ಭಾರತದಲ್ಲಿ ಪೆಟ್ರೋಲ್, ಡಿಸೀಲ್ ಬೆಲೆ ಗಗನದತ್ತ ಸಾಗಿದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಭಾರತೀಯರು ಎಲೆಕ್ಟ್ರಿಕ್ ವಾಹನದ ಮೊರೆ ಹೋಗುತ್ತಿದ್ದಾರೆ. ಆದರೆ ನಮಗಿಂತ ಮುಂಚೆ ಹಲವು ಮುಂದುವರಿದ ದೇಶಗಳು ಎಲೆಕ್ಟ್ರಿಕ್ ವಾಹನವನ್ನು ಉಪಯೋಗಿಸಲು ಶುರು ಮಾಡಿದ್ದಾರೆ. ಆಂದರೆ ಇತ್ತೀಚಿನ ದಿನದಲ್ಲಿ ಪ್ರಪಂಚದಾದ್ಯಂತ ಜನರು ಎಲೆಕ್ಟ್ರಿಕ್ ವಾಹನವನ್ನು ಬಳಸುತ್ತಿದ್ದಾರೆ. ಅದರಲ್ಲಿ ಹೆಚ್ಚಿನ ಜನರು ಉಪಯೋಗಿಸುವ ಟಾಪ್ ಎಲೆಕ್ಟ್ರಿಕ್ ಕಾರುಗಳು ಯಾವುದೆಂದು ಪಟ್ಟಿ ನಿಮಗಾಗಿ.

Renault Zoe : Renault Zoe ಬಹಳ ಆಕರ್ಷಕವಾದ ಕಾರು. ಇದನ್ನು 2020 ರಲ್ಲಿ ಭಾರತದಲ್ಲಿ ನಡೆದಿದ್ದ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಕಾರು ಬಿಡುಗಡೆಗೆ ಭಾರತಿಯರು ಬಹಳ ಕಾತುರತೆ ಇಂದ ಕಾಯುತ್ತಿದ್ದಾರೆ. Renault Zoe ಕಾರು ಶ್ರೀಘ್ರದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಪ್ರಪಂಚದಾದ್ಯಂತ Renault Zoe ಎಲೆಕ್ಟ್ರಿಕ್ ಕಾರಿನ ೩೫ ಸಾವಿರ ಯುನಿಟ್ ಗಳು ಮಾರಾಟವಾಗುತ್ತವೆ.

Hyundai Kona : Hyundai Kona ಕಾರು ತನ್ನ ಆಕರ್ಷಕ ಲುಕ್ ನಿಂದ ಜನರನ್ನ ತನ್ನತ್ತಾ ಸೇಳೆಯುತ್ತದೆ. ಹ್ಯುಂಡೈ ಕಂಪಡನಿಯ ಮೊದಲ ಎಲೆಕ್ಟ್ರಿಕ್ ಕಾರು Hyundai Kona. ಈ ಕಾರು ಭಾರತದಲ್ಲಿ ಕೂಡ ಮಾರಾಟ ವಾಗುತ್ತಿದೆ. Hyundai Kona ಎಲೆಕ್ಟ್ರಿಕ್ ಕಾರು ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 52 ಸಾವಿರ ಯೂನಿಟ್ ಗಳು ಮಾರಾಟವಾಗುತ್ತವೆ.

Audi e Tron : ಭಾರತದಲ್ಲಿ ಮಾರಾಟವಾಗುವ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಪೈಕಿ Audi e Tron ಕೂಡ ಒಂದು. ಈ ಕಾರು ಪ್ರತಿ ವರ್ಷಕ್ಕೆ ಪ್ರಪಂಚದಾದ್ಯಂತ ಸುಮಾರು 47324 ಯುನಿಟ್ ಗಳು ಮಾರಾಟವಾಗುತ್ತದೆ. Audi e Tron ಕಾರು ಸ್ಟಾಂಡರ್ಡ್, ಸ್ಪೋರ್ಟ್ ಬ್ಯಾಕ್, ಜಿಟಿ ಹಾಗೂ ಆರ್ ಎಸ್ ಎಂಬ ನಾಲ್ಕು ಮಾದರಿಯಲ್ಲಿ ಮಾರಾಟವಾಗುತ್ತದೆ.

Nissan Leaf : Nissan Leaf ಎಲೆಕ್ಟ್ರಿಕ್ ಕಾರನ್ನು ಆಮದು ಮಾಡಿಕೊಂಡು ಭಾರತದ ಕ್ರಿಕೇಟ್ ತಂಡದ ಮಾಜಿ ನಾಯಕ ಲಪಿಲ್ ದೇವ್ ರವರಿಗೆ ಉಡುಗೊರೆಯಾಗಿ ನೀಡಲಾಗಿದೆ. ಅಲ್ಲದೇ Nissan Leaf ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. Nissan Leaf ಎಲೆಕ್ಟ್ರಿಕ್ ಕಾರು ಪ್ರಪಂಚದಲ್ಲಿ ಅತ್ಯಂತ ಹಳೆಯ ಹಾಗೂ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಒಂದು.