ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Motorcycle) ತಯಾರಿಕಾ ಸಂಸ್ಥೆಯಾದ ಹಾಪ್ ಎಲೆಕ್ಟ್ರಿಕ್ (Hop Electric), ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಹಾಪ್ OXO ಬಿಡುಗಡೆ ಮಾಡಿದೆ. 1.25 ಲಕ್ಷ ರೂ. ಇದರ ಆರಂಭಿಕ ಬೆಲೆಯಾಗಿದೆ. ಕಂಪನಿಯು ಈ ಬೈಕ್ ಅನ್ನು ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆಮಾಡಿದೆ. ಗ್ರಾಹಕರು ಇದನ್ನು ಕಂಪನಿಯ ಡೀಲರ್‌ಶಿಪ್ ಮತ್ತು ಆನ್‌ಲೈನ್ ಮೂಲಕ ಖರೀದಿಸಬಹುದಾಗಿದೆ.
OXO ಲೆಕ್ಟ್ರಿಕಲ್ ಮೋಟಾರ್‌ಸೈಕಲ್ ನ ವೈಶಿಷ್ಟ್ಯಗಳು :
ಹಾಪ್ ಈ ಎಲೆಕ್ಷ್ರಿಕ್ OXO ಬೈಕ್ ಅನ್ನು ನಗರ ಪ್ರದೇಶದ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಿದೆ. 72V ಆರ್ಕಿಟೆಕ್ಚರ್‌ನಲ್ಲಿ ಈ ಬೈಕ್ ಅನ್ನು ನಿರ್ಮಿಸಲಾಗಿದೆ. 5-ಇಂಚಿನ IP67-ರೇಟೆಡ್ ಡಿಜಿಟಲ್ ಡಿಸ್ಪ್ಲೇ, ಜಿಯೋ-ಫೆನ್ಸಿಂಗ್, 4G ಸಂಪರ್ಕ, ಪುನರುತ್ಪಾದಕ ಬ್ರೇಕಿಂಗ್, ಆಂಟಿ-ಥೆಫ್ಟ್ ಅಲಾರ್ಮ್, ಸ್ಪೀಡ್ ಕಂಟ್ರೋಲ್, LED ಟರ್ನ್ ಇಂಡಿಕೇಟರ್‌ಗಳು, ರೈಡ್ ಅಂಕಿಅಂಶಗಳು, ಆಕ್ಸೋ ಮೊಬೈಲ್ ಅಪ್ಲಿಕೇಶನ್‌ನ ಸಂಪರ್ಕದಂತಹ ಅನೇಕ ವೈಶಿಷ್ಟ್ಯಗಳನ್ನು ಈ ಬೈಕ್ ಹೊಂದಿದೆ. ಆದರೆ ಇದರಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಇರುವುದಿಲ್ಲ. ಜನರ ಅನುಕೂಲ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಇದರ ಆಸನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
3.75 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವ ಈ ಬೈಕ್, 6,200 ವ್ಯಾಟ್ ಎಲೆಕ್ಟ್ರಿಕ್ ಮೋಟರ್‌ಗೆ ಸಂಯೋಜಿತವಾಗಿದೆ. ಈ ಬೈಕ್ ಕೇವಲ 4 ಸೆಕೆಂಡುಗಳಲ್ಲಿ ಗಂಟೆಗೆ 0-40 ಕಿ.ಮೀ ವೇಗವನ್ನು ಮುಟ್ಟುತ್ತದೆ. ಟರ್ಬೊ ಮೋಡ್‌ನಲ್ಲಿ, ಈ ಬೈಕ್ ಗಂಟೆಗೆ 90 ಕಿಮೀ ವೇಗದಲ್ಲಿ ಚಲಿಸಬಹುದಾಗಿದೆ. ಒಂದೇ ಚಾರ್ಜ್‌ನಲ್ಲಿ ಈ ಬೈಕ್‌ನಿಂದ 150 ಕಿಮೀ ವ್ಯಾಪ್ತಿಯನ್ನು ಪಡೆಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಒಂದೇ ಚಾರ್ಜ್‌ನಲ್ಲಿ 150 ಕಿಮೀ ಕ್ರಮಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.
ವೇಗದ ಚಾರ್ಜಿಂಗ್ :
ಈ ಹೊಸ ಎಲೆಕ್ಟ್ರಿಕಲ್ ಬೈಕ್ ಅನ್ನು ಇಕೋ, ಪವರ್ ಮತ್ತು ಸ್ಪೋರ್ಟ್ ನಂತಹ ಮೂರು ಮೋಡ್‌ಗಳಲ್ಲಿ ಓಡಿಸಬಹುದಾಗಿದೆ. ಇದರ ಪೋರ್ಟೇಬಲ್ ಸ್ಮಾರ್ಟ್ ಚಾರ್ಜರ್ ಸಹಾಯದಿಂದ ಸಾಮಾನ್ಯವಾಗಿ ಮನೆಗಳಲ್ಲಿ ಬಳಸುವ 16 ಆಂಪಿಯರ್ ಸಾಕೆಟ್‌ನಿಂದಲೇ ಚಾರ್ಜ್ ಮಾಡಬಹುದಾಗಿದೆ. ಈ ಬೈಕ್ 0 ದಿಂದ 80% ವರೆಗೆ ಚಾಜ್ ಆಗಲು ಕೇವಲ 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ : Redmi A1 and Redmi 11 Prime : ಶಿಯೋಮಿಯ ಬಹುನೀರಿಕ್ಷಿತ ರೆಡ್‌ಮಿ A1 ಮತ್ತು ರೆಡ್‌ಮಿ 11 ಪ್ರೈಮ್ ಸ್ಮಾರ್ಟ್‌ಫೋನ್ ಅನಾವರಣ
ಇದನ್ನೂ ಓದಿ : Realme C33 : ಭಾರತದಲ್ಲಿ ಬಿಡುಗಡೆಯಾಗುತ್ತಿರುವ ರಿಯಲ್‌ಮಿ C33 ಸ್ಮಾರ್ಟ್‌ಫೋನ್ : ಆಕರ್ಷಕ ಸ್ಯಾಂಡಿ ಗೋಲ್ಡ್ ಬಣ್ಣ ಇದರ ವಿಶೇಷತೆ
(Hop OXO electric bike launched in India fastest charging is its feature)