ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಕಾರು ಲೋನ್‌ ಆಫರ್‌ ನೀಡುತ್ತಿವೆ ಈ ಬ್ಯಾಂಕ್‌ಗಳು

ವಿಧ ಬ್ಯಾಂಕುಗಳ ಕಾರುಗಳ ಮೇಲೆ ಲೋನ್‌ ಆಫರ್‌ (diwali car loan Bank offers) ನೀಡುತ್ತಿವೆ. ಅದ್ರಲ್ಲೂ ಕೆಲವೊಂದು ಬ್ಯಾಂಕುಗಳು ಅತ್ಯಂತ ಕಡಿಮೆ ಬಡ್ಡಿಯ ಆಫರ್‌ (Low Interest Rate 2023) ನೀಡುತ್ತಿವೆ. ದಸರಾ, ದೀಪಾವಳಿಯ ಹೊತ್ತಲ್ಲಿ ಯಾವ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಕಾರು ಸಾಲ ವಿತರಿಸುತ್ತಿವೆ ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಕಾರು ಖರೀದಿ ಮಾಡಬೇಕು ಅನ್ನೋದು ಎಲ್ಲರ ಕನಸು. ಇದಕ್ಕಾಗಿ ವಿವಿಧ ಬ್ಯಾಂಕುಗಳ ಕಾರುಗಳ ಮೇಲೆ ಲೋನ್‌ ಆಫರ್‌ (diwali car loan Bank offers) ನೀಡುತ್ತಿವೆ. ಅದ್ರಲ್ಲೂ ಕೆಲವೊಂದು ಬ್ಯಾಂಕುಗಳು ಅತ್ಯಂತ ಕಡಿಮೆ ಬಡ್ಡಿಯ ಆಫರ್‌ (Low Interest Rate 2023) ನೀಡುತ್ತಿವೆ. ದಸರಾ, ದೀಪಾವಳಿಯ ಹೊತ್ತಲ್ಲಿ ಯಾವ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಕಾರು ಸಾಲ ವಿತರಿಸುತ್ತಿವೆ ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳು ಒಂದೇ ರೀತಿಯ ಕಾರು ಸಾಲದ ಮೇಲೆ ಬಡ್ಡಿಯನ್ನು ವಿಧಿಸುವುದಿಲ್ಲ. ಕೆಲವು ಬ್ಯಾಂಕುಗಳು ಸುಲಭವಾಗಿ ಸಾಲ ನೀಡಿದ್ರೆ, ಇನ್ನೂ ಕೆಲವು ಬ್ಯಾಂಕುಗಳು ದುಬಾರಿ ಬಡ್ಡಿ ಶುಲ್ಕವನ್ನು ವಿಧಿಸುತ್ತವೆ. ಇದೀಗ ದಸರಾ, ದೀಪಾವಳಿಯ ಹಬ್ಬದ ಹೊತ್ತಲ್ಲೇ ವಿವಿಧ ಬ್ಯಾಂಕುಗಳು ಕಾರ್‌ ಲೋನ್‌ ಆಫರ್‌ ನೀಡಿವೆ.

diwali car loan Bank offers These Banks Offering Car Loans With Very Low Interest Rate 2023
Image Credit to Original Source

ದೀಪಾವಳಿ ಹಬ್ಬಕ್ಕೂ ಮೊದಲೇ ಸರಕಾರಿ ಬ್ಯಾಂಕುಗಳು ಅತೀ ಕಡಿಮೆ ದರದಲ್ಲಿ ಕಾರು ಲೋನ್‌ ಆಫರ್‌ ಮಾಡುತ್ತಿವೆ. ಅಲ್ಲದೇ ಈ ಬ್ಯಾಂಕುಗಳಲ್ಲಿ ಕಾರು ಸಾಲ ಪಡೆದುಕೊಂಡ್ರೆ ಸಾಕಷ್ಟು ಲಾಭಗಳನ್ನು ನೀಡುತ್ತಿವೆ. ಹಾಗಾದ್ರೆ ಯಾವ ಬ್ಯಾಂಕು ಕಾರು ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ನೀಡುತ್ತವೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಟಾಟಾ ಕಾರುಗಳಲ್ಲಿ ಇನ್ಮುಂದೆ ಅಲೆಕ್ಸಾ : Tata Nexon, Nexon.Ev, ಹ್ಯಾರಿಯರ್, ಸಫಾರಿ ಕಾರುಗಳಲ್ಲಿ ಹೊಸ ಅನುಭವ

ಕಾರು ಖರೀದಿ ಮಾಡುವಾಗ ಪ್ರಮುಖವಾಗಿ ಕಡಿಮೆ ಬಡ್ಡಿದರ ಇರುವ ಬ್ಯಾಂಕಿನಲ್ಲಿ ಸಾಲ ಪಡೆಯುವುದು ಅತೀ ಮುಖ್ಯ. ಜೊತೆಗೆ ಇಎಂಐ ಮೊತ್ತ ಕೂಡಲ ಕಡಿಮೆ ಆಗುವುದು ಉತ್ತಮ.  ಕಾರು ಲೋನ್‌ ಪಡೆಯುವಾಗ ಬಹುತೇಕ ಬ್ಯಾಂಕುಗಳು ಸಂಸ್ಕರಣಾ ಶುಲ್ಕವನ್ನು ಪಡೆದುಕೊಳ್ಳುತ್ತವೆ.

ಆದರೆ ಸಂಸ್ಕರಣಾ ಶುಲ್ಕ ವಿಧಿಸದೇ ಕಾರು ಲೋನ್‌ ನೀಡುವ ಬ್ಯಾಂಕುಗಳ ಪೈಕಿ ಯುಕೋ ಬ್ಯಾಂಕ್‌ ಮೊದಲ ಸ್ಥಾನದಲ್ಲಿದೆ. ಈ ಬ್ಯಾಂಕ್‌ ದೀಪಾವಳಿ ಹಾಗೂ ದಸರಾ ಹೊತ್ತಲ್ಲಿ ಅತ್ಯಂತ ಕಡಿಮೆ ದರದಲ್ಲಿ ಕಾರು ಸಾಲ ನೀಡುತ್ತಿದೆ.

diwali car loan Bank offers These Banks Offering Car Loans With Very Low Interest Rate 2023
Image credit to Original Source

UCO ಬ್ಯಾಂಕ್‌ನಿಂದ ಕಾರು ಸಾಲವನ್ನು ತೆಗೆದುಕೊಂಡರೆ ನೀವು 8.45 ರಿಂದ 10.55% ಬಡ್ಡಿದರವನ್ನು ವಿಧಿಸುತ್ತದೆ. ಆದರೆ ಯಾವುದೇ ರೀತಿಯ ಸಂಸ್ಕರಣಾ ಶುಲ್ಕವನ್ನು ವಿಧಿಸುವುದಿಲ್ಲ. ಜೊತೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಬ್ಯಾಂಕು ಸಾಲ ಪಡೆಯುವುದು ಕೂಡ ಗ್ರಾಹಕರಿಗೆ ಹೆಚ್ಚು ಪ್ರಯೋಜನಕಾರಿ.

ಇದನ್ನೂ ಓದಿ : ಯುವತಿಯರ ಮದುವೆಗೆ 10 ಗ್ರಾಂ ಚಿನ್ನ, 1 ಲಕ್ಷ ರೂಪಾಯಿ ಉಚಿತ : ಗೃಹಲಕ್ಷ್ಮೀ ಬೆನ್ನಲ್ಲೇ ಮಹಾಲಕ್ಷ್ಮೀ ಯೋಜನೆ ಘೋಷಣೆ

ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಕಾರು ಸಾಲದ ಮೇಲೆ ಶೇಕಡಾ 8.65 ರಿಂದ ಶೇಕಡಾ 9.70 ರವರೆಗೆ ವಿಧಿಸುತ್ತಿದೆ. ಅಲ್ಲದೇ ಯಾವುದೇ ಪ್ರೊಸೆಸಿಂಗ್‌ ಫೀಸ್‌ ವಿಧಿಸುವುದಿಲ್ಲ. ಉಳಿದಂತೆ ಬ್ಯಾಂಕ್ ಆಫ್ ಮಹಾರಾಷ್ಟ್ರ 500 ರೂಪಾಯಿಯನ್ನು ಕಾರ್ ಲೋನ್ ಪ್ರೊಸೆಸಿಂಗ್ ಶುಲ್ಕ ವಿಧಿಸುತ್ತದೆ. ಇನ್ನುಬ್ಯಾಂಕ್ ಆಫ್ ಮಹಾರಾಷ್ಟ್ರ ಪ್ರಸ್ತುತ ಕಾರು ಲೋನ್‌ಗಳ ಮೇಲೆ ವಾರ್ಷಿಕ ಶೇಕಡಾ 8.70 ರಿಂದ 13 ರಷ್ಟು ಬಡ್ಡಿಯನ್ನು ವಿಧಿಸುತ್ತದೆ.

ಇನ್ನು ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಕಾರು ಸಾಲಗಳ ಮೇಲೆ ಶೇಕಡಾ 8.70 ರಿಂದ 12.10 ರವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. ಆದರೆ ಸಂಸ್ಕರಣಾ ಶುಲ್ಕವಾಗಿ 500 ರೂಪಾಯಿಯನ್ನು ಸಂಸ್ಕರಣಾ ಶುಲ್ಕವಾಗಿ ವಿಧಿಸುತ್ತದೆ. ಕಾರು ಲೋನ್‌ ಪಡೆಯುವ ಮೊದಲು ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿದರದ ಮೇಲೆ ಮಾಹಿತಿ ಪಡೆಯುವುದು ಅತೀ ಮುಖ್ಯ.

diwali car loan Bank offers These Banks Offering Car Loans With Very Low Interest Rate 2023

Comments are closed.