Ravi Shastri : ಕ್ರಿಕೆಟ್ ಪ್ರಿಯರಿಗೆ ಶಾಕ್: ಟಿ20 ವಿಶ್ವಕಪ್ ಬಳಿಕ ಕೋಚ್ ಸ್ಥಾನ ತೊರೆಯಲಿದ್ದಾರೆ ರವಿಶಾಸ್ತ್ರಿ

ಲಂಡನ್: ಕ್ರಿಕೆಟ್ ನಲ್ಲಿ ನಾನು ಅಂದುಕೊಂಡಿದ್ದನ್ನೆಲ್ಲ ಸಾಧಿಸಿರುವ ಸಮಾಧಾನದೊಂದಿಗೆ ಟಿ20 ವಿಶ್ವಕಪ್ ಪಂದ್ಯಾವಳಿ ಬಳಿಕ ಕೋಚ್ ಹುದ್ದೆ ತೊರೆಯುವ ಮುನ್ಸೂಚನೆ ನೀಡಿದ್ದಾರೆ ತರಬೇತುದಾರ ರವಿಶಾಸ್ತ್ರಿ.

ಐಸಿಸಿ ಟೆಂಟ್ವಿ-20 ವಿಶ್ವ ಕಪ್ ಬಳಿಕ ಟೀಂ ಇಂಡಿಯಾ ಮುಖ್ಯಕೋಚ್ ಹುದ್ದೆ ತೊರೆಯುವ ಮುನ್ಸೂಚನೆ ನೀಡಿರುವ ರವಿ ಶಾಸ್ತ್ರಿ. ಲಭಿಸಿರುವ ಸ್ವಾಗತವನ್ನು ಮೀರಿ ತಂಗಬಾರದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ತಮ್ಮ ನಿವೃತ್ತಿ ಬಗ್ಗೆ  ಪರೋಕ್ಷವಾಗಿ ಮಾತನಾಡಿರುವ ರವಿ ಶಾಸ್ತ್ರಿ, ನಾನು ಬಯಸಿದ್ದನ್ನೇಲ್ಲ ಸಾಧಿಸಿದ್ದೇನೆ. ಐದು ವರ್ಷ ಟೆಸ್ಟ್ ಕ್ರಿಕೆಟ್ ನಲ್ಲಿ ನಂ1 ಸ್ಥಾನ. ಆಸ್ಟ್ರೇಲಿಯಾ ಸರಣಿ ಗೆಲುವು. ಇಂಗ್ಲೆಂಡ್ ಸರಣಿ ಗೆಲುವು. ಇದೆಲ್ಲವೂ ನನ್ನ ಕಟ್ಟಕಡೆಯ ಗುರಿಯಾಗಿತ್ತು ಎಂದಿದ್ದಾರೆ ರವಿ ಶಾಸ್ತ್ರಿ.

ನಾವು ವೈಟ್ ಬಾಲ್ ಕ್ರಿಕೆಟ್ ನಲ್ಲಿ ಜಗತ್ತಿನ ಎಲ್ಲ ತಂಡಗಳನ್ನು ಅವರದ್ದೇ ನೆಲದಲ್ಲಿ ಮಣಿಸಿದ್ದೇವೆ. ಟಿ20 ವಿಶ್ವಕಪ್ ಗೆದ್ದರೇ, ಅನುಭವ ಮತ್ತಷ್ಟು ಮಧುರವಾಗಲಿದೆ. ಇದಕ್ಕಿಂತ ಮಿಗಿಲಾಗಿದ್ದು ಯಾವುದು ಇಲ್ಲ. ನಾನು ಒಂದು ವಿಷಯದಲ್ಲಿ ನಂಬಿಕೆ ಇಟ್ಟಿದ್ದೇನೆ. ನಮಗೆ ದೊರೆತ ಸ್ವಾಗತವನ್ನು ಮೀರಬಾರದು. ನಾನು ಅದನ್ನು ಒಪ್ಪುತ್ತೇನೆ. ಈ ತಂಡದೊಂದಿಗೆ ನಾನು ಅಂದುಕೊಂಡಿದ್ದನ್ನೆಲ್ಲ ಸಾಧಿಸಿದ್ದೇನೆ. ನೀರಿಕ್ಷೆಗಿಂತಲೂ ಹೆಚ್ಚು ಸಾಧನೆ ಮಾಡಿದ್ದೇನೆ ಎಂದಿರುವ ರವಿಶಾಸ್ತ್ರಿ ಕೋಚ್ ಸ್ಥಾನದಿಂದ ದೂರ ನಡೆಯುವ ಮುನ್ಸೂಚನೆ ನೀಡಿದ್ದಾರೆ.

ಅಲ್ಲದೇ ಇಂಗ್ಲೆಂಡ್ ಸರಣಿ ವೇಳೆ ತಾವು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾಜರಾಗಿದ್ದರಿಂದ ಕೋವಿಡ್ ತಗುಲಿತು ಎಂಬ ಹೇಳಿಕೆಯನ್ನು ತಳ್ಳಿಹಾಕಿದ್ದು, ಅಗಸ್ಟ್ 31 ರಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಸೆ.3 ರಂದು ನನಗೆ ಸೋಂಕು ತಗುಲಿದೆ ಎಂದಿದ್ದಾರೆ.

ಇದನ್ನೂ ಓದಿ : IPL 2021 : ಅರಬ್‌ನಾಡಲ್ಲಿ ನಾಳೆಯಿಂದ ಐಪಿಎಲ್‌ ಹಬ್ಬ

ಇದನ್ನೂ ಓದಿ : ರೋಹಿತ್‌ ಬದಲು ರಾಹುಲ್‌ಗೆ ಜವಾಬ್ದಾರಿ ಕೊಡಿ ಅಂದಿದ್ರಂತೆ ವಿರಾಟ್‌ ಕೊಯ್ಲಿ

ಇದನ್ನೂ ಓದಿ : Neeraj Chopra : ಸಾವಿನ ಕದ ತಟ್ಟಿದ್ದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ

( Never overstay your welcome- Ravi Shashtri )

Comments are closed.