BMW ಮೊಟಾರ್ಡ್ (BMW Motorrad) ಇಂಡಿಯಾ ತನ್ನ ಹೊಸ R 18 ಟ್ರಾನ್ಸ್‌ಕಾಂಟಿನೆಂಟಲ್ ಕ್ರೂಸರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆಯು 31.5 ಲಕ್ಷ ರೂ. ಆಗಿದೆ. ಈ R 18 ಟ್ರಾನ್ಸ್‌ಕಾಂಟಿನೆಂಟಲ್ ಬೈಕ್ ಅನ್ನು ಸಂಪೂರ್ಣವಾಗಿ CBU ರೂಟ್‌ನ ಮೂಲಕ ಭಾರತಕ್ಕೆ ತರಲಾಗುವುದು. ಬೈಕ್‌ನ ಪ್ರಮುಖ ಅಂಶವೆಂದರೆ ಅದರ ಟ್ವಿನ್-ಸಿಲಿಂಡರ್ ಬಾಕ್ಸರ್ ಎಂಜಿನ್. ಇದು ಕಂಪನಿಯ ಶ್ರೇಣಿಯಲ್ಲಿನ ಅತ್ಯಂತ ಶಕ್ತಿಶಾಲಿ ಬಾಕ್ಸರ್ ಎಂಜಿನ್ ಆಗಿದೆ. ಆಕ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಡೈನಾಮಿಕ್ ಇಂಜಿನ್ ಬ್ರೇಕ್ ಕಂಟ್ರೋಲ್ ನಂತಹ ವೈಶಿಷ್ಟ್ಯಗಳನ್ನು ಈ ಬೈಕ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಎಂಜಿನ್ ಹೇಗಿದೆ?
ಶಕ್ತಿಶಾಲಿ ಬೈಕ್ 1,802cc ಲಿಕ್ವಿಡ್ ಮತ್ತು ಆಯಿಲ್ ಕೂಲ್ಡ್, ಫ್ಲಾಟ್-ಟ್ವಿನ್ ಸಿಲಿಂಡರ್ ಬಾಕ್ಸರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 4,750 rpm ನಲ್ಲಿ 91 hp ಪವರ್ ಮತ್ತು 3,000 rpm ನಲ್ಲಿ 158 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಸ್ಥಿರ-ಮೆಶ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರಲ್ಲಿ ರಿವರ್ಸ್ ಗೇರ್ ಆಯ್ಕೆಯೂ ಲಭ್ಯವಿದೆ. ಇದರೊಂದಿಗೆ ರೈನ್, ರೋಲ್ ಮತ್ತು ರಾಕ್‌ನಂತಹ ಮೂರು ರೈಡಿಂಗ್ ಮೋಡ್‌ಗಳು ಸಹ ಬೈಕ್‌ನಲ್ಲಿದೆ.
ವೈಶಿಷ್ಟ್ಯ :
R 18 ಟ್ರಾನ್ಸ್‌ಕಾಂಟಿನೆಂಟಲ್ ಬೈಕ್ ಹೀಟೆಡ್ ಗ್ರಿಪ್ಸ್, ಹೀಟೆಡ್ ಸೀಟ್ಸ್, ಅಡ್ಜೆಸ್ಟೇಬಲ್ ಬ್ರೇಕ್ ಮತ್ತು ಕ್ಲಚ್ ಲಿವರ್‌ಗಳು, ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇಂಜಿನ್ ಪ್ರೊಟೆಕ್ಷನ್ ಬಾರ್, ಅಡಾಪ್ಟಿವ್ ಹೆಡ್‌ಲೈಟ್‌ಗಳು ಮತ್ತು ಆಂಟಿಥೆಫ್ಟ್ ಅಲಾರ್ಮ್ ಸಿಸ್ಟಮ್ ಅನ್ನು ಒಳಗೊಂಡಿದೆ. ಬೈಕ್ 427 ಕೆಜಿ ತೂಕ ಮತ್ತು 24 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. 4 ಲೀಟರ್ ಮೀಸಲು ಇಂಧನವನ್ನು ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 180 ಕಿ.ಮೀ. ಈ ಬೈಕ್ 5 ಬಣ್ಣದ ಥೀಮ್‌ಗಳಲ್ಲಿ ಲಭ್ಯವಿದೆ.
ವಿನ್ಯಾಸ :
R 18 ಟ್ರಾನ್ಸ್‌ಕಾಂಟಿನೆಂಟಲ್ ದೊಡ್ಡದಾದ ಹ್ಯಾಂಡಲ್‌ಬಾರ್ ಮೌಂಟೆಡ್ ಫೇರಿಂಗ್ ಅನ್ನು ಪಿಲಿಯನ್ ಸೀಟ್, ಬಾಡಿ-ಕಲರ್ ಸ್ಟೋರೇಜ್ ಕೇಸ್, ವಿಂಡ್‌ಶೀಲ್ಡ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸೀಕಲ್-ಆಕಾರದ ಗ್ರಾಫಿಕಲ್ ಎಲ್ಇಡಿ ಡಿಆರ್‌ಎಲ್‌ಗಳು, ವಿಂಡ್ ಡಿಫ್ಲೆಕ್ಟರ್‌ಗಳು ಮತ್ತು ಲೈಟ್ ಅಲಾಯ್ ಕಾಸ್ಟ್ ವ್ಹೀಲ್ ಹೊಂದಿದೆ. ಆರಾಮದಾಯಕ ಪ್ರಯಾಣ ಮತ್ತು ಪ್ರವಾಸಕ್ಕಾಗಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ, ನಾಲ್ಕು ಅನಲಾಗ್ ಸರ್ಕ್ಯುಲರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಳು ಮತ್ತು 10.25-ಇಂಚಿನ TFT ಕಲರ್ ಡಿಸ್ಪ್ಲೇಯನ್ನು ಸಹ ಇದರಲ್ಲಿ ನೀಡಲಾಗಿದೆ. ಮುಂಭಾಗದಲ್ಲಿ ‘ಬರ್ಲಿನ್ ಬಿಲ್ಟ್’ ಬ್ಯಾಡ್ಜಿಂಗ್ ಅನ್ನು ಸಹ ನೀಡಲಾಗಿದೆ.
ಇದನ್ನೂ ಓದಿ: Nothing Ear (2): ವಿಶಿಷ್ಟ ವಿನ್ಯಾಸ ಮತ್ತು ಸ್ಮಾರ್ಟ್ ಕೇಸ್‌ನೊಂದಿಗೆ ನಥಿಂಗ್ ಇಯರ್ (2) ವೈರ್‌ಲೆಸ್ ಬಡ್ ಬಿಡುಗಡೆ
ಬೆಲೆ:
BMW ಬಿಡುಗಡೆ ಮಾಡಿರುವ ಬೈಕ್‌ನ ಎಕ್ಸ್ ಶೋ ರೂಂ ಬೆಲೆ 31.5 ಲಕ್ಷ ರೂ. ಆಗಿದೆ. BMW ಆರ್18 ಟ್ರಾನ್ಸ್‌ಕಾಂಟಿನೆಂಟಲ್ ಬೈಕ್ ಹಾರ್ಲೆ ಡೆವಿಡ್‌ಸನ್ ನ ಸ್ಟ್ರೀಟ್ ಗ್ಲೈಡ್ ಗೆ ಸ್ಪರ್ಧೆ ನೀಡಲಿದೆ.
BMW Motorrad India launched its R18 transcontinental bike in India. Know the specs