಗಳನ್ನು ನೀಡಲಾಗುತ್ತದೆ. ಈ ಕಾರಿನ ಮೇಲೆ ರೂ. 20,000 ವರೆಗಿನ ಒಟ್ಟು ವಿನಿಮಯ ಬೋನಸ್ ಅನ್ನು ನೀಡಲಾಗುತ್ತದೆ. ಇದರ ಜೊತೆಗೆ ಈ ಕಾರಿನ ಮೇಲೆ ರೂ. 11,628 ಗಳ ಕಾರ್ಪೊರೇಟ್ ಬೋನಸ್ ಅನ್ನು ನೀಡಲಾಗುತ್ತದೆ. ಈ ಕಾರಿನ ಮೇಲೆ ಯಾವುದೇ ರೀತಿಯ ನಗದು ರಿಯಾಯಿತಿ ಲಭ್ಯವಿಲ್ಲ.

(Mahendra Company announces grand offer on cars to celebrate festival)

Comments are closed.