Bike Under 1Lakh : ಒಂದು ಲಕ್ಷದೊಳಗೆ ಖರೀದಿಸಬಹುದಾದ ಆಕರ್ಷಕ ಬೈಕ್‌ಗಳು

ದಿನನಿತ್ಯದ ಓಡಾಟಕ್ಕೆ ಬೈಕ್‌ (Bike) ಗಳೇ ಬೆಸ್ಟ್‌. ಆಫೀಸ್‌ ಕೆಲಸಗಳಿಗೆ, ಚಿಕ್ಕ ಪ್ರಯಾಣಕ್ಕೆ, ಮನೆಯ ಕೆಲಸಗಳಿಗೆ, ಮುಂತಾದವುಗಳಿಗೆ ಬೈಕ್‌ ಅನ್ನೇ ಅವಲಂಬಿಸುರುವವರು ಬಹಳಷ್ಟು ಜನರಿದ್ದಾರೆ. ಅದಕ್ಕೆ ದೊಡ್ಡ ಪಾರ್ಕಿಂಗ್‌ನ ಅವಶ್ಯಕತೆಯೂ ಇಲ್ಲ. ಹಾಗಾಗಿ ಬೈಕ್‌ ಕೊಳ್ಳುವವರ ಸಂಖ್ಯೆ ಹೆಚ್ಚು. ಅದರಲ್ಲೂ ದೇಶೀಯ ಮಾರುಕಟ್ಟೆಯಲ್ಲಿ ಬಜೆಟ್‌ ಬೈಕ್‌ಗಳೇ ಹೆಚ್ಚು ಮಾರಾಟವಾಗುತ್ತದೆ. ಅದಕ್ಕಾಗಿಯೇ ನಾವು ಇಲ್ಲಿ ಅಂತಹ ಬಜೆಟ್‌ ಬೈಕ್‌ಗಳ (Bike Under 1Lakh) ಬಗ್ಗೆ ಹೇಳಿದ್ದೇವೆ. ಅವು ನೋಡಲು ಆಕರ್ಷಕವಾಗಿದ್ದು, ಬಾಳಿಕೆಯೂ ಬರುವಂತಹದ್ದಾಗಿದೆ.

ಬಜೆಟ್‌ ಬೈಕ್‌ಗಳ ಲಿಸ್ಟ್‌ನಲ್ಲಿ ಮೊದಲಿಗೆ ಬರುವ ಬೈಕ್‌ ಎಂದರೆ ಹೀರೋ ಬೈಕ್‌ಗಳು. ಇವು ಬಾಳಿಕೆಯ ಜೊತೆಗೆ ಉತ್ತಮ ಮೈಲೇಜ್‌ ಅನ್ನು ನೀಡುತ್ತದೆ. ಹೀರೋ ಕಂಪನಿಯ HF ಡೀಲಕ್ಸ್‌ ಬೈಕ್‌ ಬಜೆಟ್‌ ಬೈಕ್‌ ಆಗಿದೆ. ಇದನ್ನು 68,000 ರೂ.ಗಳಿಗೆ (ಎಕ್ಸ್‌ ಶೋ ರೂಂ) ಖರೀದಿಸಬಹುದಾಗಿದೆ. ಇದು 97.2cc ಯ ಏರ್‌ ಕೂಲ್ಡ್‌ 4 ಸ್ಟ್ರಾಕ್‌ ಸಿಂಗಲ್‌ ಸಿಲಿಂಡರ್‌ OHC ಇಂಜಿನ್‌ ಹೊಂದಿದೆ. 8,000rpm ನಲ್ಲಿ 5.9kw ಶಕ್ತಿ ನೀಡುತ್ತದೆ. ಮತ್ತು 6,000 rpm ನಲ್ಲಿ 8.05 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಡ್ವಾನ್ಸ್ಡ್ ಪ್ರೋಗ್ರಾಮ್ಡ್ ಫ್ಯೂಯಲ್ ಇಂಜೆಕ್ಷನ್ (APFE) ಹೊಂದಿರುವ ಈ ಬೈಕ್ ಕಿಕ್ ಮತ್ತು ಸೆಲ್ಫ್ ಸ್ಟಾರ್ಟ್ ವೈಶಿಷ್ಟ್ಯದೊಂದಿಗೆ ಬರುತ್ತದೆ.

ಹೊಂಡಾದ CD 110 ಬೈಕ್‌ ಬಜೆಟ್‌ ಬೈಕ್‌ಗಳ ಸಾಲಿಗೆ ಸೇರುತ್ತದೆ. ಇದು 109.51cc BS 6 ಎಂಜಿನ್‌ನೊಂದಿಗೆ ಲಭ್ಯವಿರುತ್ತದೆ. ಈ ಬೈಕ್ 8.67 bhp ಪವರ್ ಮತ್ತು 9.30 Nm ಟಾರ್ಕ್ ಉತ್ಪಾದಿಸುತ್ತದೆ. ಇದನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಬೈಕ್‌ನ ಎಕ್ಸ್‌ ಶೋ ರೂಂ ಬೆಲೆ 71,133 ರೂ. ಆಗಿದೆ.

ಟಿವಿಎಸ್‌ನ ರೇಡಿಯನ್‌ ಬೈಕ್‌ ಕೈಗೆಟಕುವ ದರ ಹೊಂದಿರುವ ಬೈಕ್‌ಗಳಲ್ಲಿ ಒಂದಾಗಿದೆ. ನೋಡಲು ಸಿಂಪಲ್‌ ಎನಿಸಿದರೂ ಒಳ್ಳೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಇದು BS6 ಇಂಜಿನ್‌ ಅನ್ನು ಹೊಂದಿದೆ. . ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು BS4 ನಲ್ಲಿರುವಂತೆಯೇ ಇರಿಸಲಾಗಿದೆ. ಮಾಲ್‌ಫಂಕ್ಷನ್‌ ಇಂಡಿಕೇಟರ್‌, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಯುಎಸ್‌ಬಿ ಚಾರ್ಜರ್, ಪಿಲಿಯನ್ ಗ್ರಾಬ್ರೇಲ್ ಜೊತೆಗೆ ಕ್ಯಾರಿಯರ್ ಮತ್ತು ಲಗೇಜ್ ಹುಕ್ ಇದರಲ್ಲಿ ಜೋಡಿಸಲಾಗಿದೆ. ಈ ಬೈಕ್‌ ಅನ್ನು 71,675 ರೂ. ಗಳಿಗೆ (ಎಕ್ಸ್‌ ಶೋ ರೂಂ) ಖರೀದಿಸಬಹುದಾಗಿದೆ.

ಹೀರೋನ ಹೀರೋ ಸ್ಪ್ಲೆಂಡರ್ ಪ್ಲಸ್ XTEC ಕೈಗೆಟುಕುವ ದರದ ಜೊತೆಗೆ ಬಾಳಿಕೆ ನೀಡುವ ಬೈಕ್ ಆಗಿದೆ. ಹೀರೋ ಈ ಬೈಕ್ ಅನ್ನು 74,999 ರೂ. (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಬೈಕ್‌ನಲ್ಲಿ LED HIPL (ಹೈ ಇಂಟೆನ್ಸಿಟಿ ಪೊಸಿಷನ್ ಲ್ಯಾಂಪ್) ಕಾಣಬಹುದಾಗಿದೆ. ಜೊತೆಗೆ ಸ್ಪಾರ್ಕ್ಲಿಂಗ್ ಬೀಟಾ ಬ್ಲೂ, ಕ್ಯಾನ್ವಾಸ್ ಬ್ಲ್ಯಾಕ್, ಟೊರ್ನಾಡೋ ಗ್ರೇ ಮತ್ತು ಪರ್ಲ್ ವೈಟ್‌ನಂತಹ ನಾಲ್ಕು ಹೊಸ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು ಎಕಾನಾಮಿ ಬೈಕ್‌ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Hero Maestro XOOM : 68,599 ರೂ. ಗಳಿಗೆ ಮೆಸ್ಟ್ರೋ XOOM ಲಾಂಚ್‌ ಮಾಡಿದ ಹೀರೋ

ಇದನ್ನೂ ಓದಿ : Hyundai Grand i10 Nios Facelift : ಹೊಸ ಲುಕ್‌ನಲ್ಲಿ ಬಿಡುಗಡೆಯಾದ ಹುಂಡೈ ಗ್ರಾಂಡ್‌ i10 ನಿಯಾಸ್‌ ಫೇಸ್‌ಲಿಫ್ಟ್‌

(Bike Under 1Lakh. You can buy these bikes for under one lakh budget. Check the list)

Comments are closed.