Car maintain Tips : ನಿಮ್ಮ ಕಾರನ್ನು ಬಿಸಿಲಿನ ತಾಪಮಾನದಿಂದ ರಕ್ಷಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಚಿಂತಿಸಬೇಡಿ ಇಲ್ಲಿದೆ ಅದಕ್ಕೆ ಪರಿಹಾರ!

ತಾಪಮಾನದ ಏರಿಕೆಯು ದಿನಪೂರ್ತಿ ಸುಡುವ ಬಿಸಿಲನ್ನು ಹೆಚ್ಚಿಸುತ್ತಿದೆ. ಬಿಸಿ ಗಾಳಿಯು ಈಗಾಗಲೇ ನಮ್ಮ ಮನೆಯ ಬಾಗಿಲು ತಟ್ಟಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳು ಹೇಗೆ ಎಂದು ಊಹಿಸಲೂ ಕಷ್ಟ. ಇದೇ ವೇಳೆಯಲ್ಲಿ ಬಿಸಿಲಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಅದರ ಜೊತೆಗೆ ನಮ್ಮ ಕಾರುಗಳನ್ನು ರಕ್ಷಿಸಿಬೇಕಿದೆ (Car maintain Tips). ಆದ್ದರಿಂದ ಇಲ್ಲಿ ಹೇಳಿರುವ ಕೆಲವು ವಿಷಯಗಳನ್ನು ನೆನಪಿಡಿ. ಅದು ನಿಮಗೆ ಬರೀ ಸಾಮಾನುಗಳನ್ನು ಹೊತ್ತು ತರುವ ಸಾಧನವಷ್ಟೇ ಆಗುವುದಿಲ್ಲ ಬದಲಿಗೆ, ಬೇಸಿಗೆ ರಜಾವನ್ನು ಪ್ರವಾಸ ಮುಂತಾದವುಗಳನ್ನು ಮಾಡಲು ಸಹಾಯವಾಗುತ್ತದೆ.

AC ಸರಿಯಾಗಿದೆಯೇ ಎಂದು ಪರೀಕ್ಷಿಸಿ :

AC ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ತಿಳಿದುಕೊಳ್ಳಿ. ಒಂದು ಏನಾದರೂ ಲೋಪಗಳಿದ್ದರೆ ನೀವು ಮೊದಲು ಮ್ಯಾಕಾನಿಕ್‌ ಬಳಿ ತೆಗೆದುಕೊಂಡು ಹೋಗಿ. ಏಕೆಂದರೆ ಬಹಳ ದಿನಗಳವರೆಗೆ AC ಬಂದ್‌ ಆಗಿದ್ದರೆ ಅದು ಖಂಡಿತ ಸಮಸ್ಯೆ ಕೊಡುವುದು. ಅದರ ಕ್ಷಮತೆಯ ಬಗ್ಗೆ ಗೊಂದಲವಿದ್ದರೆ ಪರಿಣಿತರ ಬಳಿ ಚರ್ಚಿಸಿ.

ಏರ್‌ ಫಿಲ್ಟರ್‌ ಕೊಳಕಾಗಿದೆಯೇ ಎಂದು ಪರೀಕ್ಷಿಸಿ:

ಮನೆಯಲ್ಲಿಯ AC ಯ ತರಹವೇ ಎಲ್ಲಾ ಕಾರುಗಳಿಗೂ AC ಯ ಜೊತೆ ಏರ್‌ ಫಿಲ್ಟರ್‌ಗಳೂ ಇವೆ. ಹೇಗೆ ನಿಮ್ಮ ಮನೆಯ ಏರ್‌ ಫಿಲ್ಟರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ತರಹವೇ ಕಾರಿನ ಏರ್‌ ಫಿಲ್ಟರ್‌ಗಳನ್ನು ಸ್ವಚ್ಛ ಗೊಳಿಸಬೇಕು. ಹಲವು ಬಾರಿ ಏನಾಗುತ್ತದೆಯೆಂದರೆ ಋತುಮಾನ ಪೂರಾ ಧೂಳು ಮತ್ತು ಹೊಲಸನ್ನು ಅದು ಎಳೆದುಕೊಳ್ಳುತ್ತದೆ. ಇದರಿಂದ AC ಯ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅದಕ್ಕಾಗಿ ಏರ್‌ ಫಿಲ್ಟರ್‌ಗಳನ್ನು ಸ್ವಚ್ಛಗೊಳಿಸಿ. ಅಗತ್ಯ ವಿದ್ದರೆ ಏರ್‌ ಫಿಲ್ಟರ್‌ ಅನ್ನೇ ಬದಲಿಸಿ.

ನೀರಿನ ಮಟ್ಟ ಚೆಕ್‌ ಮಾಡಿ

ನಮಗೆಲ್ಲಾ ಹೇಗೆ ಫ್ಲುಯಿಡ್‌ ಬೇಕೋ ಹಾಗೆ ಕಾರಿನ ಹಲವು ವಸ್ತುಗಳು ಸರಾಗವಾಗಿ ಕೆಲಸ ಮಾಡಲು ಫ್ಲುಯಿಡ್‌ ಬೇಕು. ಈ ಬೇಸಿಗೆಯ ವಾತಾವರಣದಲ್ಲಿ ಫ್ಲುಯಿಡ್‌ಗಳು ಥೀನ್‌ ಆಗಿ ಆವಿಯಾಗಿ ಬಿಡುತ್ತವೆ. ಟ್ರಾನ್ಸಮಿಷನ್‌ ಫ್ಲುಯಿಡ್‌, ಪವರ್‌ ಸ್ಟೀರಿಂಗ್‌ ಫ್ಲುಯಿಡ್‌, ಕೂಲಂಟ್‌ ಮತ್ತು ವಿಡ್‌ಶಿಲ್ಡ್‌ ವೈಪರ್‌ ಎಲ್ಲವೂ ಸರಿಯಾಗಿದೆಯೇ ಎಂದು ಪರೀಕ್ಷಿಸಿ.

ನಿಲ್ಲಿಸಿ :
ನೀವು ಕಾರನ್ನು ಚಲಾಯಿಸುವಾಗ ನಿಮಗೆ ಅದರ ಅರಿವು ಆಗುವುದೇ ಇಲ್ಲ. ಅಂತಹ ಪರಿಸ್ಥತಿಯನ್ನು ತಡೆಗಟ್ಟಲು ನಿಮ್ಮ ಕಾರಿನ ಬ್ರೆಕ್‌ಗಳನ್ನು ಪರೀಕ್ಷಿಸಿ. ಬ್ರೆಕ್‌ ಹಾಕುವಾಗ ಕೀರಲು ಅಥವಾ ಕರ್ಕಶ ಶಬ್ದಗಳನ್ನು ಮಾಡಿದರೆ ಅಥವಾ ನೇರವಾಗಿ ಬ್ರೆಕ್‌ ಹಾಕುವಾಗ ಕಾರು ಬದಿಗೆ ಎಳೆದಂತಾರೆ ಏನೋ ಸಮಸ್ಯೆಯಿದೆ ಎಂದರ್ಥ. ಅದಕ್ಕಾಗಿ ಬ್ರೆಕ್‌ಗಳನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಿಸಿ.

ಟೈರ್‌ನ ಪ್ರೆಶ್ಶರ್‌ ಚಿಕ್‌ ಮಾಡಿಸುತ್ತಿರಿ. ಏಕೆಂದರೆ ಅದರಿಂದ ಅನೇಕ ಸಮಸ್ಯೆಗಳು ಎದುರಾಗಬಹುದು. ತಾಪಮಾನದ ಏರಿಕೆಯಿಂದ ಟೈರ್‌ನ ಒಳಗಡೆಯ ಗಾಳಿಯು ಬಿಸಿಯಾಗಿ ಹಿಗ್ಗಬಹುದು. ನೀವು ಅದನ್ನು ಸರಿಯಾಗಿ ಚೆಕ್‌ ಮಾಡಿದ್ದರೆ ಇದು ಗಂಭೀರವಾಗಿ ಟೈರ್‌ ಫ್ಲಾಟ್‌ ಆಗಬಹುದು ಇಲ್ಲವೇ ಗಾಳಿ ಹೊರಹೋಗಬಹುದು.

ನಿಮ್ಮ ಆದಷ್ಟು ನೆರಳಿರುವ ಜಾಗದಲ್ಲಿ ಪಾರ್ಕ್‌ ಮಾಡಿ. ವೈಪರ್‌ ಬ್ಲೇಡ್‌ಗಳನ್ನು ಬದಲಿಸಿ. ಅದರ ಸೇಫ್ಟಿಯ ಬಗ್ಗೆ ಜಾಗರೂಕರಾಗಿರಿ.

ಇದನ್ನೂ ಓದಿ : Air Conditioners Tips: ನಿಮಗಿದು ಗೊತ್ತಾ? AC ಉಪಯೋಗಿಸಿಯೂ ವಿದ್ಯುತ್‌ ಬಿಲ್‌ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು?

ಇದನ್ನೂ ಓದಿ :Jio new plans : ಜಿಯೋದಲ್ಲಿ 333 ರೂ Plan : 3 ತಿಂಗಳ ಅನಿಯಮಿತ ಡೇಟಾ ಮತ್ತು ಕರೆ

(Car Tips how to protect the car in summer and some tips and tricks)

Comments are closed.