Women’s Premier League 2023: ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್; ಮುಂಬೈ ಇಂಡಿಯನ್ಸ್ Vs ಯು.ಪಿ ವಾರಿಯರ್ಸ್, ಯಾರಿಗೆ ಫೈನಲ್ ಟಿಕೆಟ್?

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (Women’s Premier League 2023) ಟೂರ್ನಿಯ ಎಲಿನಿಮೇಟರ್ ಪಂದ್ಯ ಇಂದು ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಮತ್ತು ಯು.ಪಿ ವಾರಿಯರ್ಸ್ ತಂಡಗಳು ಮುಂಬೈನ ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ಭಾನುವಾರ ಬ್ರೆಬೋರ್ನ್ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯ(Women’s Premier League 2023) ದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಿಂದ 6 ಗೆಲುವು ಹಾಗೂ 2 ಸೋಲುಗಳೊಂದಿಗೆ ಒಟ್ಟು 12 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಂ.1 ತಂಡವಾಗಿ ಫೈನಲ್’ಗೆ ಲಗ್ಗೆ ಇಟ್ಟಿತ್ತು.

ಎರಡು ಹಾಗೂ 3ನೇ ಸ್ಥಾನ ಪಡೆದಿರುವ ಮುಂಬೈ ಇಂಡಿಯನ್ಸ್ ಮತ್ತು ಯು.ಪಿ ವಾರಿಯರ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡುತ್ತಿವೆ. ಮುಂಬೈ ಇಂಡಿಯನ್ಸ್ ಕೂಡ 8 ಪಂದ್ಯಗಳಿಂದ 6 ಗೆಲುವು ಹಾಗೂ 2 ಸೋಲುಗಳೊಂದಿಗೆ 12 ಅಂಕ ಗಳಿಸಿದ್ರೂ ರನ್ ರೇಟ್’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್’ಗಿಂತ ಹಿಂದಿರುವ ಕಾರಣ ನೇರವಾಗಿ ಫೈನಲ್ ತಲುಪುವ ಅವಕಾಶದಿಂದ ವಂಚಿತವಾಗಿತ್ತು. ಯು.ಪಿ ವಾರಿಯರ್ಸ್ ತಂಡ 8 ಪಂದ್ಯ(Women’s Premier League 2023)ಗಳಲ್ಲಿ ತಲಾ 4 ಗೆಲುವು, 4 ಸೋಲಿನೊಂದಿಗೆ 8 ಅಂಕ ಗಳಿಸಿ 3ನೇ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸಿತ್ತು.

ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್, ಇಂಗ್ಲೆಂಡ್ ಆಟಗಾರ್ತಿ ನೆಥಾಲಿ ಸಿವರ್ ಬ್ರಂಟ್, ವೆಸ್ಟ್ ಇಂಡೀಸ್’ನ ಹೀಲಿ ಮ್ಯಾಥ್ಯೂಸ್, ಕಿವೀಸ್ ಆಟಗಾರ್ತಿ ಅಮೆಲಿಯಾ ಕರ್ ಸ್ಟಾರ್ ಆಟಗಾರ್ತಿಯರಾಗಿದ್ದಾರೆ. ಯು.ಪಿ ವಾರಿಯರ್ಸ್ ತಂಡದಲ್ಲಿ ಆಸ್ಟ್ರೇಲಿಯಾದ ಮ್ಯಾಚ್ ವಿನ್ನರ್’ಗಳಾದ ಅಲೀಸಾ ಹೀಲಿ, ತಾಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್, ಇಂಗ್ಲೆಂಡ್’ನ ಸೋಫೀ ಎಕ್ಲಿಸ್ಟೋನ್, ಭಾರತದ ಸ್ಟಾರ್ ದೀಪ್ತಿ ಶರ್ಮಾರಂತಹ ಸ್ಟಾರ್ ಆಟಗಾರ್ತಿಯರಿದ್ದಾರೆ.

WPL ಎಲಿಮಿನೇಟರ್
ಮುಂಬೈ ಇಂಡಿಯನ್ಸ್ Vs ಯು.ಪಿ ವಾರಿಯಾರ್ಸ್
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ಸ್ಥಳ: ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ, ಮುಂಬೈ
ನೇರ ಪ್ರಸಾರ: ಸ್ಪೋರ್ಟ್ಸ್ 18
ಲೈವ್ ಸ್ಟ್ರೀಮಿಂಗ್: ಜಿಯೊ ಸಿನಿಮಾ

ಇದನ್ನೂ ಓದಿ : Shreyas Iyer IPL : ಬಿಸಿಸಿಐ ಸೂಚನೆಗೆ ಕ್ಯಾರೇ ಅನ್ನದ ಶ್ರೇಯಸ್ ಅಯ್ಯರ್, ಐಪಿಎಲ್‌ಗಾಗಿ ಬಿಗ್ ರಿಸ್ಕ್ ತೆಗೆದುಕೊಳ್ಳಲು ಮುಂಬೈಕರ್ ರೆಡಿ

ಇದನ್ನೂ ಓದಿ : Indian Cricket Team : ಟೀಮ್ ಇಂಡಿಯಾ ಒಗ್ಗಟ್ಟು ಛಿದ್ರ ಛಿದ್ರ, ಸ್ನೇಹಿತರೆಲ್ಲಾ ಇನ್ನು ಮುಂದೆ ದುಷ್ಮನ್‌ಗಳು

Women’s Premier League 2023: Women’s Premier League Eliminator; Mumbai Indians Vs UP Warriors, who has the final ticket?

Comments are closed.