Darshan: ಡಿಬಾಸ್ ಫಾರಂ ಹೌಸ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ನ್ಯಾಯಾಂಗ ಬಂಧನಕ್ಕೆ

ಒಂದಾದ ಮೇಲೊಂದು ಸಂಕಷ್ಟಕ್ಕೆ ತುತ್ತಾಗುತ್ತಿರುವ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್  ಫಾರಂಹೌಸ್ ನಲ್ಲಿ ಹೇಯಕೃತ್ಯವೊಂದು ನಡೆದಿರೋದು ಬೆಳಕಿಗೆ ಬಂದಿದೆ. ವಿನೀಶ್ ಫಾರಂಹೌಸ್ ನಲ್ಲಿ ಕಾರ್ಮಿಕರಾಗಿದ್ದ ದಂಪತಿಗಳ 10 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಅದೇ ಫಾರಂಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಮೈಸೂರಿನ ಟಿ.ನರಸಿಪುರ ರಸ್ತೆಯಲ್ಲಿರುವ ದರ್ಶನ್ ಗೆ ಸೇರಿದ ಫಾರಂ ಹೌಸ್ ನಲ್ಲಿ ಶಿವಮೊಗ್ಗದ ಮೂಲದ ದಂಪತಿಗಳು ಕೆಲಸ ಮಾಡಿಕೊಂಡಿದ್ದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗಳಿಗೆ 10 ವರ್ಷ. ಟಿಸಿ ಸಮಸ್ಯೆಯಿಂದಾಗಿ ಬಾಲಕಿ ಶಾಲೆಗೆ ಹೋಗದೇ ಮನೆಯಲ್ಲೇ ಇದ್ದಳು ಎನ್ನಲಾಗಿದೆ.

ಈ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ದರ್ಶನ್ ಫಾರಂ ಹೌಸ್ ನಲ್ಲಿ ಕುದುರೆ ಲಾಯದ ಕೆಲಸ ಮಾಡುವ ಆರೋಪಿ ನದೀಮ್ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಸೆ.13 ರಂದು ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಸೆ.15 ರಂದು ಈ ಘಟನೆ ಬೆಳಕಿಗೆ ಬಂದಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಾಲಕಿ ತಾಯಿ ಫಾರಂ ಹೌಸ್ ಮ್ಯಾನೇಜರ್ ಗೆ ಮಾಹಿತಿ ನೀಡಿದ್ದು,ಅವರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ :‌ ದರ್ಶನ್ ಕರೆಗೆ ಓಗೊಟ್ಟ ಅಭಿಮಾನಿಗಳಿಗೆ ಸಿಕ್ತು ದಚ್ಚು ಭೇಟಿ ಅವಕಾಶ.

ಇದನ್ನು ಓದಿ : D BOSS ಅಭಿಮಾನಿಗಳಿಗೆ ಗುಡ್‌ನ್ಯೂಸ್‌ : “ಕ್ರಾಂತಿ” ಮೊಳಗಿಸೋಕೆ ರೆಡಿಯಾದ್ರು ನಟ ದರ್ಶನ್‌

( Minor girl raped in Actor darshan farmhouse)

Comments are closed.