Honda Shine 100: ಹೊಂಡಾ ಶೈನ್‌ 100 ಬೈಕ್‌ನ 5 ವಿಶೇಷತೆಗಳು

ದ್ವಿಚಕ್ರ ವಾಹನಗಳಿಗೆ ಹೆಸರುವಾಸಿಯಾದ ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ ಇತ್ತೀಚೆಗೆ ಹೊಸ ಶೈನ್ 100 ಕಮ್ಯೂಟರ್ ಮೋಟಾರ್‌ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಅತ್ಯಂತ ಜನಪ್ರಿಯ 100cc (Honda Shine 100) ಪ್ರಯಾಣಿಕರ ವಿಭಾಗವನ್ನು ಪ್ರವೇಶಿಸಿದೆ. ಇದು ಎಂಟ್ರಿ ಲೆವಲ್‌ ಬೈಕ್‌ ಆಗಿದೆ. ಇದು ಬಜೆಟ್‌ ಬೆಲೆಯ ಬೈಕ್‌ ಆಗಿದ್ದರಿಂದ 100cc ಪ್ರಯಾಣಿಕ ವಾಹನದ ವಿಭಾಗದಲ್ಲಿ ಉತ್ತಮ ಪ್ಯಾಕೇಜ್‌ ಎಂದು ಹೇಳಬಹುದಾಗಿದೆ. ಈ ಬೈಕ್‌ನ ವಿಶೇಷತೆ, ಬೆಲೆ ಮತ್ತು ಲಭ್ಯತೆಗಳ ಬಗ್ಗೆ ಇಲ್ಲಿದೆ ಓದಿ.

ಹೊಂಡಾ ಶೈನ್‌ 100cc ಬೈಕ್‌ನ ವೈಶಿಷ್ಟ್ಯಗಳು :

  • ಹೊಸ ಫ್ಯೂಯಲ್‌ ಇಂಜೆಕ್ಟೆಡ್‌ 99.7cc ಇಂಜಿನ್‌ ಪಡೆದುಕೊಂಡಿರುವ ಹೊಂಡಾ ಶೈನ್‌ 100 ಬೈಕ್‌ ಅತ್ಯಂತ ಆಕರ್ಷಕವಾಗಿದೆ. ಇದು 7.61hp ಪವರ್ ಮತ್ತು 8.05Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
  • ಶೈನ್‌ 100 ಬೈಕ್‌ನ ಶಕ್ತಿಯು ಹೀರೋ ಮೋಟಾರ್‌ಸೈಕಲ್‌ಗಿಂತ 0.5hp ಕಡಿಮೆಯಾಗಿದೆ. E20 ಇಂಧನವನ್ನು ಬೆಂಬಲಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
  • ಶೈನ್ 100 ಹೊಸ ಡೈಮಂಡ್ ಮಾದರಿಯ ಚೌಕಟ್ಟನ್ನು ಪಡೆದುಕೊಂಡಿದ್ದು, ಬೈಕ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಇದರ ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.
  • 100 ಕೆಜಿಗಿಂತ ಕಡಿಮೆ ತೂಕವಿರುವ ಈ ಬೈಕ್‌ನ ಸೀಟ್‌ನ ಎತ್ತರವು 786 ಮಿಮೀ ಆಗಿದೆ. ಇದರೊಂದಿಗೆ 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಕೂಡ ಇದರಲ್ಲಿ ಲಭ್ಯವಿದೆ.
  • ಇದು ಎಂಟ್ರಿ ಲೆವೆಲ್ ಬೈಕ್ ಆಗಿರುವುದರಿಂದ ಸರಳ ಹ್ಯಾಲೊಜೆನ್ ಹೆಡ್‌ಲೈಟ್‌ನೊಂದಿಗೆ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ. ಇದು ಡಿಸ್ಕ್ ಬ್ರೇಕ್ ಹೊಂದಿಲ್ಲವಾದರೂ ಕಾಂಬಿ-ಬ್ರೇಕಿಂಗ್ ಸಿಸ್ಟಮ್, ಫ್ಯೂಯಲ್-ಇಂಜೆಕ್ಷನ್ ಮತ್ತು ಆಟೋ-ಚೋಕ್ ಸಿಸ್ಟಮ್ ಅನ್ನು ಹೊಂದಿದೆ.

ಬೆಲೆ ಎಷ್ಟು?
ಹೊಂಡಾ ತನ್ನ ಹೊಸ ಶೈನ್ 100 ಅನ್ನು ಆರಂಭಿಕ ಎಕ್ಸ್ ಶೋ ರೂಂ ಬೆಲೆ 64,900 ರೂ. ನೊಂದಿಗೆ ಪರಿಚಯಿಸಿದೆ. ಈ ಬೆಲೆಯು 100cc ಬೈಕ್‌ ವಿಭಾಗದಲ್ಲಿ ಉತ್ತಮ ಪ್ಯಾಕೇಜ್ ಆಗಿದೆ. ಹೊಂಡಾ ಈ ಬೈಕ್‌ ಅನ್ನು 2 ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಯಾರಿಗೆ ಸ್ಪರ್ಧೆ ನೀಡಲಿದೆ?
ಹೊಂಡಾ ಶೈನ್‌ 100 cc ಬೈಕ್‌ ಹೀರೋ HF 100, ಹೀರೋ ಸ್ಪ್ಲೆಡಂರ್‌ + ಮತ್ತು ಬಜಾಜ ಪ್ಲಾಟಿನಾ 100 ಬೈಕ್‌ಗಳಿಗೆ ನೇರ ಸ್ಪರ್ಧೆ ನೀಡಲಿದೆ.

ಬುಕಿಂಗ್‌ ಮತ್ತು ವಿತರಣೆ:

ಕಂಪನಿಯು ತನ್ನ ಹೊಸ ಹೊಂಡಾ ಶೈನ್ 100 ಗಾಗಿ ಬುಕ್ಕಿಂಗ್ ಆರಂಭಿಸಿದೆ. ಹೊಂಡಾ ಮುಂದಿನ ತಿಂಗಳಿನಿಂದ ಈ ಬೈಕಿನ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ಆದರೆ ಗ್ರಾಹಕರು ಇದನ್ನು ಪಡೆದುಕೊಳ್ಳಲು ಮೇ ತಿಂಗಳಿನವರೆಗೆ ಕಾಯಬೇಕಾಗಿದೆ.

ಇದನ್ನೂ ಓದಿ : Indian Railways : ಉತ್ತಮ ಸೌಕರ್ಯಗಳನ್ನು ಪರಿಚಯಿಸಲು ಮುಂದಾದ ಭಾರತೀಯ ರೈಲ್ವೇ; ನೈರ್ಮಲ್ಯಕ್ಕಾಗಿ ಹೊಸ ಶೌಚಾಲಯಗಳ ವಿನ್ಯಾಸ

ಇದನ್ನೂ ಓದಿ : Hyundai Creta : ಕ್ರೆಟಾ ಎನ್-ಲೈನ್ ನೈಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಹುಂಡೈ; ಕೇವಲ 900 ಯುನಿಟ್‌ಗಳು ಮಾತ್ರ ಲಭ್ಯ

(Honda Shine 100cc bike. Know the five major key details about new Honda bike)

Comments are closed.