Hyundai Alcazar : ಅತಿ ಕಡಿಮೆ ಬೆಲೆಯ ಪ್ರೆಸ್ಟೀಜ್‌ ಎಕ್ಸಿಕ್ಯುಟಿವ್‌ ಬಿಡುಗಡೆ ಮಾಡಿದ ಹುಂಡೈ! ಇದರ ವಿಶೇಷತೆ ಮತ್ತು ಬೆಲೆ ಹೀಗಿದೆ…

ಹುಂಡೈ(Hyundai) ಮೋಟಾರ್‌ ಇಂಡಿಯಾ ತನ್ನ ಅಲ್ಕಾಝಾರ್‌ SUV (Hyundai Alcazar) ಯ ವೇರಿಯಂಟ್‌ ಲೈನ್‌–ಅಪ್‌ ನಲ್ಲಿ ಬದಲಾಣೆ ಮಾಡಿದೆ. ದಕ್ಷಿಣ ಕೋರಿಯಾದ ಕಾರು(Car) ತಯಾರಿಕಾ ಕಂಪನಿಯಾದ ಹುಂಡೈ ಹೊಸದಾದ ಪ್ರೆಸ್ಟೀಜ್‌ ಎಕ್ಸಿಕ್ಯುಟಿವ್‌ ಟ್ರಿಮ್‌ ಅನ್ನು ಪರಿಚಯಿಸಿದೆ. ಅದು ಈಗ ಅಲ್ಕಾಜರ್‌ ರೇಂಜ್‌ನಲ್ಲಿಯೇ ಅಧಿಕ ಮೊತ್ತದ ವೇರಿಯಂಟ್‌ ಆಗಿದೆ. ಹುಂಡೈನ ಅಲ್ಕಾಜರ್‌ ಪ್ರೆಸ್ಟೀಜ್‌ ಎಕ್ಸಿಕ್ಯುಟಿವ್‌ ಟ್ರಿಮ್‌ನ ಬೆಲೆಯು 15.84 ಲಕ್ಷದಿಂದ ಪ್ರಾರಂಭವಾಗುತ್ತದೆ.

ಅಲ್ಕಾಜರ್‌ ಪ್ರೆಸ್ಟೀಜ್‌ ಎಕ್ಸಿಕ್ಯುಟಿವ್‌ ಟ್ರಿಮ್‌ನ ಆರಂಭಿಕ ಬೆಲೆಯು 15.84 ಲಕ್ಷದಿಂದ 17.77 ಲಕ್ಷ ರೂಪಾಯಿಗಳವರೆಗೆ ಇದೆ. ಇದರ ಬೆಲೆಯು ಮೊದಲಿದ್ದ ಪ್ಲಾಟಿನಂ ವೇರಿಯಂಟ್‌ಗಿಂತ‌ 2.50 ಲಕ್ಷ ಕಡಿಮೆ ಆಗಿರುತ್ತದೆ. ಹುಂಡೈ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ SUV ಗಳ ದರವನ್ನು ಅಪ್ಡೇಟ್‌ ಮಾಡಿದೆ.

ವಿಶೇಷತೆಗಳು :

ವಿಶೇಷತೆಯ ಬಗ್ಗೆ ಹೇಳುವುದಾದರೆ ಹುಂಡೈ ಅಲ್ಕಾಜರ್‌ ಭಾರತದಲ್ಲಿ ಎರಡು ಇಂಜಿನ್‌ ಆಯ್ಕೆಯ ಜೊತೆಗೆ ಪರಿಚಯಿಸಿದೆ. 2.0 ಲೀಟರ್‌ ನ್ಯಾಚುರಲ್‌–ಎಸ್ಪಿರೇಟೆಡ್‌ ಪೆಟ್ರೋಲ್‌ ಇಂಜಿನ್‌ ಸಿಗುತ್ತದೆ, ಇದು 156 bnp ಮತ್ತು 191 Nm ಟಾರ್ಕ್‌ ಉತ್ಪತ್ತಿ ಮಾಡುತ್ತದೆ. ಇದರಲ್ಲಿ 1.5 ಲೀಟರ್‌ನ ಡೀಸಲ್‌ ಇಂಜಿನ್‌ ಸಹ ಇದೆ. ಅದು 113bnp ಮತ್ತು 250Nm ಟಾರ್ಕ್‌ ಉತ್ಪತ್ತಿ ಮಾಡುತ್ತದೆ. ಇವೆರಡೂ ಇಂಜಿನ್‌ಗಳು 6–ಸ್ಪೀಡ್‌ ಗೇರ್‌ ಇಂಜಿನ್‌ ನಲ್ಲಿ ದೊರೆಯುತ್ತದೆ ಮತ್ತು 6–ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಸಹ ಇದೆ.

ಅಲ್ಕಾಜರ್‌ನಲ್ಲಿ ಆಂಡ್ರಾಯ್ಡ್‌ ಆಟೋ, ಆಪಲ್‌ ಕಾರ್‌ಪ್ಲೇ ಮತ್ತು ಬ್ಲೂಲಿಂಕ್‌ ಕನೆಕ್ಟೆಡ್‌ ಟೆಕ್ನಾಲಿಜಿಯ ಜೊತೆಗೆ 10.25 ಇಂಚಿನ ಟಚ್‌ಸ್ಕ್ರೀನ್‌ ಸಿಸ್ಟಮ್‌ ಇದೆ. ಪನೋರಮಿಕ್‌ ಸನ್‌ರೂಫ್‌, 8–ಸ್ಪೀಯರ್‌ ಬಾಸ್‌ ಸೌಂಡ್‌ ಸಿಸ್ಟಮ್‌ ಇದರ ಇನ್ನೊಂದು ವೈಶಿಷ್ಟ್ಯವಾಗಿದೆ. ಹುಂಡೈ ಅಲ್ಕಾಜರ್‌ನ ಎಕ್ಸಶೋರೂಂನ ಬೆಲೆಯು 15.89 ಲಕ್ಷದಿಂದ 20.25 ಲಕ್ಷದವರೆಗೆ ಇದೆ. ಇದರ ನೇರ ಪ್ರತಿ ಸ್ಪರ್ಧಿ MG ಹೆಕ್ಟರ್‌ ಪ್ಲಸ್‌ ಮತ್ತು ಟಾಟಾ ಸಫಾರಿ ಆಗಿದೆ.

ಇದನ್ನೂ ಓದಿ : Top 5 Automatic Cars: 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಭಾರತದ ಟಾಪ್‌ 5 ಆಟೊಮೆಟಿಕ್‌ ಕಾರುಗಳು!

ಇದನ್ನೂ ಓದಿ : Railway Luggage Rules: ಎಚ್ಚರ ! ಲಗೇಜ್‌ ನಿಯಮ ಮರೆತರೆ ಹೊರಬೇಕಾದೀತು ‘ದಂಡದ ಹೊರೆ’!!

(Hyundai Alcazar new Prestige executive launched know the price and specification)

Comments are closed.