Hyundai: ಕ್ರೆಟಾ ಮತ್ತು ಅಲ್ಕಜಾರ್‌ ಕಾರುಗಳ ಎಡ್ವೆಂಚರ್‌ ಸ್ಪೆಷಲ್‌ ಆವೃತ್ತಿಯನ್ನು ಬಿಡುಗಡೆ ಮಾಡಿದ ಹುಂಡೈ; ಹೊಸ ಎಸ್‌ಯುವಿಗಳ ವೈಶಿಷ್ಟ್ಯ ಹೀಗಿವೆ

ಹುಂಡೈ ಇಂಡಿಯಾ (Hyundai India) ತನ್ನದೇ ಕ್ರೆಟಾ (Creta) ಮತ್ತು ಅಲ್ಕಜಾರ್‌ (Alcazar) ಸೆಗ್ಮೆಂಟ್‌ಗಳನ್ನು ಮುಂದುವರಿಸುತ್ತಾ ಈ ಕಾರುಗಳ ಸ್ಪೆಷಲ್‌ ಎಡ್ವೇಂಚರ್‌ ಆವೃತ್ತಿಯನ್ನು ಅನ್ನು ಬಿಡುಗಡೆ ಮಾಡಿದೆ. ಕ್ರೆಟಾ ಅಡ್ವೆಂಚರ್‌ ಸ್ಪೆಷಲ್‌ ಆವೃತ್ತಿಯನ್ನು ಎಸ್‌ಎಕ್ಸ್‌ ಪೆಟ್ರೋಲ್‌ ಮಾನ್ಯುವಲ್‌ ಮತ್ತು ಎಸ್‌ಎಕ್ಸ್‌(ಒ) ಪೆಟ್ರೋಲ್‌ ಸಿವಿಟಿ ಎರಡು ರೂಪಾಂತರಗಳಲ್ಲಿ ಪರಿಚಯಿಸಿದೆ. ಹಾಗೆಯೇ ಹುಂಡೈ ಅಲ್ಕಜಾರ್‌ ಅಡ್ವೆಂಚರ್‌ ಆವೃತ್ತಿಯನ್ನು 4 ರೂಪಾಂತರಗಳಲ್ಲಿ ಪರಿಚಯಿಸಿದೆ. ಪ್ಲಾಟಿನಂ ಪೆಟ್ರೋಲ್‌ ಮಾನ್ಯುವಲ್‌, ಪ್ಲಾಟಿನಂ ಡೀಸಲ್‌ ಮಾನ್ಯುವಲ್‌, ಸಿಗ್ನೇಚರ್‌ (O) ಪೆಟ್ರೋಲ್‌ ಡಿಸಿಟಿ ಮತ್ತು ಸಿಗ್ನೇಚರ್‌ (O) ಡೀಸಲ್‌ ಆಟೋಮ್ಯಾಟಿಕ್‌ ಇವುಗಳು ಹೊಸದಾಗಿ ಪರಿಚಯಿಸಿದ ಆವೃತ್ತಿಗಳಾಗಿವೆ. ಹುಂಡೈ ಅವುಗಳ ಬೆಲೆಯನ್ನು (ಎಕ್ಸ್‌ ಶೋ ರೂಂ) ಕ್ರಮವಾಗಿ 19.04 ಲಕ್ಷ, 20 ಲಕ್ಷ, 20.64 ಲಕ್ಷ ಮತ್ತು 21.24 ಲಕ್ಷ ಹೀಗೆ ನಿಗದಿಪಡಿಸಿದೆ. ಈಗ ಹೊಸದಾಗಿ ಬಿಡುಗಡೆಯಾದ ಆವೃತ್ತಿಯಲ್ಲಿ ಇರುವ ವೈಶಿಷ್ಟ್ಯಗಳು ಹೀಗಿವೆ.

ವಿನ್ಯಾಸ
ಈಗ ಬಿಡುಗಡೆಯಾಗಿರುವ ಅಡ್ವೆಂಚರ್‌ ಸ್ಪೆಷಲ್‌ ಆವೃತ್ತಿಯಲ್ಲಿ ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಹೊಸದಾಗಿ ಪರಿಚಯಿಸಲಾಗಿದ್ದ ಮೈಕ್ರೋ ಎಸ್‌ಯುವಿ ಎಕ್ಸಟರ್‌ನಲ್ಲಿರುವಂತೆಯೇ ಇದರಲ್ಲು ಡ್ಯಾಶ್‌ಕ್ಯಾಮ್‌ ನೀಡಲಾಗಿದೆ. ಈ ಕಾರುಗಳ ಹೊರಭಾಗವನ್ನು ಕಪ್ಪು ಮತ್ತು ಔಟ್‌ ಫ್ರಂಟ್‌ ಗ್ರಿಲ್ಸ್‌ ಅನ್ನು ಅಳವಡಿಸಲಾಗಿದೆ. ಇದಲ್ಲದೇ, ಫಾಗ್ ಲ್ಯಾಂಪ್ ಹೌಸಿಂಗ್, ಫ್ರಂಟ್, ರಿಯರ್ ಮತ್ತು ಸೈಡ್ ಸ್ಕಿಡ್ ಪ್ಲೇಟ್‌ಗಳು, 17-ಇಂಚಿನ ಅಲಾಯ್ ವೀಲ್‌ಗಳು ಮತ್ತು ವಿಂಗ್ ಮಿರರ್‌ಗಳನ್ನು ಸಹ ಬ್ಲಾಕ್-ಔಟ್ ಎಲಿಮೆಂಟ್‌ಗಳಲ್ಲಿ ನೀಡಲಾಗಿದೆ, ಈ ವೈಶಿಷ್ಟ್ಯಗಳು ಎಸ್‌ಯುವಿಗೆ ಸ್ಪೋರ್ಟಿ ಲುಕ್ ನೀಡಲು ಸಹಾಯ ಮಾಡುತ್ತದೆ.

ಎಂಜಿನ್
ಹ್ಯುಂಡೈ ಕ್ರೆಟಾ ಅಡ್ವೆಂಚರ್ ಆವೃತ್ತಿಯು ಪವರ್‌ಟ್ರೈನ್‌ ಆಗಿರುವುದರಿಂದ 1.5L ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 115bhp ಪವರ್ ಮತ್ತು 144Nm ಟಾರ್ಕ್ ಅನ್ನು ನೀಡುತ್ತದೆ. ಮತ್ತೊಂದೆಡೆ, ಅಲ್ಕಜರ್ ಅಡ್ವೆಂಚರ್ ಆವೃತ್ತಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಮೊದಲನೆಯದು 1.5L ಟರ್ಬೊ ಪೆಟ್ರೋಲ್ ಎಂಜಿನ್ 160bhp ಪವರ್ ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು 116bhp ಪವರ್ ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುವ 1.5L ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಬಣ್ಣಗಳ ಆಯ್ಕೆ
ಹುಂಡೈ ಕ್ರೆಟಾ ಅಡ್ವೆಂಚರ್ ಆವೃತ್ತಿಯು ಕಪ್ಪು C-ಪಿಲ್ಲರ್ ಟ್ರಿಮ್‌ನೊಂದಿಗೆ ಬಂದರೆ ಅಲ್ಕಜಾರ್‌ ಅಡ್ವೆಂಚರ್ ಆವೃತ್ತಿಯು ಕಪ್ಪು ಟೈಲ್‌ಗೇಟ್ ಅನ್ನು ಪಡೆದುಕೊಂಡಿದೆ. ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್ ಮತ್ತು ಟೈಟಾನ್ ಗ್ರೇ ಮುಂತಾದ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಕ್ರೆಟಾದ ಅಡ್ವೆಂಚರ್‌ ಸ್ಪೆಷಲ್‌ ರೂಪಾಂತರವು ಡ್ಯುಯಲ್-ಟೋನ್ ಪೇಂಟ್ ಆಯ್ಕೆಗಳೊಂದಿಗೆ ಬರುತ್ತದೆ, ಕಪ್ಪು ಛಾವಣಿಯೊಂದಿಗೆ ಅಟ್ಲಾಸ್ ವೈಟ್ ಮತ್ತು ಕಪ್ಪು ಛಾವಣಿಯೊಂದಿಗೆ ರೇಂಜರ್ ಖಾಕಿ, ಅಲ್ಕಾಜರ್ ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ – ಟೈಟಾನ್ ಗ್ರೇ, ರೇಂಜರ್ ಖಾಕಿ ಮತ್ತು ಅಟ್ಲಾಸ್ ವೈಟ್.

ಸ್ಪರ್ಧೆ
ಹ್ಯುಂಡೈ ಅಲ್ಕಜರ್ ಮತ್ತು ಕ್ರೆಟಾ ಕಾರುಗಳಿಗೆ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್ ನೇರ ಪ್ರತಿಸ್ಪರ್ಧಿ ವಾಹನಗಳಾಗಿವೆ.

ಇದನ್ನೂ ಓದಿ: Tata Punch ICNG : 7.10 ರೂ ಲಕ್ಷಕ್ಕೆ ಮಾರುಕಟ್ಟೆಗೆ ಬಂತು ಟಾಟಾ ಪಂಚ್ CNG : ಎಲೆಕ್ಟ್ರಿಕ್‌ ಸನ್‌ರೂಫ್‌ ಜೊತೆಯಲ್ಲಿದೆ ಹಲವು ವೈಶಿಷ್ಟ್ಯ

(Hyundai India launched Creta and Alcazar special adventure variants know the price and specification of this SUV)

Comments are closed.