Honda Elevate Launch : ಭಾರತದಲ್ಲೀಗ ಎಸ್‌ಯುವಿ ಕಾರುಗಳದ್ದೇ ಕಾರುಬಾರು. ಮಾರುತಿ, ಹುಂಡೈ ಕಂಪೆನಿಗಳು ಈಗಾಗಲೇ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸಕ್ಸಸ್ ಕಂಡಿವೆ. ಇದೀಗ ದುಬಾರಿ ಹಾಗೂ ಐಷಾರಾಮಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದ ಹೋಂಡಾ ಕಂಪೆನಿ ಇದೀಗ ಮಧ್ಯಮ ಗಾತ್ರದ ಹೋಂಡಾ ಎಲಿವೇಟ್ ಎಸ್‌ಯುವಿ (Honda Elevate SUV) ಕಾರನ್ನು ಮಾರುಕಟ್ಟೆಗೆ ಇಂದು ಬಿಡುಗಡೆಗೊಳಿಸಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ (Cheepest SUV Cars In India )ಹೋಂಡಾ ಎಲಿವೇಟ್ ಕಾರು ಮಾರುಕಟ್ಟೆಗೆ ಲಾಂಚ್ ಆಗುತ್ತಿದೆ. ಆರಂಭಿಕ ಬೆಲೆ 11 ಲಕ್ಷದಿಂದ ರೂಪಾಯಿಯಿಂದ ಗ್ರಾಹಕರಿಗೆ ಕಾರು ಲಭ್ಯವಾಗುತ್ತಿದೆ. ಕಾರು ಹಲವು ಹೊಸ ಫೀಚರ್ಸ್‌ಗಳನ್ನು ಹೊಂದಿದೆ. ಪೆಟ್ರೋಲ್ ಕಾರ್ ಆಗಿದ್ದು, ಐದು ಸೀಟರ್ ಸಾಮರ್ಥ್ಯವನ್ನು ಹೊಂದಿದೆ. 1998 ಸಿಸಿ ಇಂಜಿನ್, 119 ಬಿಎಚ್‌ಪಿ ಪವರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಮ್ಯಾನುವೆಲ್ ಹಾಗೂ ಆಟೋಮೆಟಿಕ್ ಮಾದರಿಯಲ್ಲಿ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಹೋಂಡಾ ಎಲಿವೇಟ್ ಹಲವು ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹೋಂಡಾ ಎಲಿವೇಟ್ ಎಸ್‌ಯುವಿಯ ಪ್ರಮುಖ ವೈಶಿಷ್ಟ್ಯ 17-ಇಂಚಿನ ಡೈಮಂಡ್-ಕಟ್ ಅಲಾಯ್ ಚಕ್ರಗಳು, ಅಲ್ಲದೇ ನೋಡಲು ಆಕರ್ಷಕವಾಗಿದೆ. ಅಲ್ಲದೇ ಬಹು-ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಡ್ಯುಯಲ್ ಕ್ಲೈಮೇಟ್ ಕಂಟ್ರೋಲ್ ಮತ್ತು ಸನ್‌ರೂಫ್ ಸೌಲಭ್ಯವನ್ನು ನೀಡಲಾಗಿದೆ.

ಅಷ್ಟೇ ಅಲ್ಲದೇ ಡ್ಯಾಶ್‌ಬೋರ್ಡ್‌ನಲ್ಲಿ ಮೃದು-ಟಚ್ ಫಿನಿಶ್ ಹೊಂದಿರುವ ಬ್ರೌನ್ ಲೆಥೆರೆಟ್ ಅಳವಡಿಸಲಾಗಿದೆ, ಸ್ವಯಂ-ಡಿಮ್ಮಿಂಗ್ ರಿಯರ್‌ವ್ಯೂ ಮಿರರ್ ಮತ್ತು ಎಲ್ಲಾ ವೈರ್‌ಲೆಸ್ ಕಾರ್ ಸಂಪರ್ಕ ತಂತ್ರಜ್ಞಾನವನ್ನು ಹೊಂದಿರುವ ಎಂಟು ಸ್ಪೀಕರ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್. ಗ್ರಾಹಕರ ಸುರಕ್ಷತೆಗಾಗಿ ಏರ್‌ಬ್ಯಾಗ್ ಅಳವಡಿಸಲಾಗಿದೆ.

ಇನ್ನು ಕಾರನಲ್ಲಿ ಚಾಲಕರು ಅತೀ ವೇಗದಲ್ಲಿ ಚಲಿಸುತ್ತಿದ್ದಂತೆಯೇ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಅಲ್ಲದೇ ಪಾರ್ಕಿಂಗ್ ಸಂವೇದಕ, ಲೇನ್ ಕೀಪ್ ನೆರವಿನ ಜೊತೆಗೆ ಚಾಲಕರ ಸಹಾಯಕ್ಕಾಗಿ (ADAS) ಹೋಂಡಾ ಎಲಿವೇಟ್ SUV ನಲ್ಲಿ ಆರು ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಹೋಂಡಾ ಕಂಪೆನಿ ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಹೋಂಡಾ ಎಲಿವೇಟ್ ಬಗ್ಗೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆ ಪ್ರವೇಶಕ್ಕೆ ಹೋಂಡಾ ಕಂಪೆನಿ ಅತ್ಯುತ್ತಮ ಕಾರನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.

ಜಪಾನ್ ಮೂಲಕ ಕಾರು ತಯಾರಿಕಾ ಕಂಪೆನಿಯಾಗಿರುವ ಹೋಂಡಾ ಎಲಿವೇಟ್ ಏಳು ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಪ್ಲಾಟಿನಂ ವೈಟ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್, ಅಬ್ಸಿಡಿಯನ್ ಬ್ಲೂ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮೆಟಿಲಿಕ್ ಮೆಟಾಲಿಕ್ ಮೆಟಾಲಿಕ್ ಮೆಟಾಲಿಕ್ ಬಣ್ಣಗಳಲ್ಲಿ ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಇದನ್ನೂ ಓದಿ : Tata Punch ICNG : 7.10 ರೂ ಲಕ್ಷಕ್ಕೆ ಮಾರುಕಟ್ಟೆಗೆ ಬಂತು ಟಾಟಾ ಪಂಚ್ CNG : ಎಲೆಕ್ಟ್ರಿಕ್ ಸನ್‌ರೂಫ್ ಜೊತೆಯಲ್ಲಿದೆ ಹಲವು ವೈಶಿಷ್ಟ್ಯ

ಈಗಾಗಲೇ ಹೋಂಡಾ ಎಲಿವೇಟ್ ಬಿಡುಗಡೆಯಾಗಿದ್ದು, ಸದ್ಯದಲ್ಲಿಯೇ ಮ್ಯಾನುವೆಲ್ ಮಾದರಿಯಲ್ಲಿ ವಿಎಕ್ಸ್‌ಎಂಟಿ, ಎಸ್‌ವಿಎಂಟಿ, ವಿಎಂಟಿ, ಝಡ್‌ಎಕ್ಸ್‌ಎಂಟಿ, ವಿಸಿವಿಟಿ, ವಿಎಕ್ಸ್ ಸಿವಿಟಿ ವೇರಿಯಂಟ್ ಲಭ್ಯವಿದೆ. ಇನ್ನು ಆಟೋ ಮ್ಯಾಟಿಕ್ ಮಾದರಿಯಲ್ಲಿ ವಿಎಕ್ಸ್ ಎಂಟಿ, ಝಡ್ ಎಕ್ಸ್ ಸಿವಿಟಿ, ಎಸ್‌ವಿಎಂಟಿ, ವಿಎಂಟಿ, ಝಡ್ ಎಕ್ಸ್‌ಎಂಟಿ ಶ್ರೇಣಿಯಲ್ಲಿ ಕಾರು ಬಿಡುಗಡೆಯಾಗಲಿದೆ.

ಹುಂಡೈ ಎಲಿವೇಟ್ (Honda Elevate) ಕಾರು ಹುಂಡೈ ಕ್ರೇಟಾ (Hundai Creta) , ಕಿಯಾ ಸೆಲ್ಟೋಸ್ (KIA Seltos), ಹೊಂಡಾ ಸಿಟಿ (Hoda City), ಸ್ಕೋಡಾ ಕುಷ್ಕ್ (Skoda Kushaq), ಟೊಯಾಟಾ ಅರ್ಬನ್ ಕ್ರೂಶರ್ ಹೈರೈಡರ್ (Toyota Urban Cruiser Hyryder), ಓಕ್ಸ್‌ವೋಗನ್ ಟೈಗನ್ (Volkswagen Taigun), ಎಂಜಿ ಅಸ್ಟೋರ್ (MG Astor), ಮಾರುತಿ ಗ್ರ್ಯಾಂಡ್ ವಿತಾರಾ (Maruthi Grand Vitara) , ಎಂಜಿ ಹೆಕ್ಟೇರ್ (MG Hector) ಕಾರುಗಳಿಗೆ ಭಾರೀ ಪೈಪೋಟಿಯನ್ನು ನೀಡಲಿದೆ. ಸದ್ಯ ಮಾರುಕಟ್ಟೆಯಲ್ಲಿ *5/5 ರೇಟಿಂಗ್ ಹೊಂದಿದೆ.
ಇದನ್ನೂ ಓದಿ : ಕೇವಲ 5,547ರೂ.ಗೆ ಮನೆಗೆ ಕೊಂಡೊಯ್ಯಬಹುದು ಹೀರೋ ಕರಿಜ್ಮಾ XMR 210

ಇಂದು ಬಿಡುಗಡೆಯಾಗಲಿರುವ ಹೋಂಡಾ ಎಲಿವೇಟ್ ಎಸ್‌ಯುವಿ ಕಾರು ಸದ್ಯ ಕಡಿಮೆ ಬೆಲೆಯಲ್ಲಿಯೇ ಲಭ್ಯವಾಗುತ್ತಿದೆ. ಹಲವು ಬಣ್ಣ ಹಾಗೂ ವಿನ್ಯಾಸಗಳಲ್ಲಿಯೂ ಹೋಂಡಾ ಕಂಪೆನಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ 10 ಲಕ್ಷ ರೂಪಾಯಿ (Honda Elevate SUV Ex Showroom Price . ಟಾಪೆಂಡ್ ಮಾಡೆಲ್‌ಗಳಿಗೆ 17 ಲಕ್ಷ ರೂಪಾಯಿಯಿದೆ.

ಇನ್ನು ಮಧ್ಯಮ ವೇರಿಯಂಟ್ ಎಸ್‌ಯುವಿ ಕಾರುಗಳ ಎಕ್ಸ್‌ಶೋರೂಂ ಬೆಲೆ 13,01,900ರೂ. ಆದರೆ 1,24,020ರೂ. ಡೌನ್‌ಪೇಮೆಂಟ್ ಪಾವತಿ ಮಾಡಿದ್ರೆ 18,653ರೂ. ಸುಲಭ ಮಾಸಿಕ ಕಂತುಗಳ ಮೂಲಕ ಕಾರುಗಳನ್ನು ಖರೀದಿ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಏಳು ವರ್ಷಗಳ ಕಾಲ ಇಎಂಐ ಪಾವತಿ ಮಾಡಬೇಕಾಗಿದೆ. ಇನ್ನು ಕಡಿಮೆ ವರ್ಷಗಳ ಇಎಂಐ ಸೌಲಭ್ಯ ಕೂಡ ಲಭ್ಯವಿದೆ.
Honda Elevate SUV Launch today Purchase just ₹18,653 Cheepest SUV Cars In India