Ola electric scooter : 2 ದಿನದಲ್ಲಿ 1,100 ಕೋಟಿ ಮೌಲ್ಯದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಮಾರಾಟ

ನವದೆಹಲಿ : ಭಾರತೀಯ ಆಟೋ ಮೊಬೈಲ್‌ ಮಾರುಕಟ್ಟೆಯಲ್ಲಿಯೇ ಓಲಾ ಹೊಸ ದಾಖಲೆಯನ್ನು ಬರೆದಿದೆ. ಕೇವಲ 2 ದಿನದಲ್ಲಿ ಬರೋಬ್ಬರಿ 1,100 ಕೋಟಿ ರೂ. ಮೌಲ್ಯದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಮಾರಾಟ ಮಾಡಿದೆ. ನವೆಂಬರ್‌ 1ರಿಂದ ಮತ್ತೆ ಮಾರಾಟ ಆರಂಭಿಸುವುದಾಗಿ ಘೋಷಣೆಯನ್ನು ಮಾಡಿದೆ.

ಓಲಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಎಸ್ 1 ಮತ್ತು ಎಸ್ 1 ಪ್ರೊ ಶ್ರೇಣಿಯ ಮಾದರಿಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದೆ. ಸಪ್ಟೆಂಬರ್‌ 15ರಂದು ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರಾಟಕ್ಕೆ ಮುಂದಾಗುತಿದ್ದಂತೆಯೇ ಗ್ರಾಹಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಮೊದಲ ದಿನವಾದ ಬುಧವಾರ, ಓಲಾ ಎಲೆಕ್ಟ್ರಿಕ್ 600 ಕೋಟಿ ರೂಪಾಯಿ ಮೌಲ್ಯದ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಅಲ್ಲದೇ ಮರು ದಿನವೂ ಕೂಡ ದಾಖಲೆಯ ಪ್ರಮಾಣದಲ್ಲಿ ಸ್ಕೂಟರ್‌ ಮಾರಾಟವಾಗಿದೆ. ಎರಡು ದಿನಗಳ ಮಾರಾಟದಲ್ಲಿ ಓಲಾ ಎಲೆಕ್ಟ್ರಿಕ್ 1,100 ಕೋಟಿ ರೂ. ಹೆಚ್ಚು ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ ಎಂದು ಓಲಾ ಕ್ಯಾಬ್ಸ್ ಸಹ ಸಂಸ್ಥಾಪಕ ಭಾವೀಶ್ ಅಗರ್‌ವಾಲ್ ತಿಳಿಸಿದ್ದಾರೆ.

ಪ್ರತೀ ಸೆಕೆಂಡ್‌ಗೆ 4 ಸ್ಕೂಟರ್‌ ಮಾರಾಟ !

ನಿಜಕ್ಕೂ ಓಲಾ ಕಂಪೆನಿ ಭಾರತೀಯ ಆಟೋ ಮೊಬೈಲ್‌ ಮಾರುಕಟ್ಟೆಯಲ್ಲಿ ಜಾದೂವನ್ನೇ ಮಾಡಿದೆ. ಇಲೆಕ್ಟ್ರಿಕ್‌ ಸ್ಕೂಟರ್‌ ಮಾರಾಟದಲ್ಲಿ ಎರಡೇ ದಿನದಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸಿರುವ ಓಲಾ ಸ್ಕೂಟರ್‌ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿ ಮಾಡಿದ್ದಾರೆ. ಮೊದಲ 24 ಗಂಟೆಗಳ ಅವಧಿಯಲ್ಲಿ ಪ್ರತಿ ಸೆಕೆಂಡಿಗೆ ನಾಲ್ಕು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಭಾರತೀಯ ಇ-ಕಾಮರ್ಸ್‌ ಇತಿಹಾಸದಲ್ಲಿಯೇ ಅತ್ಯಧಿಕ ಮಾರಾಟವಾದ ಸ್ಕೂಟರ್‌ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ನವೆಂಬರ್ 1 ರಿಂದ ಎರಡನೇ ಖರೀದಿ ಆರಂಭ

ಓಲಾ ಕಂಪೆನಿಯ ಸ್ಕೂಟರ್‌ ಖರೀದಿ ಮಾಡಲು ಸಾಧ್ಯವಾಗದ ಗ್ರಾಹಕರಿಗೆ ಕಂಪೆನಿ ಇದೀಗ ಎರಡನೇ ಅವಕಾಶವನ್ನು ನೀಡಲು ಮುಂದಾಗಿದೆ. ಓಲಾ ಕಂಪನಿಯು ದೀಪಾವಳಿ ಹಬ್ಬಕ್ಕೆ ಅನುಗುಣವಾಗಿ ನವೆಂಬರ್ 1 ರಿಂದ ಎರಡನೇ ಮಾರಾಟವನ್ನು ಆರಂಭಿಸುತ್ತಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಇದೀಗ ಸಾಂಪ್ರದಾಯಿಕ ಪೆಟ್ರೋಲ್ ಸ್ಕೂಟರ್ ತಯಾರಕರನ್ನು ತಯಾರಕರಿಗೆ ಬಿಗ್‌ ಶಾಕ್‌ ಕೊಟ್ಟಿದೆ.

1 ಲಕ್ಷ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಬುಕ್ಕಿಂಗ್‌ !

ಭಾರತೀಯ ಆಟೋ ಮೊಬೈಲ್‌ ಮಾರುಕಟ್ಟೆಯಲ್ಲಿ ವರ್ಷಕ್ಕೆ ಸರಿ ಸುಮಾರು 5-6 ಮಿಲಿಯನ್ ಸ್ಕೂಟರ್‌ ಮಾರಾಟವಾಗುತ್ತಿದೆ. ಅಂದ್ರೆ ತಿಂಗಳಿಗೆ ಸರಿ ಸುಮಾರು 500,000 ದ್ವಿಚಕ್ರ ವಾಹನಗಳ ಖರೀದಿ ಕಾರ್ಯ ನಡೆಯುತ್ತಿದ್ದು, ಈ ಪೈಕಿ ಓಲಾ ಕಂಪೆನಿಯೇ ಬರೋಬ್ಬರಿ 100,000 ಬೈಕ್‌ ಆರ್ಡರ್‌ ಪಡೆದುಕೊಂಡಿದೆ ಎನ್ನಲಾಗುತ್ತಿದೆ.

ತಾಂತ್ರಿಕ ದೋಷದ ನಡುವಲ್ಲೂ ಸ್ಕೂಟರ್‌ ಖರೀದಿ

ಓಲಾ ಕಂಪೆನಿಯ ವೆಬ್‌ಸೈಟ್ ಸೆಪ್ಟೆಂಬರ್ 9 ರಂದು ತಾಂತ್ರಿಕ ಸಮಸ್ಯೆಗೆ ಒಳಗಾಗಿತ್ತು. ಹೀಗಾಗಿ ಮಾರಾಟ ಪ್ರಕ್ರಿಯೆಯನ್ನು ಸೆಪ್ಟೆಂಬರ್ 15 ರವರೆಗೆ ಮುಂದೂಡಿಕೆ ಮಾಡಲಾಗಿತ್ತು. S1 ಮತ್ತು S1 ಮಾದರಿಯ ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಕರು ಮುಗಿಬಿದ್ದು ಖರೀದಿ ಮಾಡಿದ್ದಾರೆ.

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಬೆಲೆ ಎಷ್ಟು ಗೊತ್ತಾ ?

ಕೇಂದ್ರ ಸರಕಾರದ ಹೊಸ ಮಾರ್ಗಸೂಚಿಯಂತೆ ಹೊಸ ತಂತ್ರಜ್ಞಾನದ ಜೊತೆಗೆ ಎಲೆಕ್ಟ್ರಿಕ್‌ ಬ್ಯಾಟರಿ ಮೂಲಕ ಚಲಾಯಿಸುವ ಓಲಾ ಸ್ಕೂಟರ್‌ ಎಸ್ 1 ಮಾದರಿ 99,999 ರೂ. ಹಾಗೂ ಎಸ್ 1 ಪ್ರೊ ಮಾದರಿಯ 1.3 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿ ಮಾಡುವವರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಬ್ಸಿಡಿಯನ್ನೂ ನೀಡಲಿದ್ದು, ಮಾರುಕಟ್ಟೆಯ ಬೆಲೆಯಲ್ಲಿ ವಿನಾಯಿತಿಯೂ ಲಭ್ಯವಾಗಲಿದೆ.

1,000 ನಗರಗಳಲ್ಲಿ ಮಾರಾಟಕ್ಕೆ ಸಿದ್ದತೆ

ಓಲಾ ಕಂಪೆನಿ ಈಗಾಗಲೇ ಸ್ಕೂಟರ್‌ ಮಾರಾಟದಲ್ಲಿ ದಾಖಲೆಯನ್ನು ಬರೆದಿದ್ದು, ಸದ್ಯದಲ್ಲಿಯೇ ದೇಶದ ಸುಮಾರು 1,000 ನಗರ ಹಾಗೂ ಪಟ್ಟಣಗಳಲ್ಲಿ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗಿದೆ. ಸ್ಕೂಟರ್‌ ಕೇಂದ್ರಗಳು ಆರಂಭವಾದ ನಂತರದಲ್ಲಿ ಗ್ರಾಹಕರು ಆನ್‌ಲೈನ್‌ ಹಾಗೂ ಆಫ್‌ಲೈನ್‌ ಮೂಲಕ ತಮ್ಮಿಷ್ಟದ ಸ್ಕೂಟರ್‌ ಖರೀದಿ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಇದನ್ನೂ ಓದಿ : ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಕಾರ್ಖಾನೆ ವಿಭಿನ್ನ ಸಾಧನೆ: ಸಂಪೂರ್ಣ ವ್ಯವಸ್ಥೆ ಮಹಿಳಾಮಯ

ಇದನ್ನೂ ಓದಿ : ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ : ಹೊಸ ಕಾರಿನ ಬೆಲೆ, ಫೀಚರ್ಸ್‌ ನೀವು ತಿಳಿದುಕೊಳ್ಳಲೇ ಬೇಕು

( Ola Electric Scooters Worth Rs.1,100 crore Sold in 2 Days, booking reopen in November 1st)

Comments are closed.